ಜಿಲ್ಲೆಯ 4 ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಪ್ರಕಟ ಜಿಲ್ಲೆಯಲ್ಲಿ ಒಟ್ಟು 8,30,887 ಮತದಾರರು
ಚಾಮರಾಜನಗರ

ಜಿಲ್ಲೆಯ 4 ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಪ್ರಕಟ ಜಿಲ್ಲೆಯಲ್ಲಿ ಒಟ್ಟು 8,30,887 ಮತದಾರರು

May 5, 2018

ಚಾಮರಾಜನಗರ: ಇದೇ ತಿಂಗಳ 12ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಜಿಲ್ಲೆಯ 4 ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದೆ. ಜಿಲ್ಲೆಯಲ್ಲಿ ಒಟ್ಟು 830887 ಮತದಾರರು ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ.

ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 207603 ಮತದಾರರು, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 211522 ಮತದಾರರು, ಚಾಮರಾಜನಗರ ಕ್ಷೇತ್ರದಲ್ಲಿ ಒಟ್ಟು 206146 ಮತ ದಾರರು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 205616 ಮತದಾರರು (ಒಟ್ಟು 830887) ಹಕ್ಕು ಚಲಾ ಯಿಸಲಿದ್ದಾರೆ. ಒಟ್ಟು 830887 ಮತದಾರರಲ್ಲಿ 414366 ಪುರುಷ ಮತ ದಾರರು, 416460 ಮಹಿಳಾ ಮತದಾರರು ಹಾಗೂ 61 ಇತರೆ ಮತದಾರರು ಇದ್ದಾರೆ. ಮಹಿಳಾ ಮತ ದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ವಿಶೇಷ.

2013ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 749930 ಮತದಾರರು ಇದ್ದರು. ಈ ಪೈಕಿ 379833 ಪುರುಷ ಮತದಾರರು, 370076 ಮಹಿಳಾ ಮತದಾರರು ಹಾಗೂ 21 ಇತರೆ ಮತದಾರರು ಇದ್ದರು. ಪ್ರಸ್ತುತ 2018ರ ವಿಧಾನಸಭಾ ಚುನಾವಣೆಗೂ 2013ರ ಚುನಾವಣೆಗೂ ಹೋಲಿಸಿದರೆ ಒಟ್ಟು 80957 ಹೊಸ ಮತದಾರರು ಹೆಚ್ಚು ಇದ್ದಾರೆ. ಈ ಪೈಕಿ 34533 ಪುರುಷ ಮತದಾರರು, 46384 ಮಹಿಳಾ ಮತದಾರರು ಹಾಗೂ ಇತರೆ 40 ಮತದಾರರು ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆ ಆಗಿದ್ದಾರೆ. ಇಲ್ಲೂ ಸಹ ಪುರುಷ ಮತದಾರರಗಿಂತ ಹೆಚ್ಚು 11851 ಮಹಿಳಾ ಮತದಾರರು ಹೊಸದಾಗಿ ಸೇರ್ಪಡೆ ಆಗಿದ್ದಾರೆ.

ಚಾಮರಾಜನಗರ ಕ್ಷೇತ್ರ: ಈ ಕ್ಷೇತ್ರದಲ್ಲಿ ಅಂತಿಮವಾಗಿ ಒಟ್ಟು 206146 ಮತದಾರರು ಇದ್ದಾರೆ. ಇದರಲ್ಲಿ 101659 ಪುರುಷರು, 104471 ಮಹಿಳೆಯರು ಹಾಗೂ 16 ಇತರೆ ಮತದಾರರು ಆಗಿ ದ್ದಾರೆ. ಕಳೆದ 2013ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ 186856 ಮತದಾರರು ಇದ್ದರು. ಹೊಸದಾಗಿ 19290 ಮತದಾರರು ಸೇರ್ಪಡೆ ಆಗಿದ್ದಾರೆ.

ಗುಂಡ್ಲುಪೇಟೆ ಕ್ಷೇತ್ರ: ಈ ಕ್ಷೇತ್ರದಲ್ಲಿ ಅಂತಿಮವಾಗಿ 205616 ಮತದಾರರು ಇದ್ದಾರೆ. ಇದರಲ್ಲಿ 101940 ಪುರುಷರು, 103660 ಮಹಿಳೆಯರು ಹಾಗೂ 16 ಇತರೆ ಮತದಾರರು ಆಗಿದ್ದಾರೆ. ಕಳೆದ 2013ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಒಟ್ಟು 190425 ಮತದಾರರು ಇದ್ದರು. ಹೊಸದಾಗಿ 15191 ಮತದಾರರು ಹೆಚ್ಚುವರಿಯಾಗಿ ಸೇರ್ಪಡೆ ಆಗಿದ್ದಾರೆ.

ಜಿಲ್ಲೆಯಲ್ಲಿ ಹೊಸ ಮತದಾರರ ನೋಂದಣ ಕಾರ್ಯ ಕ್ರಮಬದ್ಧವಾಗಿ ನಡೆದ ಕಾರಣ ಜಿಲ್ಲೆಯಲ್ಲಿ 80957 ಮತದಾರರು ಹೆಚ್ಚಾಗಿದ್ದಾರೆ. 18 ವರ್ಷ ತುಂಬಿದವರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣ ಮಾಡಿಸಿದ್ದಾರೆ. ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರ್ಪಡೆ ಮಾಡಿ ನಾವು ಸಹ ಮತ ದಾನದಲ್ಲಿ ಪಾಲ್ಗೊಳ್ಳಬೇಕು ಎಂಬ ಅರಿವು ಜನರಿಗೆ ಬಂದ ಹಿನ್ನೆಲೆಯಲ್ಲಿ ಹೊಸ ಮತದಾರರು ಹೆಚ್ಚಿಗೆ ಆಗಿದ್ದಾರೆ. – ಬಿ.ಬಿ.ಕಾವೇರಿ, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ

ಕೊಳ್ಳೇಗಾಲ ಕ್ಷೇತ್ರ: ಈ ಕ್ಷೇತ್ರದಲ್ಲಿ ಅಂತಿಮವಾಗಿ ಒಟ್ಟು 211522 ಮತದಾರರು ಇದ್ದಾರೆ. ಇದಲ್ಲಿ 105129 ಪುರುಷರು, 106380 ಮಹಿಳೆಯರು ಹಾಗೂ 13 ಇತರೆ ಮತದಾರರು ಇದ್ದಾರೆ. ಕಳೆದ 2013ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಒಟ್ಟು 191562 ಮತದಾರರು ಇದ್ದರು. ಹೊಸದಾಗಿ 19960 ಮತದಾರರು ಸೇರ್ಪಡೆ ಆಗಿದ್ದಾರೆ.

ಹನೂರು ಕ್ಷೇತ್ರ: ಈ ಕ್ಷೇತ್ರದಲ್ಲಿ ಅಂತಿಮವಾಗಿ ಒಟ್ಟು 207603 ಮತದಾರರು ಇದ್ದಾರೆ. ಇದರಲ್ಲಿ 105638 ಪುರುಷರು 101949 ಮಹಿಳೆಯರು ಹಾಗೂ 16 ಇತರೆ ಮತದಾರರು ಇದ್ದಾರೆ. ಕಳೆದ 2013ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಒಟ್ಟು 181087 ಮತದಾರರು ಇದ್ದರು. ಹೊಸದಾಗಿ 26516 ಮತದಾರರು ಸೇರ್ಪಡೆ ಆಗಿದ್ದಾರೆ.

Translate »