ಮಂಡ್ಯ: ಗ್ರಾಪಂ ನೌಕರರ ವೇತನವನ್ನು ಇ- ಪಾವತಿ ಮೂಲಕ ಅನು ಷ್ಠಾನಗೊಳಿಸುವಂತೆ ಒತ್ತಾಯಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗ್ರಾಪಂ ನೌಕರರು ಮದ್ದೂರು ಮತ್ತು ಕೆ.ಆರ್.ಪೇಟೆಗಳಲ್ಲಿ ತಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕೆ.ಆರ್.ಪೇಟೆ: ಗ್ರಾಪಂ ನೌಕರರ ವೇತನ ವನ್ನು ಇ- ಪಾವತಿ ಮೂಲಕ ಅನುಷ್ಠಾನ ಗೊಳಿಸುವಂತೆ ಒತ್ತಾಯಿಸಿ ಗ್ರಾಪಂ ನೌಕರರು ತಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿ ಭಟನೆ ನಡೆಸಿದರು.
ತಾಲೂಕು ಅಧ್ಯಕ್ಷ ಮೋದೂರು ನಾಗ ರಾಜು ಮಾತನಾಡಿ, ಸರ್ಕಾರ ಗ್ರಾಪಂ ನೌಕರರಿಗೆ ಮಾಸಿಕ ವೇತನವನ್ನು ಇ- ಪಾವತಿ ಮೂಲಕ ಮಾಡುವುದಾಗಿ ನಿರ್ಣಯ ಕೈಗೊಂಡು ಹಲವು ತಿಂಗಳು ಕಳೆದಿವೆ. ಆದರೆ ಇಲ್ಲಿವರೆಗೆ ಈ ನಿರ್ಣಯ ಅನು ಷ್ಠಾನಕ್ಕೆ ಬಂದಿಲ್ಲ. ಕೆಲ ಗ್ರಾಪಂಗಳು ನೌಕರರಿಗೆ ವರ್ಷಕ್ಕೂ ಹೆಚ್ಚಿನ ಸಂಬಳ ನೀಡಿಲ್ಲ. ಆದರಿಂದ ಕೂಡಲೇ ಸರ್ಕಾರ ನೌಕರರ ಬಾಕಿ ಸಂಬಳ ನೀಡಬೇಕು. ಜೊತೆಗೆ ಸರ್ಕಾರವೇ ನಿರ್ಧಾರ ಮಾಡಿದಂತೆ ನೌಕರರ ವೇತನವನ್ನು ಇ-ಪಾವತಿ ಮಾಡುವಂತೆ ಒತ್ತಾಯಿಸಿದರು.
ಹಲವು ಗ್ರಾಪಂಗಳಲ್ಲಿ ನೌಕರರ ನೇಮಕಾತಿ ಅನುಮೋದನೆಗೊಂಡಿಲ್ಲ. ಅಂತಹ ನೌಕರರ ವೇತನÀವನ್ನು ಇ-ಪಾವತಿಗೆ ಅನುಮೋದನೆ ಮಾಡಲು ಆಗುತ್ತಿಲ್ಲ. ಆದ್ದರಿಂದ ಸರ್ಕಾರ ಅನು ಮೋದನೆ ಆಗದ ನೌಕರರಿಗೂ ಇ-ಪಾವತಿ ಮೂಲಕ ಸಂಬಳ ನೀಡಬೇಕು. ಅವರ ಸೇವಾ ಹಿರಿತನ ಪರಿಗಣ ಸಬೇಕು ಎಂದು ಒತ್ತಾಯಿಸಿದರು. ಅನುಮೋದನೆಗೊಳ್ಳದ ನೌಕರರ ವೇತನವನ್ನು ಇ-ಪಾವತಿಗೆ ಪತಿಗಣ ಸ ದಿದ್ದರೇ ತಾಲೂಕಿನಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸರ್ಕಾರ ನೌಕರರ ವೇತನದ ಮಾಹಿತಿ ಯನ್ನು ಆನ್‍ಲೈನ್‍ಗೆ ಕಳುಹಿಸಲು ಹೇಳಿ ಹಲವು ತಿಂಗಳು ಕಳೆದರೂ, ತಾಪಂ ಇಓ ಆನ್‍ಲೈನ್‍ಗೆ ಅಪ್‍ಲೋಡ್ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಕೂಡಲೇ ತಾಪಂ ಇಓ ಬಿ.ಎಸ್.ಸತೀಶ್ ಅವರು ಆನ್‍ಲೈನ್‍ಲ್ಲಿ ನೌಕರರ ಮಾಹಿತಿ ಅಳವಡಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ಕುಮಾರ್, ಪ್ರಧಾನ ಕಾರ್ಯದರ್ಶಿ ನಂಜಯ್ಯ, ಶಿವಣ್ಣ, ವೆಂಕ ಟೇಶ್, ಮಹದೇವಯ್ಯ, ಮಂಜುನಾಥ್, ನರಸಿಂಹಯ್ಯ, ತ್ರಿವೇಣ ಮತ್ತಿತರರಿದ್ದರು.
ಮದ್ದೂರು: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದ ತಾಲೂಕು ಸದಸ್ಯರು ಪಟ್ಟಣದ ತಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ತಾಲೂಕು ಶಾಖೆ ಪ್ರಧಾನ ಕಾರ್ಯ ದರ್ಶಿ ಜಿ.ಆರ್.ರಾಮು ಮಾತನಾಡಿ, ಸರ್ಕಾರದ ವತಿಯಿಂದ ಗ್ರಾಪಂ ನೌಕರರಿಗೆ ಇಎಫ್‍ಎಂಎಸ್ ಮೂಲಕ ವೇತನ ಪಾವತಿ ಆದೇಶವನ್ನು ಮಾ.3 ರಂದು ಮಾಡಲಾಗಿ ದೆಯಾದರೂ ಆದೇಶದ ನಂತರ ಅದರಲ್ಲಿನ ಗೊಂದಲಗಳ ನಿವಾರಣೆಗೆ ಹಾಗೂ ಮಾರ್ಗದರ್ಶಿ ವೇತನ ಪಾವತಿ ಕುರಿತು ಅನುಸರಿಸಬೇಕಾದ ನಿಯಾ ಮಾವಳಿಗಳನ್ನು ರೂಪಿಸಬೇಕೆಂದು ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೆ ಈ ಆದೇಶವನ್ನು ತ್ವರಿತಗತಿಯಲ್ಲಿ ಜಾರಿಗೊಳಿಸಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅವರು ಆರೋಪಿ ಸಿದರು.
ಮೇ 30ರೊಳಗೆ ಎಲ್ಲಾ ನೌಕರರ ಮಾಹಿತಿಯನ್ನು ಪಂಚತಂತ್ರದಲ್ಲಿ ಅಳವಡಿಸದಿದ್ದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಮತ್ತು ತಾಪಂ ಇಓ ಗಳನ್ನು ನೇರ ಹೊಣೆಗಾರರನ್ನಾಗಿ ಮಾಡು ವುದಾಗಿ ಮೇ 20ರಂದು ಸರ್ಕಾರಿ ಜರೂರು ಆದೇಶ ಮಾಡಿದ್ದರೂ ಈವರೆಗೂ ಅನು ಮೋದನೆ ಕಾರ್ಯ ಪೂರ್ಣಗೊಳ್ಳದಿ ರುವುದು ದುರಂತದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ತಮ್ಮ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ತಾಪಂ ಇಓ ಚಂದ್ರು ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಸಮಿತಿ ಅಧ್ಯಕ್ಷ ಕೆ.ಟಿ.ಮಂಜು, ಗೌರವಾಧ್ಯಕ್ಷ ಶಿವ ರಾಮು, ಖಜಾಂಚಿ ಕೆ.ಟಿ.ರಮೇಶ್, ಉಪಾ ಧ್ಯಕ್ಷ ಸಿ.ಎಂ.ಯೋಗೇಶ್, ಅನಿಲ್‍ಕುಮಾರ್, ಮಂಚೇಗೌಡ, ಜಗದೀಶ್, ಸಹಕಾರ್ಯ ದರ್ಶಿ ಬಿ.ಕೃಷ್ಣೇಗೌಡ, ಸಂಜೀವ ಕುಮಾರ್, ವೆಂಕಟೇಶ, ಬಸವರಾಜು ಸೇರಿದಂತೆ ಪದಾಧಿಕಾರಿಗಳು ಭಾಗವಹಿಸಿದ್ದರು.