ಸಂತೇಮರಹಳ್ಳಿ: ಎ.ಆರ್.ಕೃಷ್ಣಮೂರ್ತಿ ಮತಯಾಚನೆ
ಚಾಮರಾಜನಗರ

ಸಂತೇಮರಹಳ್ಳಿ: ಎ.ಆರ್.ಕೃಷ್ಣಮೂರ್ತಿ ಮತಯಾಚನೆ

May 6, 2018

ಸಂತೇಮರಹಳ್ಳಿ:  ಕೊಳ್ಳೇಗಾಲ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಅವರು ಪಕ್ಷದ ಪದಾಧಿಕಾರಿಗಳು ಹಾಗೂ ಮುಖಂಡ ರೊಂದಿಗೆ ಸಂತೇಮರಹಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಶನಿವಾರ ಬಿರು ಸಿನ ಮತ ಪ್ರಚಾರ ನಡೆಸಿದರು.

ಸಂತೇಮರಹಳ್ಳಿಯ ಮಹದೇಶ್ವರ ದೇವಸ್ಥಾನದಿಂದ ಕಾಲ್ನಡಿಗೆಯಲ್ಲಿ ಮತ ಯಾಚನೆ ಆರಂಭಿಸಿದರು. ಈ ವೇಳೆ ಕಾರ್ಯಕರ್ತರು ಎ.ಆರ್.ಕೃಷ್ಣಮೂರ್ತಿ ಅವರಿಗೆ ಹೂವಿನ ಹಾರವನ್ನು ಹಾಕಿ ಸ್ವಾಗತಿಸಿದರು. ತಮಟೆ ಹಾಗೂ ಪಟಾಕಿ ಸಿಡಿಸಿ ಘೋಷಣೆ ಕೂಗಿದರು.

ಬಳಿಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಕೊಳ್ಳೇಗಾಲ ವಿಧಾನಸಭಾ ಮೀಸಲು ಕ್ಷೇತ್ರ ಕಾಂಗ್ರೆಸ್‍ನ ಭದ್ರ ಕೋಟೆಯಾಗಿದ್ದು, ಈ ಬಾರಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ವರಿಷ್ಠರು ತೀರ್ಮಾನಿಸಿ ನನಗೆ ಟಿಕೆಟ್ ನೀಡಿದ್ದಾರೆ ಎಂದರು.

ಈ ಹಿಂದೆ ನನ್ನ ತಂದೆ ಬಿ.ರಾಚಯ್ಯ ಅವರು ರಾಜಕೀಯದಲ್ಲಿ ಸಕ್ರಿಯವಾಗಿ ದುಡಿದು ಕೊಳ್ಳೇಗಾಲ ಮೀಸಲು ಕ್ಷೇತ್ರಕ್ಕೆ ಶಾಶ್ವತವಾದ ಅಭಿವೃದ್ಧಿ ಯೋಜನೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅದನ್ನು ಮನಗಂಡು ಮತದಾರರು ಈ ಬಾರಿ ನನಗೆ ಬೆಂಬಲ ನೀಡಬೇಕು. ಆ ಮೂಲಕ ನಿಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಸಂತೇಮರಹಳ್ಳಿ, ಕಾವುದವಾಡಿ, ಬಸ ವಟ್ಟಿ, ತೆಳ್ಳನೂರು, ಹೆಗ್ಗವಾಡಿಪುರ, ದೇಶ ವಳ್ಳಿ ಸೇರಿದಂತೆ ಹಲವು ಗ್ರಾಮ ಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ಈ ವೇಳೆ ಶಾಸಕ ಎಸ್.ಜಯಣ್ಣ, ಮಾಜಿ ಶಾಸಕ ಎಸ್.ಬಾಲರಾಜು, ಜಿಲ್ಲಾ ಪಂಚಾ ಯಿತಿ ಉಪಾಧ್ಯಕ್ಷ ಜೆ. ಯೋಗೇಶ್, ಸದಸ್ಯ ಕೆ.ಪಿ.ಸದಾಶಿವಮೂರ್ತಿ, ಮುಖಂಡರಾದ ಕಿನಕಹಳ್ಳಿ ರಾಚಯ್ಯ, ಡಿ.ಎನ್.ನಟರಾಜು, ಆಲ್ದೂರು ರಾಜಶೇಖರ್ ಮೂರ್ತಿ, ಶಿವ ಶಂಕರ್, ಮೂರ್ತಿ, ಸಿದ್ದಲಿಂಗಸ್ವಾಮಿ, ಡಿ.ಪಿ.ಪ್ರಕಾಶ್, ಡಿ.ಪಿ.ರಾಜು, ಎಂ.ಬಿ. ಕುಮಾರ್, ಶಿವರಾಜು, ಪಿ.ರಾಜೇಶ್, ಗುರು ಪಾದ, ಗುರುರಾಜಚಾರ್, ಮಹ ದೇವಸ್ವಾಮಿ, ನಿಂಗರಾಜು, ಕಮರವಾಡಿ ರೇವಣ್ಣ, ಉಮ್ಮತ್ತೂರು ಶಿವಣ್ಣ, ಬಸವಟ್ಟಿ ವಿಲಿಯಂ, ಶಿವಚಂದ್ರು, ಪಾಪು, ಮಧು ಹಾಜರಿದ್ದರು.

Translate »