ಹೆಚ್.ಡಿ.ರೇವಣ್ಣ ಏನೇ ಪಿತೂರಿ ಮಾಡಿದ್ರೂ ನನ್ನ ಸೋಲಿಸಲು ಆಗಲ್ಲ ಬ್ಲಾಕ್‍ಮೇಲ್ ತಂತ್ರಕ್ಕೆ ನಾ ಹೆದರಲ್ಲ, ನೇರ ಸ್ಪರ್ಧೆಗೆ ಸಿದ್ಧರಾಗಿ: ಬಿ.ಪಿ. ಮಂಜೇಗೌಡ ಸವಾಲು
ಹಾಸನ

ಹೆಚ್.ಡಿ.ರೇವಣ್ಣ ಏನೇ ಪಿತೂರಿ ಮಾಡಿದ್ರೂ ನನ್ನ ಸೋಲಿಸಲು ಆಗಲ್ಲ ಬ್ಲಾಕ್‍ಮೇಲ್ ತಂತ್ರಕ್ಕೆ ನಾ ಹೆದರಲ್ಲ, ನೇರ ಸ್ಪರ್ಧೆಗೆ ಸಿದ್ಧರಾಗಿ: ಬಿ.ಪಿ. ಮಂಜೇಗೌಡ ಸವಾಲು

April 27, 2018

ಹಾಸನ: ಮಾಜಿ ಸಚಿವ ಹೆಚ್.ಡಿ. ರೇವಣ್ಣ ಏನೇ ಪಿತೂರಿ ಮಾಡಿದರೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ, ಇಂತಹ ಬ್ಲಾಕ್‍ಮೇಲ್ ತಂತ್ರಕ್ಕೆ ನಾನು ಹೆದರುವುದಿಲ್ಲ, ನೇರ ಸ್ಪರ್ಧೆಗೆ ಸಿದ್ಧರಾಗಿ ಎಂದು ಹೊಳೆನರಸೀಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇ ಗೌಡ ಸವಾಲು ಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಆರ್‍ಟಿಓ ಇಲಾಖೆಯಿಂದ 700 ಕೋಟಿ ರೂ. ಆಸ್ತಿ ಮಾಡಿದ್ದಾರೆ ಎಂದು ರೇವಣ್ಣ ಅವರು ನನ್ನ ಮೇಲೆ ಇಲ್ಲ ಸಲ್ಲದ ಆರೋಪವನ್ನು ಮಾಡುತ್ತಿದ್ದಾರೆ. ನನ್ನ ಮೇಲೆ ಸುಳ್ಳು ಹೇಳುವ ಇವರ ಆಸ್ತಿ ಕಾಣುತ್ತಿಲ್ಲವೇ? ಹಾಸನ ನಗರದಲ್ಲಿ ರಾಜಕಾಲುವೆ ಮೇಲೆ ಕಟ್ಟಲಾಗಿರುವ ಬೃಹತ್ ಕಟ್ಟಡ, ಸರಕಾರಿ ಹಣದಲ್ಲಿ ಸಿಮೆಂಟ್ ಗೋಡೆ ನಿರ್ಮಾಣ ಇವೆಲ್ಲಾ ಕಾಣುತ್ತಿಲ್ಲ. ಆದರೆ, ನನ್ನದು ಮಾತ್ರ ಇವರ ಕಣ ್ಣಗೆ ಬಿದ್ದಿದೆ ಎಂದು ತಿರುಗೇಟು ನೀಡಿದರು.

ಹವಾಲಾ ಎಂದರೆ ನನಗೆ ಅರ್ಥ ತಿಳಿ ದಿಲ್ಲ. ಆದರೆ, ಅದರ ಅನುಭವ ಇರು ವುದರಿಂದ ಇಂತಹ ಹೇಳಿಕೆ ಕೊಟ್ಟಿದ್ದಾರೆ. ಡೈರಿಯ ಹಾಲಿನ ಕ್ಯಾನ್‍ನಲ್ಲಿ ಹೆಂಡ, ಹಣ ತುಂಬಲಾಗುತ್ತಿರುವುದು ಮೊದಲು ಸಿಬಿಐಗಿಂತ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಆಗ್ರಹಿಸಿದರು. ನನ್ನ ಬಗ್ಗೆ ನಾಲ್ಕೈದು ಹೆಸರು ಹೇಳಿ ಬ್ಲಾಕ್‍ಮೇಲ್ ತಂತ್ರಗಾರಿಕೆ ಮಾಡಲಾಗುತ್ತಿದೆ. ಮತ್ತೊಮ್ಮೆ ಇಂತಹ ಹೇಳಿಕೆ ಮರುಕಳಿಸಿದರೇ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ನೇರವಾಗಿ ಎಚ್ಚರಿಕೆ ಗಂಟೆ ಭಾರಿಸಿದರು.
ಏನೇ ಆರೋಪ ಮಾಡುವುದಾದರೂ ದಾಖಲೆಯನ್ನು ಜೊತೆಯಲ್ಲಿ ಇಟ್ಟುಕೊಂಡು ಹೇಳಿಕೆ ಕೊಡಬೇಕು. ಬ್ರಿಟಿಷರ ಕಾಲದಲ್ಲಿ ಇದ್ದ ದಬ್ಬಾಳಿಕೆಯು ಈಗ ಹೊಳೆನರಸೀ ಪುರ ಕ್ಷೇತ್ರದಲ್ಲಿ ಜನರಿಗೆ ಹೆಚ್.ಡಿ.ರೇವಣ್ಣ ಬೆದರಿಕೆ ಹಾಕಿ ಮಾಡುವುದು ಬೇಡ. ಮೊದಲು ನನ್ನ ಮೇಲೆ ಬ್ಲಾಕ್‍ಮೇಲ್ ಮಾಡುವ ತಂತ್ರ ನಿಲ್ಲಿಸಿ, ನಿಮ್ಮೆಲ್ಲಾ ಹಗರಣಗಳು ಜನರಿಗೆ ತಿಳಿದಿದೆ. ಇನ್ನೊಬ್ಬರ ಬಗ್ಗೆ ತೇಜೋ ವಧೆ ಮಾಡುವುದನ್ನು ಬಿಟ್ಟು ನೇರ ಸ್ಪರ್ಧೆಗೆ ಸಿದ್ಧರಾಗಿ ಎಂದು ಯುದ್ಧ ಸಾರಿದರು.

ನಾನು ನಾಮಪತ್ರ ಸಲ್ಲಿಸುವಾಗ ಎಂದೂ ಕಾಣದ ಅಪಾರ ಜನ ಬೆಂಬಲ ದೊರಕಿತು. ಇನ್ನು ಹೊಳೆನರಸೀಪುರದಲ್ಲಿ 25 ಜನ ಗುಂಪಿನ ಜೊತೆ ಪ್ರಜ್ವಲ್ ರೇವಣ್ಣ ನಮ್ಮ ಮನೆ ಬಳಿ ಬಂದು ಲಾಂಗ್, ಮಚ್ಚು ತರಬೇಕಾಗುತ್ತದೆ ಎಂದು ಚುನಾವಣಾ ಅಧಿಕಾರಿಗಳ ಎದುರೇ ಧಮಕಿ ಹಾಕಿದರು. ನನ್ನ ಮೇಲೆ ಧಮಕಿ ಹಾಕುತ್ತಾರ ಹಾಕಲಿ. ನಾನು ಕೂಡ ಇಲ್ಲೇ ಹುಟ್ಟಿ ಬೆಳೆದವನು ಎಂದು ಟಾಂಗ್ ನೀಡಿದ ಅವರು ಈ ಬಗ್ಗೆ ಚುನಾವಣಾಧಿಕಾರಿಗಳಿಗೆ ದೂರು ಕೊಡು ವುದಾಗಿ ಎಚ್ಚರಿಸಿದರು. ಪತ್ರಿಕಾಗೋಷ್ಠಿ ಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್, ಹಾಸನ ಕ್ಷೇತ್ರದ ಅಭ್ಯರ್ಥಿ ಹೆಚ್.ಕೆ. ಮಹೇಶ್, ಮುಖಂಡ ವಾಸು ದೇವ್ ಇತರರು ಉಪಸ್ಥಿತರಿದ್ದರು.

Translate »