ಜಿಲ್ಲೆಯ 7 ಕ್ಷೇತ್ರದಲ್ಲೂ ಕಾಂಗ್ರೆಸ್‍ಗೆ ಗೆಲುವು ಶಾಸಕ ಹೆಚ್.ಎಂ. ವಿಶ್ವನಾಥ್ ವಿಶ್ವಾಸ
ಹಾಸನ

ಜಿಲ್ಲೆಯ 7 ಕ್ಷೇತ್ರದಲ್ಲೂ ಕಾಂಗ್ರೆಸ್‍ಗೆ ಗೆಲುವು ಶಾಸಕ ಹೆಚ್.ಎಂ. ವಿಶ್ವನಾಥ್ ವಿಶ್ವಾಸ

May 9, 2018

ಹಾಸನ: ಈ ಬಾರಿಯೂ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಚನೆಯಾಗಲಿದ್ದು, ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳು 7 ಕ್ಷೇತ್ರದಲ್ಲೂ ಜಯ ಗಳಿಸುವರು ಎಂದು ಮಾಜಿ ಶಾಸಕ ಹೆಚ್. ಎಂ.ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ಗೆ ಜನ ಸ್ಪಂದನೆ ಇದ್ದು, ವಿರೋಧ ಪಕ್ಷದವರೂ ಎಷ್ಟೇ ಹಣ ಖರ್ಚು ಮಾಡಿದರೂ ಕಾಂಗ್ರೆಸ್ ಗೆಲುವು ತಪ್ಪಿಸಲು ಸಾಧ್ಯವಿಲ್ಲ. ಬಿಜೆಪಿ-ಜೆಡಿಎಸ್ ಒಳ ಒಪ್ಪಂದವನ್ನು ಜನ ಒಪ್ಪುವುದಿಲ್ಲ. ರಾಜ್ಯ ದಲ್ಲಿ 130 ಸ್ಥಾನ ಗೆದ್ದು ಸಿಎಂ ಸಿದ್ದರಾಮಯ್ಯ ನಾಯಕತ್ವದಲ್ಲಿ ಮತ್ತೆ ಸರ್ಕಾರ ರಚನೆ ಯಾಗಲಿದೆ. ಯಾವ ಕಾರಣಕ್ಕೂ ವಿಧಾನ ಸಭೆ ಅತಂತ್ರವಾಗುವುದಿಲ್ಲ ಎಂದರು.

ಈ ಬಾರಿ ಚುನಾವಣೆಯಲ್ಲಿ ಸಕಲೇಶ ಪುರದಲ್ಲಿ ಅನಿರೀಕ್ಷಿತ ಫಲಿತಾಂಶ ಲಭ್ಯ ವಾಗಲಿದೆ. ಹೊಳೆನರಸೀಪುರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆದ್ದರೂ ಆಶ್ಚರ್ಯ ಪಡ ಬೇಕಾಗಿಲ್ಲ. ಜಿಲ್ಲೆಯ ಜನರು ಬದ ಲಾವಣೆ ಬಯಸಿ ದ್ದಾರೆ. ಬೇಲೂರಿ ನಲ್ಲಿ ಏನೇ ತೊಡಕು ಗಳಿದ್ದರೂ ಕಾಂಗ್ರೆಸ್ ಅದನ್ನು ಸರಿಪಡಿಸಿ ಕೊಂಡು ಮುಂದೆ ಸಾಗುತ್ತಿದೆ. ಇನ್ನು ಅರಸೀಕೆರೆಯಲ್ಲಿ ರಾಜಕೀಯ ಧೃವೀಕರಣ ವಾಗಿದ್ದು, ಕಾಂಗ್ರೆಸ್‍ಗೆ ಅನುಕೂಲ ವಾಗಿದೆ. ಉಳಿದ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಗಿದೆ ಎಂದು ಹೇಳಿದರು.

ಸಕಲೇಶಪುರದಲ್ಲಿ ಜೆಡಿಎಸ್ ಶಾಸಕರು ಕಳೆದ 10 ವರ್ಷಗಳಿಂದ ಅಂಬೇಡ್ಕರ್ ಭವನವನ್ನು ಪೂರ್ಣಗೊಳಿಸಿಲ್ಲ, ಜ್ವಲಂತ ಸಮಸ್ಯೆಯಾದ ಕಾಡಾನೆ ಹಾವಳಿ ತಡೆಗೆ ನಾನು ಅಧಿಕಾರದಲ್ಲಿ ಇದ್ದಾಗ ಆನೆ ಕಾರಿಡಾರ್ ಯೋಜನೆ ರೂಪಿಸಿz್ದÉ. ಆದರೆ ಶಾಸಕರು ಆನೆ ಕಾರಿಡಾರ್ ಯೋಜನೆಗೆ ಬಗ್ಗೆ ಯಾವುದೇ ಪ್ರಯತ್ನ ಮಾಡಲಿಲ್ಲ. ಶಾಸಕರ ಅವಧಿಯಲ್ಲಿ 32 ಮಂದಿ ಜನರು ಕಾಡಾನೆ ದಾಳಿಯಿಂದ ಸಾವನ್ನಪ್ಪಿದ್ದರೆ, 9 ಕಾಡಾನೆಗಳು ಸಾವನ್ನಪ್ಪಿವೆ. ಆದರೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಮಿನಿ ವಿಧಾನಸೌಧದ 2ನೇ ಹಂತದ ಕಾಮಗಾರಿಗೆ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ದೂರಿದರು.

ಜೆಡಿಎಸ್‍ನ ಒಳಮರ್ಮಗಳು ನಮಗೆ ಮೊದಲಿನಿಂದಲೂ ಗೊತ್ತಿದೆ. ಪ್ರಣಾಳಿಕೆ ಯನ್ನು ಯಾರು ಈಡೇರಿಸುತ್ತಾರೋ ಅವರನ್ನು ಬೆಂಬಲಿಸುತ್ತೇವೆ ಎಂಬ ಹೇಳಿಕೆಯ ಒಳಮರ್ಮ ಜನರಿಗೆ ಅರ್ಥವಾಗಲಿದೆ. ಪ್ರಧಾನಿ ಮೋದಿ ಜೊತೆ ಮೊದಲೇ ಒಪ್ಪಂದ ಮಾಡಿ ಕೊಂಡಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಬಲೆಗೆ ಈ ಬಾರಿ ಮತದಾರರು ಬೀಳುವುದಿಲ್ಲ ಎಂದು ಚಾಟಿ ಬೀಸಿದರಲ್ಲದೆ, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಬರುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.

ಪತ್ರಿಕಾಗೊಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್, ರಾಜ್ಯ ಸಭಾ ಮಾಜಿ ಸದಸ್ಯ ಹೆಚ್.ಕೆ.ಜವರೇಗೌಡ, ಮುಖಂಡರಾದ ಖಡಾಕಡಿ ಪೀರ್ ಸಾಬ್, ಮುನಿಸ್ವಾಮಿ, ಜಾಕೀರ್ ಉಪಸ್ಥಿತರಿದ್ದರು.

Translate »