ಬೇಲೂರಿನಲ್ಲೂ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ
ಹಾಸನ

ಬೇಲೂರಿನಲ್ಲೂ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ

May 29, 2018

ಬೇಲೂರು: ರೈತರ ಸಾಲ ಮನ್ನಾ ಮಾಡುವಂತೆ ಒತ್ತಡ ಹೇರಲು ಬಿಜೆಪಿ ಕರೆ ನೀಡಿದ್ದ ಬಂದ್‍ಗೆ ಪಟ್ಟಣ ದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಬಂದ್ ಹಿನ್ನೆಲೆ ಪಟ್ಟಣದ ಶ್ರೀ ಚನ್ನ ಕೇಶವ ದೇವಾಲಯದ ಮುಂಭಾಗದಿಂದ ಬಿಜೆಪಿ ಪರಾಜಿತ ಅಭ್ಯರ್ಥಿ ಹುಲ್ಲಹಳ್ಳಿ ಸುರೇಶ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿ, ಪಟ್ಟಣದ ಅಂಗಡಿ-ಮುಂಗಟ್ಟುಗಳ ಬಳಿ ತೆರಳಿ ಅಂಗಡಿ ಬಾಗಿಲು ಮುಚ್ಚುವಂತೆ ಮನವಿ ಮಾಡಿ ಬಂದ್ ಆಚರಣೆಗೆ ಮುಂದಾದರು. ಈ ಸಂದರ್ಭ ಕೆಲ ಅಂಗಡಿ ಮಾಲೀಕರು ಅಂಗಡಿ ಬಾಗಿಲುಗಳನ್ನು ಹಾಕಲು ಮುಂದಾ ದರೆ. ಇನ್ನು ಕೆಲ ಹೋಟೆಲ್ ಮಾಲೀಕರು ನೀವು ನಿನ್ನೆ ನಮಗೆ ಪ್ರಚಾರ ಮಾಡಿ ತಿಳಿಸಿ ದ್ದರೆ ನಾವು ಸಹಕಾರ ನೀಡುತ್ತಿದ್ದೆವು. ಆದರೆ ನಮಗೆ ಯಾವುದೇ ಮಾಹಿತಿ ಇಲ್ಲದ ಕಾರಣ ಸಾಕಷ್ಟು ತಿಂಡಿ-ತಿನಿಸುಗಳನ್ನು ಮಾಡಿಕೊಂಡಿದ್ದೇವೆ. ನಾವು ಯಾವುದೇ ಕಾರಣಕ್ಕೂ ಬಂದ್ ಮಾಡುವುದಿಲ್ಲ ಎಂದು ಖಾರವಾಗಿ ತಿಳಿಸಿದರು. ನಂತರ ಪ್ರತಿಭಟನಾ ಕಾರರು ಶಾಂತಿಯುತವಾಗಿ ಬಾಗಿಲು ಹಾಕು ವಂತೆ ತಿಳಿಸಿ ಮುಂದಿನ ಅಂಗಡಿಗಳ ಬಳಿ ತೆರಳಿ ಬಾಗಿಲು ಮುಚ್ಚುವಂತೆ ಮನವಿ ಮಾಡಿ ಕೊಂಡು ನಂತರ ಬಸವೇಶ್ವರ ವೃತ್ತದ ಬಳಿ ಜಮಾಯಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವಂತೆ ಆಗ್ರಹಿಸಿದರು.

ಪ್ರತಿಭಟನೆ ಮೆರವಣ ಗೆ ಹೊರಟ ಕಾರ್ಯಕರ್ತರು, ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಉಮೇಶ್‍ಗೆ ಮನವಿ ಸಲ್ಲಿಸಿದರು. ಈ ಸಂದರ್ಭ ರಾಜ್ಯ ಕಾರ್ಯ ಕಾರಿಣ ರೈತ ಮೋರ್ಚಾ ರೇಣು ಕುಮಾರ್, ರಾಜ್ಯ ಕಾರ್ಯದರ್ಶಿ ಅರುಣ್ ಕುಮಾರ್. ಜಿಲ್ಲಾ ಕಾರ್ಯಕಾರಿಣ ಸಮಿತಿ ಸದಸ್ಯ ಸಚಿನ್, ಜಿಲ್ಲಾ ಕಾರ್ಯದರ್ಶಿ ಲೋಹಿತ್ ಗೌಡ, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಶೋಭಾ ಗಣೇಶ್, ಆನಂದ ನಾಯಕನಹಳ್ಳಿ, ಕೊರಟಗೆರೆ ಮೋಹನ್. ಯುವ ಮೋರ್ಚಾ ಕಾರ್ಯದರ್ಶಿ ವಿನಯ್, ಬಿಜೆಪಿ ಮುಖಂಡ ಮೋಹನ್ ಕುಮಾರ್ ಇತರರಿದ್ದರು.

Translate »