ಮತಬೇಟೆಗೆ ಸಾಮಾಜಿಕ ಜಾಲತಾಣಗಳ ಮೊರೆ ಹೋದ ಅಭ್ಯರ್ಥಿಗಳ ಬೆಂಬಲಿಗರು
ಚಾಮರಾಜನಗರ

ಮತಬೇಟೆಗೆ ಸಾಮಾಜಿಕ ಜಾಲತಾಣಗಳ ಮೊರೆ ಹೋದ ಅಭ್ಯರ್ಥಿಗಳ ಬೆಂಬಲಿಗರು

April 27, 2018

ಚಾಮರಾಜನಗರ: ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಇನ್ನು ಕೇವಲ 15 ದಿನ ಬಾಕಿ ಇದೆ. ಜಿಲ್ಲೆಯ ಎಲ್ಲಾ 4 ವಿಧಾನಸಭಾ ಕ್ಷೇತ್ರಗಳ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿ ಗಳು ಹಾಗೂ ರಾಜಕೀಯ ಮುಖಂಡರು ಉರಿ ಬಿಸಿಲನ್ನು ಲೆಕ್ಕಿಸದೇ ಮನೆ ಮನೆಗೆ ಭೇಟಿ ನೀಡಿ ಪ್ರಚಾರದಲ್ಲಿ ನಿರತರಾಗಿ ದ್ದಾರೆ. ಇದಲ್ಲದೇ ಮತಬೇಟೆಗೆ ಅಭ್ಯರ್ಥಿ ಗಳ ಬೆಂಬಲಿಗರು ಹಾಗೂ ರಾಜಕೀಯ ಮುಖಂಡರು ಸಾಮಾಜಿಕ ಜಾಲ ತಾಣಗಳ ಮೊರೆ ಹೋಗಿದ್ದಾರೆ.

ಕೆಲವು ಅಭ್ಯರ್ಥಿಗಳ ಬೆಂಬಲಿಗರು ತಮಗೆ ಮತ ನೀಡುವಂತೆ ಫೇಸ್‍ಬುಕ್, ವಾಟ್ಸ್‍ಆಪ್ ಸೇರಿದಂತೆ ಇನ್ನಿತರ ಜಾಲ ತಾಣಗಳ ಮೂಲಕ ಮನವಿ ಮಾಡುತ್ತಿ ದ್ದಾರೆ. ಅಭ್ಯರ್ಥಿಗಳ ಬೆಂಬಲಿಗರು, ರಾಜ ಕೀಯ ಮುಖಂಡರೂ ಸಹ ತಮ್ಮ ಅಭ್ಯರ್ಥಿ ಯನ್ನು, ತಮ್ಮ ಪಕ್ಷವನ್ನು ಚುನಾವಣೆ ಯಲ್ಲಿ ಬೆಂಬಲಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿರು ವುದು ಕಂಡು ಬಂದಿದೆ. ದಿನ ಕಳೆದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಹೆಚ್ಚಾಗುತ್ತಿರುವುದು ಬೆಳಕಿಗೆ ಬಂದಿದೆ.

ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿ ಗಳು, ರಾಜಕೀಯ ಮುಖಂಡರು, ಅಭ್ಯರ್ಥಿ ಗಳ ಕಟ್ಟ್ಟಾ ಬೆಂಬಲಿಗರು ಪ್ರತಿನಿತ್ಯ ಹತ್ತಾರು ಗ್ರಾಮಗಳಿಗೆ ಭೇಟಿ ನೀಡಿ ವ್ಯಾಪಕ ಪ್ರಚಾ ರದಲ್ಲಿ ನಿರತರಾಗಿದ್ದಾರೆ. ಇವರ್ಯಾರು ಉರಿ ಬಿಸಿಲನ್ನೂ ಸಹ ಗಣನೆಗೆ ತೆಗೆದು ಕೊಳ್ಳುತ್ತಿಲ್ಲ. ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ಪ್ರಚಾರ ನಡೆಸಲಾಗು ತ್ತಿದೆ. ಈ ಮೂಲಕ ಚುನಾವಣೆಯಲ್ಲಿ ಗೆದ್ದೇ ತೀರಬೇಕು ಎಂದು ಅಭ್ಯರ್ಥಿಗಳು ಹಾಗೂ ರಾಜಕೀಯ ಮುಖಂಡರು ತೀರ್ಮಾನಿಸಿ, ಮತ ಬೇಟೆಯಲ್ಲಿ ತೊಡಗಿರುವುದು ಜಿಲ್ಲೆಯಾದ್ಯಂತ ಕಂಡು ಬರುತ್ತದೆ.
ಕಾಲ ಬದಲಾದಂತೆ ತಂತ್ರಜ್ಞಾನವೂ ಸಹ ಸಾಕಷ್ಟು ಮುಂದುವರೆದಿದೆ. ವಿದ್ಯಾವಂತ ಮತದಾರರ ಮನ ಗೆಲ್ಲಲು ಕೆಲವು ಅಭ್ಯರ್ಥಿ ಗಳ ಬೆಂಬಲಿಗರು ಹಾಗೂ ರಾಜಕಾರಣ ಗಳು ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದಾರೆ. ಫೇಸ್‍ಬುಕ್, ವಾಟ್ಸ್‍ಆಪ್ ಸೇರಿದಂತೆ ಇನ್ನಿತರ ಜಾಲತಾಣಗಳ ಮೂಲಕ ಮತಯಾಚಿಸಿದ್ದಾರೆ. ಮೇ 12ರಂದು ನಡೆಯಲಿರುವ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಬೆಂಬಲಿಸುವಂತೆ, ಈ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.

ಭಾರೀ ಜನಸ್ತೋಮದ ನಡುವೆ ಪ್ರಚಾರ ದಲ್ಲಿ ನಿರತರಾಗಿರುವ ಭಾವಚಿತ್ರಗಳ ಅಭ್ಯರ್ಥಿಯ ಭಾವಚಿತ್ರ, ಚಿಹ್ನೆಯನ್ನು ಪೋಸ್ಟ್ ಮಾಡಲಾಗಿದೆ. ಇದಲ್ಲದೇ ತಮ್ಮ ಅಭ್ಯರ್ಥಿಯನ್ನು ಏಕೆ ಬೆಂಬಲಿಸಬೇಕು. ಗೆದ್ದರೆ, ಏನೇನು ಅಭಿವೃದ್ಧಿ ಕೆಲಸ ಮಾಡು ತ್ತೇವೆ. ತಮ್ಮ ಗುರಿಗಳೇನು ಎಂಬುದರ ಬಗ್ಗೆಯೂ ಬರೆಯಲಾಗಿದೆ. ಕೆಲವು ಸಂದರ್ಭಗಳಲ್ಲಿ ವಾಯ್ಸ್ ಮೆಸೆಜ್‍ಗಳನ್ನು ಸಹ ಕಳುಹಿಸಲಾಗುತ್ತಿದೆ. ದಿನ ಕಳೆದು ಚುನಾವಣಾ ಹತ್ತಿರ ಆಗುತ್ತಿದ್ದಂತೆಯೇ ಪ್ರಚಾರ ಕಾರ್ಯವೂ ಸಹ ಮತ್ತಷ್ಟು ಬಿರುಸುಗೊಳ್ಳಲಿದೆ. ಅದೇ ರೀತಿ ಸಾಮಾ ಜಿಕ ಜಾಲತಾಣಗಳ ಮೂಲಕವೂ ಮತ ಬೇಟೆ ಆಡುವುದು ಮತ್ತಷ್ಟು ಹೆಚ್ಚಾಗು ವುದನ್ನು ತಳ್ಳಿ ಹಾಕುವಂತಿಲ್ಲ.

Translate »