ಅಪ್ಪಚ್ಚಕವಿ ಅನುವಾದಿತ ನಾಟಕಗಳ ಸಂಕಲನ ಪ್ರಕಟಿಸಲು ಕೇಂದ್ರ ಸಾಹಿತ್ಯ ಅಕಾಡೆಮಿ ನಿರ್ಧಾರ
ಕೊಡಗು

ಅಪ್ಪಚ್ಚಕವಿ ಅನುವಾದಿತ ನಾಟಕಗಳ ಸಂಕಲನ ಪ್ರಕಟಿಸಲು ಕೇಂದ್ರ ಸಾಹಿತ್ಯ ಅಕಾಡೆಮಿ ನಿರ್ಧಾರ

May 8, 2018

ಬೆಂಗಳೂರು: ಡಾ.ಐ.ಮಾ.ಮುತ್ತಣ್ಣನವರು ಕನ್ನಡಕ್ಕೆ ಅನುವಾದ ಮಾಡಿರುವ ಕೊಡಗಿನ ಆದಿಕವಿ ಹರದಾಸ ಅಪ್ಪಚ್ಚಕವಿ ಅವರ ನಾಲ್ಕು ನಾಟಕಗಳ ಸಂಕಲನವನ್ನು ಪ್ರಕಟಿಸಲು ಕೇಂದ್ರ ಸಾಹಿತ್ಯ ಅಕಾಡೆಮಿ ತೀರ್ಮಾನಿಸಿದೆ.

ಕೊಡಗಿನ ಆದಿಕವಿ ಹರದಾಸ ಅಪ್ಪಚ್ಚಕವಿ ಅವರ 150ನೇ ಜನ್ಮ ವರ್ಷದ ಅಂಗವಾಗಿ ಕವಿಗೆ ಗೌರವಪೂರ್ಣ ನಮನ ಸಲ್ಲಿಸುವ ಉದ್ದೇಶದಿಂದ ಕೇಂದ್ರ ಸಾಹಿತ್ಯ ಅಕಾಡೆಮಿ ಈ ನಿರ್ಧಾರ ಕೈಗೊಂಡಿದೆ.

ಮಡಿಕೇರಿಯಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಅಪ್ಪಚ್ಚಕವಿ 150ನೇ ಜನ್ಮೋತ್ಸವ ಮತ್ತು ಎರಡು ದಿನಗಳ ವಿಚಾರ ಸಂಕಿರಣ ನಡೆಸುವುದು. ಈ ಸಂದರ್ಭದಲ್ಲಿ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟ ಅಪ್ಪಚ್ಚಕವಿಯ ನಾಟಕಗಳು ಸಂಕಲನವನ್ನು ಬಿಡುಗಡೆ ಮಾಡುವುದು ಭಾರತದ ಈಶಾನ್ಯ ರಾಜ್ಯಗಳ ಬುಡಕಟ್ಟು ಜಾನಪದ ಸಂಸ್ಕøತಿ ಮತ್ತು ಕೊಡಗಿನ ಕುಡಿಯರು, ಎರವರು, ಜೇನು ಕುರುಬರು, ಕೊಡವರ ಬುಡಕಟ್ಟು ಜಾನಪದ ಸಂಸ್ಕøತಿಯ ಮಿಲನ ಸಂವಾದ ಕಾರ್ಯಕ್ರಮಗಳನ್ನು ಕೊಡಗು ಮತ್ತು ಈಶಾನ್ಯ ರಾಜ್ಯಗಳ ಒಂದು ಕಡೆ ನಡೆಸುವಂತೆ ಯೋಜನೆ ರೂಪಿಸಲಾಗುವುದು. ಅಲ್ಲದೆ, ಅಪ್ಪಚ್ಚಕವಿ ಬದುಕು-ಬರಹದ ಜೀವನ ಚರಿತ್ರೆಯನ್ನು ಇಂಗ್ಲೀಷ್ ಸೇರಿದಂತೆ ಭಾರತೀಯ 7 ಭಾಷೆಗಳಲ್ಲಿ ಪ್ರಕಟಿಸಲು ತೀರ್ಮಾನ ಮಾಡಲಾಯಿತು.

ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಚಂದ್ರಶೇಕರ್ ಕಂಬಾರರ ಅಧ್ಯಕ್ಷತೆಯಲ್ಲಿ ನಡೆದ ಮಹತ್ವದ ಕನ್ನಡ ಸಂಚಾಲನಾ ಸಮಿತಿ ಸಭೆಯಲ್ಲಿ ತೀರ್ಮಾನಗಳನ್ನು ಕೈಗೊಳ್ಳಲಾಯಿತಲ್ಲದೆ, ಕೊಡವ ಮತ್ತು ತುಳು ಭಾಷೆಗೆ ಸಂವಿಧಾನದ 8ನೇ ಪರಿಚ್ಛೇದದಲ್ಲೇ ಮಾನ್ಯತೆ ಸಿಗಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಸಲ್ಲಿಸಲು ಕ್ರಮ ವಹಿಸಲು ನಿರ್ಧರಿಸಲಾಗಿದ್ದು, ಈ ಬಗ್ಗೆ ಸೂಕ್ತ ದಾಖಲೆ ಸಂಗ್ರಹಿಸಲು ಜವಾಬ್ದಾರಿಯನ್ನು ಅಕಾಡೆಮಿ ಸದಸ್ಯ ಅಡ್ಡಂಡ ಕಾರ್ಯಪ್ಪ ನವರಿಗೆ ವಹಿಸಲಾಯಿತು.

ಸಭೆಯಲ್ಲಿ ಸಮಿತಿ ಸಂಚಾಲಕರಾದ ಕವಿ ಡಾ.ಸಿದ್ದಲಿಂಗಯ್ಯ, ಸಾಹಿತಿ ಡಾ.ಸರೂಜ್‍ಕಾಟ್ಕರ್, ದೆಹಲಿ ಜವಹರಲಾಲ್ ನೆಹರು ವಿವಿಯ ಡಾ.ಹೆಚ್.ಎಸ್.ಶಿವಪ್ರಕಾಶ್, ಮಧ್ಯಪ್ರದೇಶದ ಇಂದಿರಾಗಾಂಧಿ ಬುಡಕಟ್ಟು ರಾಷ್ಟ್ರೀಯ ವಿವಿಯ ಪ್ರೊ.ವಿ.ವಿ.ಕುಲಕಣ ್, ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ್, ಸಾಹಿತಿಗಳಾದ ಪ್ರೊ.ಎಲ್.ಎನ್.ಮುಕುಂದರಾಜ್, ಡಾ.ಪದ್ಮಿನಿ ನಾಗರಾಜ್, ಡಾ.ಬಾಳಾ ಸಾಹೇಬ್ ಲೋಕಾಪುರ್ ಭಾಗವಹಿಸಿದ್ದರು.

Translate »