ಸಿಎಂ ಹೆಚ್‍ಡಿಕೆ ನುಡಿದಂತೆ ನಡೆಯಲಿ
ಹಾಸನ

ಸಿಎಂ ಹೆಚ್‍ಡಿಕೆ ನುಡಿದಂತೆ ನಡೆಯಲಿ

May 29, 2018

ಅರಸೀಕೆರೆ: ನೂತನ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡ ಬೇಕೆಂದು ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಜಿ.ವಿ.ಟಿ ಬಸವರಾಜು ಆಗ್ರಹಿಸಿದರು.

ತಾಲೂಕು ಬಿಜೆಪಿಯಿಂದ ನಗರದ ಪಿಪಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದ ಸಂದರ್ಭದಲ್ಲಿ ಕಾರ್ಯ ಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಹಾದಿ ಹಿಡಿದಿದ್ದು ಕೂಡಲೇ ಕುಮಾರಸ್ವಾಮಿಯವರು ತಾವು ನುಡಿ ದಂತೆ ನಡೆದುಕೊಂಡು ಸಾಲಮನ್ನಾ ಮಾಡ ಬೇಕಿದೆ. ಚುನಾವಣಾ ಪೂರ್ವದಲ್ಲಿ ರೈತರಿಗೆ ಸಾಲಮನ್ನಾದ ಹುಸಿ ಮಾತನ್ನು ಹೇಳಿರುವ ಮುಖ್ಯಮಂತ್ರಿಗಳು ನುಡಿದಂತೆ ನಡೆದುಕೊಳ್ಳಲಿ ಎಂದು ಹೇಳಿದರು.

ಮುಖಂಡ ಎನ್.ಡಿ.ಪ್ರಸಾದ್ ಮಾತನಾಡಿ, ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಪವಿತ್ರ ಮೈತ್ರಿ ಯಾಗಿದ್ದು, ರಾಜ್ಯದ ಜನತೆ ಬಿಜೆಪಿಗೆ ಬಹುಮತ ನೀಡಿದ್ದರೂ ಅಧಿಕಾರದ ಆಸೆಗೆ ಎರಡು ಪಕ್ಷಗಳು ಕೈಜೋಡಿಸಿ ಸರ್ಕಾರ ರಚಿಸಿರುವುದು ಖಂಡನೀಯ. ಅಲ್ಲದೇ ಸಾಲಮನ್ನಾ ಹೆಸರಿನಲ್ಲಿ ಎರಡೂ ಪಕ್ಷಗಳು ರಾಜ್ಯದ ಜನತೆಯನ್ನು ದಾರಿತಪ್ಪಿಸುತ್ತ ನಾಟಕವಾಡುತ್ತಿವೆ. ಈ ಕೂಡಲೇ ರಾಜ್ಯ ಸರ್ಕಾರ ರೈತರ ಸಾಲ ವನ್ನು ಮನ್ನಾ ಮಾಡಬೇಕು ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ರಾಜ್ಯದ ರೈತ ರೊಂದಿಗೆ ಬಿಜೆಪಿ ಹೋರಾಟ ತೀವ್ರ ಗೊಳಸಿಲಿದೆ ಎಂದರು. ಪ್ರತಿಭಟನೆಯಲ್ಲಿ ಕಾರ್ಯದರ್ಶಿ ರವಿ, ಸುನೀಲ್, ನವರತನ್, ಶಿವನ್‍ರಾಜ್, ಮೀನಾಕ್ಷಿಚಂದ್ರು, ಮನೋಜ್ ಕುಮಾರ್, ತೇಜಸ್ ಯಾದಾ ಪುರ, ಯತೀಶ್, ವಿನೋದ್‍ಕುಟ್ಟಿ ಇದ್ದರು.

Translate »