ಅತಿಸಾರ ಭೇದಿ ನಿಯಂತ್ರಣಕ್ಕೆ ಸಹಕಾರ ಅಗತ್ಯ: ಸಿಇಓ
ಹಾಸನ

ಅತಿಸಾರ ಭೇದಿ ನಿಯಂತ್ರಣಕ್ಕೆ ಸಹಕಾರ ಅಗತ್ಯ: ಸಿಇಓ

May 29, 2018

ಹಾಸನ: ಅತಿಸಾರ ಭೇದಿ ನಿಯಂತ್ರಣ ಕಾರ್ಯಕ್ರಮಗಳನ್ನು ಜಿಲ್ಲೆಯಾ ದ್ಯಂತ ಪ್ರತಿ ಮನೆ ಮನೆಗೂ ತಲುಪು ವಂತೆ ಮಾಡುವಲ್ಲಿ ನಮ್ಮ ಆಶಾ ಕಾರ್ಯ ಕರ್ತೆಯರು ಹಾಗೂ ಸುದ್ದಿ ಮಾಧ್ಯಮ ಗಳು ತಮ್ಮ ಪೂರ್ತಿ ಸಹಕಾರ ನೀಡಬೇಕು ಎಂದು ಜಿಪಂ ಮುಖ್ಯ ಕಾರ್ಯ ನಿರ್ವ ಹಣಾಧಿಕಾರಿ ಜಗದೀಶ್ ಹೇಳಿದರು.

ನಗರದ ಕೃಷ್ಣ ಆಸ್ಪತ್ರೆ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸಶಕ್ತ ಅತಿಸಾರ ನಿಯಂತ್ರಣದ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತ ನಾಡಿದರು. ಜಿಲ್ಲೆಯಾದ್ಯಂತ 5 ವರ್ಷದ ಒಳಗಿರುವ 1,23,400 ಮಕ್ಕಳ ಪ್ರತಿ ಮನೆಗಳಿಗೂ ಶುಚಿತ್ವದ ಕುರಿತಂತೆ ಆಶಾ ಕಾರ್ಯಕರ್ತೆಯರು ಮನವರಿಕೆ ಮಾಡಿ ಕೊಟ್ಟು ಜಿಲ್ಲೆಯಲ್ಲಿ ಅತಿಸಾರ ಭೇದಿಯಿಂದ ಉಂಟಾಗುವ ಮಕ್ಕಳ ಮರಣದ ಪ್ರಮಾಣ ವನ್ನು ಶೂನ್ಯಕ್ಕೆ ಬರುವಂತೆ ಮಾಡುವ ಮೂಲಕ ಕನಸಿನ ಭಾರತದ ನಿರ್ಮಾಣಕ್ಕೆ ಸಹಕರಿಸಬೇಕು. ಎಲ್ಲರೂ ಸ್ವಚ್ಛತೆಗೆ ಮಹತ್ವ ನೀಡಬೇಕು ಎಂದು ಹೇಳಿದರು.

ಭಾರತದಲ್ಲಿ ಅತಿಸಾರ ಕಾಯಿಲೆಯಿಂದ ಸಾಯುವ ಮಕ್ಕಳ ಪ್ರಮಾಣವು 1 ಲಕ್ಷವಿದ್ದು, ಇದನ್ನು ತಡೆಯಲು ಸರ್ಕಾರವು ಹಲವು ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುತ್ತಿದೆ. ಇದಕ್ಕೆ ಎಲ್ಲರ ಸಹಕರ ಅಗತ್ಯ. ಅದ್ದರಿಂದ ಪ್ರತಿಯೊಬ್ಬರೂ ಜವಾ ಬ್ದಾರಿಯುತವಾಗಿ ಕಾರ್ಯ ನಿರ್ವಹಿಸುವ ಮೂಲಕ ಮಕ್ಕಳ ಸಾವಿನ ಪ್ರಮಾಣವನ್ನು ಸಂಪೂರ್ಣ ನಿಯಂತ್ರಿಸಬೇಕು. ಮಕ್ಕಳು ಹಾಗೂ ಪೋಷಕರಿಗೆ ಓಆರ್‍ಎಸ್‍ನ ಮಹತ್ವ, ಅದರ ಬಳಕೆಯಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ಉಂಟಾಗುವ ಕೆಡುಕುಗಳ ಬಗ್ಗೆ ತಿಳವಳಿಕೆ ನೀಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳ ನ್ನಾಡಿದ ಆರ್‍ಸಿಹೆಚ್ ಅಧಿಕಾರಿ ಜನಾರ್ಧನ್, ಶುಚ್ಛಿದ ಕಾಪಾಡುವ ದೃಷ್ಟಿಯಿಂದ ಸಾಮಾನ್ಯವಾಗಿ ಕೈ ತೊಳೆಯಬೇಕು ಎಂದು ಜನರಿಗೆ ಮಾಹಿತಿ ನೀಡುತ್ತೇವೆ. ಆದರೆ ಯಾವ ರೀತಿ ಕೈ ತೊಳೆಯಬೇಕು ಎಂಬ ಮಾಹಿತಿ ನೀಡುವುದಿಲ್ಲ. ಆದ್ದರಿಂದ ಮನೆಮನೆಗೂ ತೆರಳಿ ಪ್ರಾತ್ಯಕ್ಷಿಕೆ ನೀಡುವ ಮೂಲಕ ಜನರಲ್ಲಿ ಮನವರಿಕೆ ಮಾಡಬೇಕು, ಕೈ ತೊಳೆಯದೇ ಆಹಾರ ಸೇವಿಸುವುದ ರಿಂದ ಜಂತು ಹುಳುಗಳು, ಬ್ಯಾಕ್ಟೀರಿಯಾ ಗಳು ನೇರವಾಗಿ ಹೊಟ್ಟೆಗೆ ಸೇರುತ್ತವೆ. ಇದರಿಂದ ವಾಂತಿ ಭೇದಿ ಸೇರಿದಂತೆ ಹಲವಾರು ಕಾಯಿಲೆಗಳು ಬರುತ್ತವೆ. ಜಿಲ್ಲೆಯಾದ್ಯಂತ 2,600 ಶಾಲೆಗಳಿದ್ದು, ಕೈ ತೊಳಯುವ ಪ್ರಕ್ರಿಯೆಯ ಮಹತ್ವದ ಬಗ್ಗೆ ತಿಳಿಸಬೇಕು. ಅಲ್ಲದೆ ಅಡುಗೆ ಮಾಡು ವವರಿಗೂ ಶುಚಿತ್ವ ಹಾಗೂ ಕೈ ತೊಳೆಯುವ ಕುರಿತಂತೆ ಪ್ರಾತಕ್ಷಿಕೆ ನಡೆಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ.ವೆಂಕಟೇಶ್, ಕುಟುಂಬ ಕಲ್ಯಾಣಾ ಧಿಕಾರಿಗಳಾದ ಡಾ. ಉಮೇಶ್, ತಾಲೂಕು ಆರೋಗ್ಯಾಧಿಕಾರಿಗಳಾದ ಡಾ.ಶಿವೇಗೌಡ, ಎಂ.ಕೃಷ್ಣ ಆಸ್ಪತ್ರೆಯ ವೈದ್ಯ ಡಾ.ವಿಜಯ ಕುಮಾರಿ ಮತ್ತಿತರರು ಹಾಜರಿದ್ದರು.

Translate »