ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ಮತದಾನ ಜಾಗೃತಿ: ಡಿಸಿಯಿಂದ ಜಾಗೃತಿ ಓಟ, ಮಾನವ ಸರಪಳಿ ರಚನೆ, ಮಾನವ ನಿರ್ಮಿತ ಕರ್ನಾಟಕ ನಕ್ಷೆ ಪ್ರದರ್ಶನ
ಹಾಸನ

ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ಮತದಾನ ಜಾಗೃತಿ: ಡಿಸಿಯಿಂದ ಜಾಗೃತಿ ಓಟ, ಮಾನವ ಸರಪಳಿ ರಚನೆ, ಮಾನವ ನಿರ್ಮಿತ ಕರ್ನಾಟಕ ನಕ್ಷೆ ಪ್ರದರ್ಶನ

May 9, 2018

ಹಾಸನ: ಜಿಲ್ಲಾಡಳಿತ, ಜಿಪಂ ಸೇರಿದಂತೆ ಇತರೆ ಇಲಾಖೆ, ಸಂಘಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಬೃಹತ್ ಮತದಾನ ಜಾಗೃತಿ ಕಾರ್ಯಕ್ರಮ ದಲ್ಲಿ ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್ ಸೇರಿ ದಂತೆ ವಿವಿಧ ಅಧಿಕಾರಿಗಳು ಪಾಲ್ಗೊಂಡು ಗಮನ ಸೆಳೆದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಜಿಪಂ ಪದವಿ ಪೂರ್ವ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು, ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಇಂದು ವಿಶಿಷ್ಟ ರೀತಿಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಜಾಫರ್ ಅವರು, ಜಿಪಂ ಸಿಇಓ ಜಿ.ಜಗದೀಶ್, ಡಿಡಿಪಿಐ ಕಾಂತರಾಜು ಸೇರಿದಂತೆ ವಿವಿಧ ಇಲಾಖಾಧಿಕಾರಿ ಗಳೊಂದಿಗೆ ಪಾಲ್ಗೊಂಡು ಕ್ರೀಡಾಂಗಣ ದಲ್ಲಿ ಜಾಗೃತಿ ಓಟಕ್ಕೆ ಚಾಲನೆ ನೀಡಿ ದಲ್ಲದೆ, ತಾವೂ ಒಂದು ಸುತ್ತು ವಿದ್ಯಾರ್ಥಿಗಳ ಜೊತೆ ಓಡುವ ಮೂಲಕ ಸಾಥ್ ನೀಡಿದರು.

ಕಾರ್ಯಕ್ರಮದಲ್ಲಿ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು, ಪ್ರಾಂಶು ಪಾಲರು, ಉಪನ್ಯಾಸಕರು, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರ, ಸರ್ಕಾರಿ/ ಖಾಸಗಿ ಐಟಿಐ ವಿದ್ಯಾರ್ಥಿಗಳು ಒಳಗೊಂ ಡಂತೆ 5 ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರತ್ಯಕ್ಷ ಸಾಕ್ಷಿಯಾದರು. ಕಾರ್ಯಕ್ರಮ ಉದ್ದೇಶಿಸಿ ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್, ಜಿಪಂ ಸಿಇಓ ಜಗದೀಶ್ ಮಾತನಾಡಿದರು.

ಮಾನವ ಸರಪಳಿ ರಚನೆ: ಕ್ರೀಡಾಂಗಣದ ಉದ್ದಗಲಕ್ಕೂ ಮಾನವ ಸರಪಳಿ ರಚಿಸುವ ಮೂಲಕ ಮತದಾನ ಮಹತ್ವ ಸಾರಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಕರ್ನಾಟಕದ ನಕ್ಷೆ ನಿರ್ಮಾಣ: ನಂತರ ಎಲ್ಲಾ ಕಾಲೇಜು ವಿದ್ಯಾರ್ಥಿಗಳು ಸೇರಿ ಕರ್ನಾಟಕದ ನಕ್ಷೆಯಾಕಾರದಲ್ಲಿ ನಿಂತು ತಾವೆಲ್ಲರೂ ಪ್ರಜ್ಞಾವಂತರಾಗಿ ಕೈ ಜೋಡಿಸಿದರೆ ನಮ್ಮ ರಾಜ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಬಹುದೆಂಬ ಸಂದೇಶ ಸಾರಿದರು. ಈ ದೃಶ್ಯವನ್ನು ಡ್ರೋನ್ ಕ್ಯಾಮರಾ ಮೂಲಕ ಸೆರೆ ಹಿಡಿಯಲಾಯಿತು.

ಮತಯಂತ್ರ ಪ್ರಾತ್ಯಕ್ಷಿಕೆ: ಮಾಸ್ಟರ್ ಟ್ರೈನರ್‍ಗಳಿಂದ ಎಲ್ಲಾ ಕಾಲೇಜು ವಿದ್ಯಾರ್ಥಿ ಗಳು ಮತ್ತು ಅಂಗನವಾಡಿ ಕಾರ್ಯಕರ್ತೆ ಯರಿಗೆ ವಿದ್ಯುನ್ಮಾನ ಮತಯಂತ್ರಗಳು ಹಾಗೂ ವಿವಿ ಪ್ಯಾಟ್ ಬಳಕೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ನೆರೆದಿದ್ದ ವಿದ್ಯಾರ್ಥಿಗಳಿಗೆ ಬಿಸಿಲ ಧಗೆ ತಂಪು ಮಾಡಲು ಜಿಪಂ ವತಿಯಿಂದ ಕುಡಿಯಲು ಮಜ್ಜಿಗೆ ವಿತರಿ ಸಲಾಯಿತು. ಇದೇ ವೇಳೆ ಕಾಲೇಜು ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳು, ಇತರ ಅಧಿಕಾರಿಗಳೊಂದಿಗೆ ಫೋಟೋ ಕ್ಲಿಕ್ಕಿಸಿ ಕೊಂಡು ಸಂಭ್ರಮಿಸಿದರು.

ನಂತರ ಜಿಲ್ಲಾಧಿಕಾರಿಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮತ್ತು ನಗರ ಸಭೆಯ ಮತದಾರರ ಜಾಗೃತಿ ವಾಹನಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಮತದಾರರ ಜಾಗೃತಿ ಕಾರ್ಯಕ್ರಮ ದಲ್ಲಿ ಜಿಪಂ ಯೋಜನಾ ನಿರ್ದೇಶಕ ಸಿದ್ದರಾಜು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವಾಮರಾಜು, ಹಾಸನ ತಾಪಂ ಕಾರ್ಯ ನಿರ್ವಹಣಾಧಿಕಾರಿ ದೇವರಾಜೇಗೌಡ, ವಾರ್ತಾಧಿಕಾರಿ ವಿನೋದ್ ಚಂದ್ರ, ಅನನ್ಯ ಟ್ರಸ್ಟ್‍ನ ಜಯಶ್ರೀ, ಕಲಾವಿದರಾದ ದೇಸಾಯಿ, ಸ್ವೀಪ್ ಸಮಿತಿಯ ಎಲ್ಲಾ ಸದಸ್ಯರು ಮತ್ತು ಸಿಬ್ಬಂದಿ ಮತ್ತಿತರರಿದ್ದರು.

Translate »