ಚಾಮರಾಜನಗರ: 2018-19ನೇ ಸಾಲಿನ ಶೈಕ್ಷಣ ಕ ವರ್ಷದ ದ್ವಿತೀಯ ಪಿಯುಸಿ ತರಗತಿಗಳು ಮೇ 2ರಿಂದ ಪ್ರಾರಂಭ ವಾಗಿರುವ ಹಿನ್ನಲೆಯಲ್ಲಿ ಪಿಯು ಕಾಲೇಜಿ ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಒಂದು ತಿಂಗಳು ಉಚಿತ ವಿದ್ಯಾರ್ಥಿ ಪಾಸನ್ನು ನೀಡಲು ಕೆಎಸ್ಆರ್‌ಟಿಸಿ ವ್ಯವ ಸ್ಥಾಪಕ ನಿರ್ದೇಶಕರು ಅನುಮತಿ ನೀಡಿ ದ್ದಾರೆ. ಕಳೆದ ವರ್ಷದ ಬಸ್‍ಪಾಸ್ ಅಥವಾ ಕಾಲೇಜಿನ ಗುರುತಿನ ಚೀಟಿಯನ್ನು ನೀಡಿ ಉಚಿತವಾಗಿ ವಿದ್ಯಾರ್ಥಿಗಳು ಬಸ್‍ನಲ್ಲಿ ಪ್ರಯಾಣ ಸಬಹುದಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಕಾಲೇಜು ಪ್ರಾಂಶುಪಾಲರು ಹಾಗೂ ಉಪನ್ಯಾಸಕರಿಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ವಿ.ಆರ್. ಶ್ಯಾಮಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.