ಮಡಿಕೇರಿಯಲ್ಲಿ ಧಾರಾಕಾರ ಮಳೆ
ಕೊಡಗು

ಮಡಿಕೇರಿಯಲ್ಲಿ ಧಾರಾಕಾರ ಮಳೆ

May 8, 2018

ಮಡಿಕೇರಿ:  ಸೋಮವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಮಡಿಕೇರಿ ನಗರ ಸಂಪೂರ್ಣ ತತ್ತರಗೊಂಡಿತು. ಭಾರೀ ಗಾಳಿ ಸಹಿತ ಮಳೆ ಸುರಿದ ಪರಿಣಾಮ ನಗರದ ಕೆಲವೆಡೆ ರಾಜಾಕಾಲುವೆ ತುಂಬಿ ಹರಿದು ರಸ್ತೆಗಳು ಜಲಾವೃತಗೊಂಡವು. ನಗರದ ಜನರಲ್ ತಿಮ್ಮಯ್ಯ ಶಾಲೆಯ ಬಳಿ ಕಿರುಕಾಲುವೆ ತುಂಬಿ ಹರಿದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿ ತ್ತಲ್ಲದೇ, ಚರಂಡಿ ಮತ್ತು ರಸ್ತೆ ಯಾವುದೆಂದು ಗೊತ್ತಾಗದೇ ವಾಹನ ಸವಾರರು ಪರದಾಡುವಂತಾಯಿತು. ಗಾಳಿ ಸಹಿತ ಭಾರೀ ಮಳೆಯಿಂದ ಕೆಲಕಾಲ ವಿದ್ಯುತ್ ಪೂರೈಕೆ ಯಲ್ಲೂ ವ್ಯತ್ಯಯ ಉಂಟಾಯಿತು. ದಿಢೀರನೇ ಮಳೆ ಸುರಿದ ಪರಿಣಾಮ ಕೆಲಸ ಕಾರ್ಯ ಮುಗಿಸಿ ಮನೆಗೆ ಹೊರಡಲು ಮುಂದಾಗಿದ್ದ ನಗರದ ನಿವಾಸಿಗಳು ಅಂಗಡಿ ಮುಂಗಟ್ಟುಗಳ ಎದುರು ಆಶ್ರಯ ಪಡೆದರು. ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದವರು ಸಹ ಮಳೆಯಿಂದ ಪ್ರಚಾರ ಕಾರ್ಯ ಮೊಟಕುಗೊಳಿಸಿ ತಮ್ಮ ಮನೆಗಳತ್ತ ಮುಖಮಾಡಿದರು.

Translate »