ಸಾಕಷ್ಟು ಕೆಲಸ ಮಾಡಿದ್ದರೂ ಮತದಾರರು ನನ್ನನ್ನು ಏಕೆ ಸೋಲಿಸಿದರೋ ಗೊತ್ತಿಲ್ಲ
ಮೈಸೂರು

ಸಾಕಷ್ಟು ಕೆಲಸ ಮಾಡಿದ್ದರೂ ಮತದಾರರು ನನ್ನನ್ನು ಏಕೆ ಸೋಲಿಸಿದರೋ ಗೊತ್ತಿಲ್ಲ

May 29, 2018

ಮೈಸೂರು:  ನಾನು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ ಕ್ಷೇತ್ರದ ಜನತೆ ನನ್ನನ್ನು ಏಕೆ ಸೋಲಿಸಿದರೋ ಗೊತ್ತಿಲ್ಲ. ಆದರೂ ಮತದಾರರ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ. ಸೋಲು ಗೆಲುವು ಸಹಜ. ಹಾಗೆಂದು ಎದೆಗುಂದದೆ ಮತದಾರರ ಸಮಸ್ಯೆಗಳಿಗೆ ಸ್ಪಂದಿಸಿ, ಜನರಿಗಾಗಿ ಹೋರಾಟ ಮುಂದುವರಿಸುತ್ತೇನೆ ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಇಂದಿಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮ್ಮ ಶಾಸಕ ಅವಧಿಯಲ್ಲಿ ತಾವು ರಸ್ತೆ, ಒಳಚರಂಡಿ, ಉದ್ಯಾನವನಗಳ ಅಭಿವೃದ್ಧಿ ಸೇರಿದಂತೆ ಶೇ.90ರಷ್ಟು ಅಭಿವೃದ್ಧಿಪರ ಕೆಲಸಗಳನ್ನು ಕೈಗೊಂಡಿದ್ದೇನೆ. ಹಲವು ಕಾಮಗಾರಿಗಳು ಪ್ರಗತಿ ಹಂತದಲಿದ್ದು, ಉಳಿದವರು ಶೇಕಡಾವಾರು ಕಾಮಗಾರಿಗಳು ಮುಕ್ತಾಯ ಹಂತದಲ್ಲಿವೆ. ತಾವು ಶಾಸಕನಾಗಿ ಜನಪರ ಕೆಲಸ ಮಾಡಿದ ಧನ್ಯತಾಭಾವ ಇದೆ ಎಂದು ಹೇಳಿದರು.

ಇವಿಎಂ ಹಾಗೂ ವಿವಿಪ್ಯಾಟ್‍ನಲ್ಲಿ ಆಗಿರುವ ನ್ಯೂನತೆಗಳ ಕುರಿತು ಈಗಾಗಲೇ ಚುನಾವಣಾ ಆಯೋಗಕ್ಕೆ ತಾವು ದೂರು ಸಲ್ಲಿಸಿದ್ದು, ವರದಿ ಬಂದ ನಂತರ ಆ ಬಗ್ಗೆ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದ್ದೇನೆ ಎಂದರು.

ತಾವು ವಿದ್ಯಾರಣ್ಯಪುರಂನಿಂದ ಜೆ.ಪಿ.ನಗರಕ್ಕೆ ಹೋಗುವ ಅಕ್ಕಮಹಾದೇವಿ ರಸ್ತೆ, ಮುನೇಶ್ವನಗರ ರಸ್ತೆ, 13ನೇ ವಾರ್ಡ್‍ನ ಸೂರ್ಯ ಬಡಾವಣೆ ರಸ್ತೆ, ಶ್ರೀರಾಂಪುರ, ಕುವೆಂಪುನಗರ ಹಲವಾರು ರಸ್ತೆಗಳ ಕೆಲಸಗಳೇ ಮುಂದಿನ ಆರು ತಿಂಗಳÀವರೆಗೆ ನಡೆಯುತ್ತವೆ. ಸೂಯೆಜ್ ಫಾರಂನ ಕಸ ಸಂಗ್ರಹಣಾ ಘಟಕಗಳನ್ನು ಸ್ಥಳಾಂತರಿಸುವ ಉದ್ದೇಶದಿಂದ 21 ಕೋಟಿ ರೂ. ವೆಚ್ಚದಲ್ಲಿ ಕೆಸರೆಯಲ್ಲಿ 200 ಮೆಟ್ರಿಕ್ ಟನ್ ಸಾಮಥ್ರ್ಯದ ನೂತನ ಘಟಕ, 16 ಕೋಟಿ ರೂ.ಗಳಲ್ಲಿ ರಾಯನಕೆರೆಗೆ 150 ಮೆಟ್ರಿಕ್ ಟನ್ ಸಾಮಥ್ರ್ಯದ ನೂತನ ಘಟಕಗಳಿಗೆ ಎಲ್ಲ ರೀತಿಯ ಅನುಮತಿ ದೊರೆತಿದ್ದು, ಕೆಲಸ ಪ್ರಾರಂಭವಾಗಬೇಕಿದೆ. ನನ್ನ ಅವಧಿಯಲ್ಲಿ 8 ಸಾವಿರಕ್ಕೂ ಹೆಚ್ಚು ಮನೆಗಳ ನಿರ್ಮಾಣ ಹಲವಾರು ಹಂತದಲ್ಲಿ ಕೆಲಸ ನಡೆಯುತ್ತಿದೆ. ಇಷ್ಟೊಂದು ಮನೆಗಳು ಒಂದೇ ಅವಧಿಯಲ್ಲಿ ಅನುಮತಿ ಸಿಕ್ಕಿರುವುದು ಯಾವ ಕಾಲದಲ್ಲೂ ಆಗಿಲ್ಲ ಎಂದು ಹೇಳಿದರು.

ಕುರುಬಾರಹಳ್ಳಿ ಸರ್ವೇ ನಂ.4 `ಬಿ’ ಖರಾಬು ಸಮಸ್ಯೆ ಪರಿಹಾರವಾಗಿ ಮುಖ್ಯಮಂತ್ರಿಗಳ ನೇತೃತ್ವದ ಕ್ಯಾಬಿನೆಟ್ ಸಭೆಯಲ್ಲಿ ಪಾಸಾಗಿದೆ. ಸದ್ಯದಲ್ಲೇ ಸರ್ಕಾರಿ ಆದೇಶವೂ ಆಗಲಿದೆ ಎಂದ ಅವರು, ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಅಹರ್ನಿಷಿ ದುಡಿದು, ಪ್ರತಿಯೊಬ್ಬ ಮತದಾರರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿರುವುದು ನನಗೆ ತೃಪ್ತಿ ತಂದಿದೆ. ಹೀಗಿದ್ದರೂ ಮತದಾರರು ನನ್ನನ್ನು ಬೆಂಬಲಿಸದಿರುವುದು ಅತೀವ ನೋವಾಗಿದೆ. ನನ್ನ ಶಾಸಕ ಅವಧಿಯಲ್ಲಿ ಸಹಕರಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಶೇಷ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ಸಹಕಾರ ನೀಡಿದ ಸಚಿವರು, ನಗರಪಾಲಿಕೆ ಸದಸ್ಯರು, ಪಕ್ಷದ ಕಾರ್ಯಕರ್ತರು, ನಾಯಕರು ಇನ್ನಿತರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಸೋಲಿನಿಂದ ವಿಚಲಿತನಾಗದೆ ಸೋಲನ್ನು ಸವಾಲಾಗಿ ಸ್ವೀಕರಿಸಿರುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಶಾಸಕ ಎಸ್.ಎ.ರಾಮದಾಸ್ ಅವರಿಗೆ ಅಭಿನಂದಿಸಿದ ಅವರು, ನೂತನ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಶುಭ ಕೋರಿದರು.

ಬಂದ್‍ನಿಂದ ಬಿಜೆಪಿಗೆ ಮುಖಭಂಗ: ಕೆಪಿಸಿಸಿ ವಕ್ತಾರ ಹೆಚ್.ಎ.ವೆಂಕಟೇಶ್ ಮಾತನಾಡಿ, ಬಿಜೆಪಿ ಕರೆ ನೀಡಿದ್ದ ಬಂದ್ ಅನ್ನು ರಾಜ್ಯದ ಜನತೆ ತಿರಸ್ಕರಿಸಿದ್ದಾರೆ. ಇದರಿಂದ ಬಂದ್ ಸಂಪೂರ್ಣ ವಿಫಲವಾಗಿದ್ದು, ಬಿಜೆಪಿಗೆ ತೀವ್ರ ಮುಖಭಂಗವಾಗಿದೆ ಎಂದರು. ರಾಜ್ಯ ಕಾಂಗ್ರೆಸ್ ಸರ್ಕಾರ ಉತ್ತಮ ಸೇವೆ ಸಲ್ಲಿಸಿದ್ದರೂ ಪ್ರಚಾರಕ್ಕಿಂತ ವಿರೋಧಿಗಳ ಅಪಪ್ರಚಾರಗಳೇ ಕೈಮೇಲಾಗಿ ಸೋಲು ಅನುಭವಿಸಬೇಕಾಯಿತು ಎಂದರು.

ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆ ಹಣ ಬಲ, ತೋಳ್ಬಲ, ಜಾತಿ ಬಲದಿಂದ ನಡೆದಿದೆ ಎಂದರು. ಸುದ್ದಿಗೊಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಸುನೀಲ್, ಎಂ.ಸುನೀಲ್‍ಕುಮಾರ್, ಜಗದೀಶ್, ಕೆಪಿಸಿಸಿ ಸದಸ್ಯೆ ವೀಣಾ ಇನ್ನಿತರರು ಉಪಸ್ಥಿತರಿದ್ದರು.

Translate »