`ಸಿದ್ದರುಪಯ್ಯ’ ಸರ್ಕಾರ ಇರುವವರೆಗೂ ಅಭಿವೃದ್ಧಿ ಅಸಾಧ್ಯ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ
ಕೊಡಗು

`ಸಿದ್ದರುಪಯ್ಯ’ ಸರ್ಕಾರ ಇರುವವರೆಗೂ ಅಭಿವೃದ್ಧಿ ಅಸಾಧ್ಯ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ

May 8, 2018

ಸೋಮವಾರಪೇಟೆ:  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿದ್ದರುಪಯ್ಯ ಎಂದು ಕರೆದಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು, ಕರ್ನಾಟಕದಲ್ಲಿ ಸಿದ್ದರುಪಯ್ಯಾ ಸರ್ಕಾರ ಇರುವವರೆಗೆ ರಾಜ್ಯ ಅಭಿವೃದ್ಧಿ ಅಸಾಧ್ಯ ಎಂದು ಹೇಳಿದರು.

ಭಾರತೀಯ ಜನತಾಪಕ್ಷದ ವತಿಯಿಂದ ಇಲ್ಲಿನ ಜೇಸಿವೇದಿಕೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರೈತರ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಕಾಳಜಿ ಇಲ್ಲ. ಅಭಿವೃದ್ಧಿಯ ಚಿಂತನೆಯಿಲ್ಲ. ಜನನಿ ಜನ್ಮ ಭೂಮಿಯ ಮೇಲೆ ಕಾಂಗ್ರೆಸ್ಸಿಗೆ ಪ್ರೀತಿ ಮತ್ತು ಗೌರವ ಇಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣೆಯ ಸಂದರ್ಭ ಮಾತ್ರ ಕರ್ನಾಟಕ್ಕೆ ಬರುತ್ತಾರೆ. ಆದರೆ ಕನ್ನಡ ನಾಡಿನ ಮಣ್ಣಿನ ಮಹಿಮೆ ಮತ್ತು ವೀರರ ಬಗ್ಗೆ ಗೊತ್ತಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿ ಪ್ರತಿನಿಧಿಸುವ ಅಮೇಥಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ್ದು ಮಣ್ಣು ಪರೀಕ್ಷಾ ಕೇಂದ್ರ, ಕೃಷಿ ಅಧ್ಯಾಯನ ಕೇಂದ್ರ, ಪಾರ್ಸ್‍ಪೋರ್ಟ್ ಕೇಂದ್ರ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮೋದಿ ಅವರು ಮಾಡಿದ್ದಾರೆ. ಈ ಅಭಿವೃದ್ಧಿಯನ್ನು ಮನಗಂಡು ಮೋದಿಯವರಿಗೆ ಮತ ಹಾಕಿ ಎಂದು ರಾಹುಲ್ ಗಾಂಧಿ ಹೇಳಬೇಕಿತ್ತು. ಆದರೆ ಕರ್ನಾಟಕದ ಸಿದ್ದರುಪಾಯ್ಯ ಅವರಿಗೆ ಮತ ನೀಡಿ ಎನ್ನುವುದು ಹಾಸ್ಯಸ್ಪದ ಎಂದರು.

ಕೇವಲ ಸರಕಾರ ರಚನೆ ಮಾಡುವುದು ಚುನಾವಣೆಯ ಉದ್ದೇಶವಾಗಬಾರದು. ಉತ್ತಮ ಸಮಾಜದ ನಿರ್ಮಾಣವಾಗಲು ನಾವೆಲ್ಲರೂ ಪ್ರಯತ್ನಿಸಬೇಕು ಎಂದು ಚಿತ್ರನಟಿ ಹಾಗೂ

ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶೃತಿ ಹೇಳಿದರು.

ದೇಶದ 21 ರಾಜ್ಯಗಳಲ್ಲಿ ಈಗಾಗಲೇ ಭಾರತೀಯ ಜನತಾ ಪಕ್ಷ ಅಧಿಕಾರದ ಚುಕ್ಕಾಣ ಯನ್ನು ಹಿಡಿದಿದೆ, ಪ್ರಸಕ್ತ ಸಾಲಿನ ಕರ್ನಾಟಕ ವಿಧಾನಸಭಾ ಚುನಾವಣೆ ವಿಶೇಷವಾದ ಮಹತ್ವವನ್ನು ಪಡೆದಿದೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಪ್ರಾಮಾಣ ಕ ಪ್ರಯತ್ನವನ್ನು ಮಾಡಬೇಕು ಎಂದು ಹೇಳಿದರು.

ಕೊಡವರಿಗೆ ಟಿಪ್ಪು ಸುಲ್ತಾನ್ ಮಾಡಿರುವ ಘೋರ ಅಪಮಾನದ ಚಿತ್ರಣ ಇತಿಹಾಸದಲ್ಲಿ ದಾಖಲಾಗಿದ್ದರೂ ಕೊಡಗು ಜಿಲ್ಲೆಯಲ್ಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸುವ ಮೂಲಕ ಜಿಲ್ಲೆಯ ಜನತೆಗೆ ಅವಮಾನಮಾಡಲಾಗಿದೆ. ಕೊಡಗು ಜಿಲ್ಲೆಯಲ್ಲಿ ಜಾತಿ ರಾಜಕಾರಣ ಮತ್ತು ಒಡೆದು ಆಳುವ ನೀತಿ ಎಂದಿಗೂ ನಡೆಯುವುದಿಲ್ಲ ಎಂದು ಹೇಳಿದರು.
ಪಕ್ಷದ ಅಭ್ಯರ್ಥಿ ಅಪ್ಪಚ್ಚುರಂಜನ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ವೀಕ್ಷಕರಾದ ಧರ್ಮನಾರಾಯಣ್ ಜೋಶಿ, ಪ್ರಮುಖರಾದ ವಿ.ಎಂ.ವಿಜಯ, ಎಸ್.ಬಿ.ಭರತ್‍ಕುಮಾರ್, ಕೆ.ವಿ.ಮಂಜುನಾಥ್, ಜೆ.ಕೆ.ಮುತ್ತಮ್ಮ, ಎಸ್.ಜಿ.ಮೇದಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಭಾರತೀಶ್, ವಕ್ತಾರ ಅಭಿಮನ್ಯುಕುಮಾರ್ ಮತ್ತಿತರರು ಮಾತನಾಡಿದರು.

Translate »