ಹಾಸನ: ರೈತರ ಸಾಲಮನ್ನಾ ಮಾಡುವಂತೆ ಸಿಎಂ ಹೆಚ್‍ಡಿ. ಕುಮಾರ ಸ್ವಾಮಿಗೆ ಒತ್ತಡ ಹೇರಲು ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದ ಬಂದ್‍ಗೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಬೆಳಗ್ಗೆಯಿಂದಲೇ ನಗರದ ಹೇಮಾವತಿ ಪ್ರತಿಮೆ ಬಳಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಬೆಂಬಲ: ಜೊತೆಗೆ ಎತ್ತಿನಗಾಡಿ, ಟ್ರಾಕ್ಟರ್ ಮೂಲಕ ರೈತರು ಆಗಮಿಸಿ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದರು. ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಹಸಿರು ಶಾಲುಗಳನ್ನು ಕೊರಳಿಗೆ ಹಾಕಿಕೊಂಡು ಬೃಹತ್ ಪ್ರತಿ ಭಟನಾ ಮೆರವಣ ಗೆ ನಡೆಸಿದರು.
ಎತ್ತಿನಗಾಡಿ ಏರಿದ ಶಾಸಕರು: ಹಾಸನ್ ಬಂದ್ ಹಿನ್ನೆಲೆಯಲ್ಲಿ ಮುಖ್ಯ ಆಕರ್ಷಣೆ ಯಾಗಿ ಎತ್ತಿನಗಾಡಿ ಮತ್ತು ಟ್ರಾಕ್ಟರ್ ಕಂಡು ಬಂದವು. ಶಾಸಕ ಪ್ರೀತಮ್ ಜೆ.ಗೌಡ ಎತ್ತಿನಗಾಡಿ ಹೇರಿ ಪ್ರತಿಭಟಿಸುವ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸಿದರು.
ಟೈರಿಗೆ ಬೆಂಕಿ: ಬಂದ್ ಯಶಸ್ವಿಗೊಳಿಸಲು ಸೋಮವಾರ ಬೆಳಿಗ್ಗೆ 7.30ರ ಸಮಯ ದಲ್ಲಿ ಬಿಜೆಪಿ ಕಾರ್ಯಕರ್ತರು ನಗರದ ಸಹ್ಯಾದ್ರಿ ಚಿತ್ರ ಮಂದಿರ ವೃತ್ತದಲ್ಲಿ ಟೈರಿಗೆ ಬೆಂಕಿ ಹಚ್ಚಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮೆರವಣ ಗೆ ಮೂಲಕ ಮಹಾವೀರ ವೃತ್ತದ ಬಳಿ ಬಂದು ಅಲ್ಲೂ ಟೈರಿಗೆ ಬೆಂಕಿ ಹಚ್ಚಲು ಮುಂದಾದರು. ಈ ವೇಳೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ನಿಷ್ಕ್ರಿಯೆಗೊ ಳಿಸಿದರು. ಮೆರವಣ ಗೆ ಮೂಲಕ ಹಳೆ ಬಸ್‍ನಿಲ್ದಾಣಕ್ಕೆ ತೆರಳಿದ ಕಾರ್ಯ ಕರ್ತರು, ಅಂಗಡಿ ಮಾಲೀಕರನ್ನು ವ್ಯಾಪಾರ ಸ್ಥಗಿತಗೊಳಿಸಿ ಬಂದ್‍ಗೆ ಸಹಕಾರ ನೀಡುವಂತೆ ಕೋರಿದರು.
ಬೈಕ್ ರ್ಯಾಲಿಗೆ ಅಡ್ಡಿ: ನಗರದಲ್ಲಿ ಬೃಹತ್ ಪ್ರತಿಭಟನೆ ವೇಳೆ ಬೈಕ್ ಮೂಲಕ ಬಂದ ಬಿಜೆಪಿ ಕಾರ್ಯಕರ್ತರು, ಪ್ರತಿಭಟನಾ ನಿರತ ರನ್ನು ಪೊಲೀಸರು ಹೇಮಾವತಿ ಪ್ರತಿಮೆ ಬಳಿ ತಡೆದು ಬೈಕ್ ರ್ಯಾಲಿ ಸ್ಥಗಿತಗೊಳಿಸಿ ದರು. ಈ ವೇಳೆ ಪಕ್ಷದ ಕಾರ್ಯಕರ್ತರು ಮತ್ತು ಪೊಲೀಸ್ ನಡುವೆ ವಾಗ್ವಾದ ನಡೆಯಿತು. ನಂತರ ಎತ್ತಿನ ಗಾಡಿ ಮತ್ತು ಟ್ರಾಕ್ಟರ್ ಹಾಗೂ ಪಾದಯಾತ್ರೆ ಮೂಲಕ ಮೆರವಣ ಗೆ ಪ್ರಾರಂಭಿಸಿದರು. ಕೊನೆ ಯಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತೆರಳಿ ಮನವಿ ಸಲ್ಲಿಸಿದರು.
ನಗರದ ಪ್ರಮುಖ ಭಾಗಗಳಲ್ಲಿ ಕೆಲ ಅಂಗಡಿ ಮುಂಗಟ್ಟು ಬಂದ್ ಆಗಿದ್ದರೆ ಉಳಿದಂತೆ ತೆರೆದಿದ್ದವು. ಸಾರಿಗೆ ಬಸ್, ಆಟೋ, ಟ್ಯಾಕ್ಸಿ ಎಂದಿನಂತೆ ಸಂಚರಿಸಿ ದವು. ಮಕ್ಕಳ ರಜೆ ಮುಗಿಸು ಶಾಲೆಗಳು ಪುನಾರಂಭವಾದ ದಿನವಾಗಿದ್ದರಿಂದ ಯಾವ ರಜೆ ಘೋಷಣೆ ಮಾಡದೆ ಶಾಲಾ- ಕಾಲೇಜುಗಳು ತೆರೆದಿದ್ದವು. ಬಿಜೆಪಿ ಕಾರ್ಯ ಕರ್ತರು ನಗರದಲ್ಲಿ ಸಂಚರಿಸಿ ಅಂಗಡಿಯನ್ನು ಬಾಗಿಲು ಮುಚ್ಚಲು ಮನವಿ ಮಾಡಿದರು. ಕೆಲ ಅಂಗಡಿ ಮಾಲೀಕರು ಸ್ವಯಂ ಪ್ರೇರಿತ ವಾಗಿ ಬಾಗಿಲು ಮುಚ್ಚಿ ಬೆಂಬಲ ನೀಡಿದರು.
ಪ್ರತಿಭಟನಾ ಮೆರವಣ ಗೆಯಲ್ಲಿ ಬಿಜೆಪಿ ಮುಖಂಡರು ನವೀಲೆ ಅಣ್ಣಪ್ಪ, ಬಿಜೆಪಿ ಪಕ್ಷದ ಜಿಲ್ಲಾ ಮಾಧ್ಯಮ ವಕ್ತಾರ ವೇಣು ಗೋಪಾಲ್, ಮುಖಂಡ ಡಿ.ಟಿ. ಪ್ರಕಾಶ್, ಮೊಗಣ್ಣಗೌಡ, ಗ್ರಾಪಂ ಸದಸ್ಯ ಪುಟ್ಟಣ್ಣ, ನಾಗಣ್ಣ, ನಗರಸಭೆ ಸದಸ್ಯ ಹೆಚ್.ಎಂ. ಸುರೇಶ್ ಕುಮಾರ್, ಪ್ರಸನ್ನಕುಮಾರ್, ಮಾಜಿ ಸದಸ್ಯ ಬಂಗಾರಿ ಮಂಜು, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹೆಚ್.ಎನ್.ನಾಗೇಶ್, ನಗರಾಧ್ಯಕ್ಷ ಶೋಭನ್ ಬಾಬು, ಮನೋಹರ್ ಇತರರು ಪಾಲ್ಗೊಂಡಿದ್ದರು.