ದಕ್ಷಿಣ ಶಿಕ್ಷಕರ ಕ್ಷೇತ್ರದ ಪಕ್ಷಗಳ ಅಭ್ಯರ್ಥಿಗಳೊಂದಿಗೆ ಪತ್ರಿಕಾ ‘ಸಂವಾದ’:  ಶೈಕ್ಷಣ ಕ ಕ್ಷೇತ್ರದ ಅಭಿವೃದ್ಧಿಗೆ ಇದು ನನ್ನ ಆದ್ಯತೆ
ಮೈಸೂರು

ದಕ್ಷಿಣ ಶಿಕ್ಷಕರ ಕ್ಷೇತ್ರದ ಪಕ್ಷಗಳ ಅಭ್ಯರ್ಥಿಗಳೊಂದಿಗೆ ಪತ್ರಿಕಾ ‘ಸಂವಾದ’: ಶೈಕ್ಷಣ ಕ ಕ್ಷೇತ್ರದ ಅಭಿವೃದ್ಧಿಗೆ ಇದು ನನ್ನ ಆದ್ಯತೆ

May 29, 2018

ಮೈಸೂರು: ಮುಂಬರುವ ಜೂ.8 ರಂದು ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಿರುವ ನಮಗೆ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಶಿಕ್ಷಕ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ‘ಸಂವಾದ’ ದಲ್ಲಿ ಹಾಲಿ ವಿಧಾನ ಪರಿಷತ್ ಸದಸ್ಯರೂ ಆಗಿರುವ ಜೆಡಿಎಸ್ ಅಭ್ಯರ್ಥಿ ಮರಿತಿಬ್ಬೇಗೌಡ, ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್, ಬಿಜೆಪಿ ಅಭ್ಯರ್ಥಿ ಬಿ.ನಿರಂಜನಮೂರ್ತಿ, ಶಿಕ್ಷಕರ ಸಮಸ್ಯೆಗಳ ಬಗ್ಗೆ ನಮಗೇ ಸಂಪೂರ್ಣ ಅರಿವಿದ್ದು, ತಾವು ಗೆದ್ದರೆ ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇವೆ. ಹಾಗಾಗಿ ತಮ್ಮ ಗೆಲುವಿಗೆ ಶಿಕ್ಷಕ ಮತದಾರರು ಸಹಕರಿಸುವಂತೆ ಮನವಿ ಮಾಡಿದರು.

ಸಾಕಷ್ಟು ಕೆಲಸ ಮಾಡಿದ್ದೇನೆ.. ಮರು ಆಯ್ಕೆ ಬಯಸಿದ್ದೇನೆ: ಶಿಕ್ಷಕರ ಕ್ಷೇತ್ರವನ್ನು ಸತತ ಮೂರು ಬಾರಿ ಪ್ರತಿನಿಧಿಸಿ, ಇದೀಗ 4ನೇ ಬಾರಿ ಮರು ಆಯ್ಕೆ ಬಯಸಿ ಜೆಡಿಎಸ್‍ನಿಂದ ಸ್ಪರ್ಧಿಸಿರುವ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಈ ಸಂದರ್ಭದಲ್ಲಿ ಮಾತನಾಡಿ, 18 ವರ್ಷದಿಂದ ನಿರಂತರವಾಗಿ ಪ್ರಾಥಮಿಕ, ಪ್ರೌಢ ಹಾಗೂ ಉನ್ನತ ಶಿಕ್ಷಣದ ಶೈಕ್ಷಣ ಕ ಸಮಸ್ಯೆಗಳು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಶೈಕ್ಷಣ ಕ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಿದ್ದೇನೆ. ಜೊತೆಗೆ ವಿಧಾನ ಪರಿಷತ್ ಉಪ ಸಭಾಪತಿಯಾಗಿಯೂ ಆ ಹುದ್ದೆಯ ಘನತೆ, ಗೌರವ ಕಾಪಾಡಿದ ತೃಪ್ತಿಯೂ ನನಗಿದೆ. ಈ ನಿಟ್ಟಿನಲ್ಲಿ ಶಿಕ್ಷಕ ಮತದಾರರು ಪ್ರಥಮ ಪ್ರಾಶಸ್ತ್ಯದ ಮತ ನೀಡುವ ಮೂಲಕ ನನಗೆ ಮತ್ತೊಮ್ಮೆ ಮೇಲ್ಮನೆ ಸದಸ್ಯನಾಗಿ ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿಕೊಂಡರು.

ನನಗೂ ಒಂದು ಅವಕಾಶ ನೀಡಿ: ಕಾಂಗ್ರೆಸ್ ಅಭ್ಯರ್ಥಿ ಎಸಿಐಸಿಎಂ ಸಂಚಾಲಕ ಎಂ.ಲಕ್ಷ್ಮಣ್ ಮಾತನಾಡಿ, 6 ತಿಂಗಳಿಂದ ಕ್ಷೇತ್ರದ ವ್ಯಾಪ್ತಿಯ 26 ತಾಲೂಕುಗಳ 29 ವಿಧಾನಸಭಾ ಕ್ಷೇತ್ರಗಳಲ್ಲಿ 2150 ಶಾಲೆಗಳಿಗೆ ಭೇಟಿ ನೀಡಿದ್ದೇನೆ. 21,000 ಶಿಕ್ಷಕ ಮತದಾರರ ಪೈಕಿ 19ಕ್ಕೂ ಹೆಚ್ಚು ಮತದಾರರನ್ನು ಖುದ್ದು ಭೇಟಿ ಮಾಡಿ, ವಿನಂತಿಸಿಕೊಂಡಿದ್ದೇನೆ. ಅನೇಕ ಹೋರಾಟಗಳಲ್ಲಿ ಸಕ್ರಿಯ ಹೋರಾಟ ನಡೆಸಿದ್ದು, ಶಿಕ್ಷಕರ ಬಗ್ಗೆಯೂ ಅಪಾರ ಕಾಳಜಿಯೊಂದಿಗೆ ಶೈಕ್ಷಣ ಕ ಸಮಸ್ಯೆಗಳ ಪರಿಹಾರಕ್ಕೆ ಹೋರಾಡಲು ಸಿದ್ದನಿದ್ದೇನೆ. ಮತದಾರರು ನನಗೂ ಒಮ್ಮೆ ಅವಕಾಶ ಕಲ್ಪಿಸಿಕೊಡಿ ಎಂದು ವಿನಂತಿಸಿಕೊಂಡರು.

ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಬೇಕಿದೆ: ಬಿಜೆಪಿ ಅಭ್ಯರ್ಥಿ ಬಿ.ನಿರಂಜನಮೂರ್ತಿ ಅವರು, ಶಿಕ್ಷಕರ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿಯುತ್ತಿದ್ದು, ಅರೆ ಕಾಲಿಕ ಉಪನ್ಯಾಸಕರು, ಅತಿಥಿ ಉಪನ್ಯಾಸಕರ ಸಮಸ್ಯೆಯೂ ಹೆಚ್ಚಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಬೇಕಿದೆ. ಈ ಬಾರಿ ಚಿಂತಿಸಿ, ನನಗೆ ಶಿಕ್ಷಕರ ಸಮಸ್ಯೆ ವಿರುದ್ಧ ಹೋರಾಡಲು ಅವಕಾಶ ಕಲ್ಪಿಸಿಕೊಡಿ ಎಂದು ಮತದಾರರಲ್ಲಿ ಭಿನ್ನವಿಸಿಕೊಂಡರು.

ಸಂವಾದದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್‍ಬಾಬು, ನಗರ ಉಪಾಧ್ಯಕ್ಷ ಎಂ.ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

‘ಸಂವಾದ’ ದಲ್ಲಿ ವಿವಿ ಕುಲಪತಿ ನೇಮಕ ವಿಚಾರ ಪ್ರಸ್ತಾಪ

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳೊಂದಿಗಿನ ಸಂವಾದದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಖಾಯಂ ಕುಲಪತಿ ನೇಮಕ ವಿಚಾರವೂ ಪ್ರಸ್ತಾಪವಾಯಿತು. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ, ಈ ವಿಚಾರದಲ್ಲಿ 3 ಬಾರಿ ಸರ್ಕಾರ ವರದಿ ನೀಡಿದ್ದರೂ ರಾಜ್ಯಪಾಲರು ಫೈಲನ್ನು ತಿರಸ್ಕರಿಸುತ್ತಲೇ ಬಂದಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಕಡೆಗೆ ಬೊಟ್ಟು ಮಾಡಿ ತೋರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಅಭ್ಯರ್ಥಿ ಬಿ.ನಿರಂಜನಮೂರ್ತಿ, ಇದಕ್ಕೆ ವಾರದೊಳಗೆ ಕಳುಹಿಸಿಕೊಟ್ಟರೆ ಅದನ್ನು ಕೇಂದ್ರದಿಂದ ಅನುಮತಿ ಕೊಡಿಸಿಕೊಡುವುದಾಗಿ ಭರವಸೆ ನೀಡಿದರು. 100 ವರ್ಷಗಳ ಇತಿಹಾಸವಿರುವ ಮೈಸೂರು ವಿವಿಗೆ ಒಂದೂವರೆ ವರ್ಷದಿಂದ ಕುಲಪತಿ ಇಲ್ಲ ಎಂಬುದು ಬೇಸರದ ವಿಚಾರ. ನಮ್ಮಲ್ಲಿಯೇ ಅತ್ಯುತ್ತಮ ಪ್ರಾಧ್ಯಾಪಕರಿದ್ದಾರೆ. ಕೋರ್ ಕಮಿಟಿ ಒಮ್ಮತದ ಅಭಿಪ್ರಾಯ ನೀಡುತ್ತಿಲ್ಲ ಎಂದು ಬೇಸರದಿಂದ ನುಡಿದರು. ಸಾಮಾಜಿಕ ನ್ಯಾಯದ ಆಧಾರದಲ್ಲಿ ಕುಲಪತಿ ಹುದ್ದೆಗೆ ಸೂಕ್ತ ವ್ಯಕ್ತಿ ನೇಮಕ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಪರಿಷತ್ ಸದಸ್ಯರೂ ಆಗಿರುವ ಜೆಡಿಎಸ್ ಅಭ್ಯರ್ಥಿ ಮರಿತಿಬ್ಬೇಗೌಡ ಅವರು, ಕುಲಪತಿ ನೇಮಕಾತಿ ಮಾಡದಿರುವುದು ಸರ್ಕಾರದ ವೈಫಲ್ಯ ಎಂದು ಟೀಕಿಸಿದರು.

ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಜಿಜ್ಞಾಸೆಯಿಂದಾಗಿ 1.5 ವರ್ಷದಿಂದ ಕುಲಪತಿ ನೇಮಕ ಆಗದಿರುವುದು ವಿಷಾದಕರ ಸಂಗತಿ. ಸರ್ಕಾರ ವಿವಿಗಳ ಬಗ್ಗೆ ಇಷ್ಟೊಂದು ನಿರ್ಲಕ್ಷ ತೋರಬಾರದು. ವಿಧಾನಸಭೆ ಚುನಾವಣೆಗೂ ಮುನ್ನ ತಾವು ಕುಲಪತಿ ನೇಮಕ ಮಾಡುವಂತೆ 4 ಬಾರಿ ಪತ್ರ ಬರೆದಿದ್ದರು ಸರ್ಕಾರ ಗಂಭೀರವಾಗಿ ಪರಿಗಣ ಸಲಿಲ್ಲ. ಇದೀಗ ಹೊಸ ಸರ್ಕಾರ ಬಂದಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂತ್ರಿ ಮಂಡಲ ರಚನೆ ಆಗುತ್ತಿದ್ದಂತೆಯೇ ಜೂನ್ ತಿಂಗಳಲ್ಲಿ ನಡೆಯುವ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಿ, ಖಾಲಿ ಇರುವ ಎಲ್ಲಾ ಕುಲಪತಿ ಹುದ್ದೆ ನೇಮಕ ಮಾಡಿಸುವ ಪ್ರಯತ್ನ ನಡೆಸುವುದಾಗಿ ಹೇಳಿದರು.

Translate »