ಸಾಲ ಮನ್ನಾಕ್ಕೆ ವಾರ ಕಾಯುತ್ತೇವೆ: ಬಿಎಸ್‍ವೈ
ಮೈಸೂರು

ಸಾಲ ಮನ್ನಾಕ್ಕೆ ವಾರ ಕಾಯುತ್ತೇವೆ: ಬಿಎಸ್‍ವೈ

May 29, 2018

ಬೆಂಗಳೂರು:  ರೈತರ ಸಾಲ ಮನ್ನಾಕ್ಕೆ ಇನ್ನೂ ಒಂದು ವಾರ ಕಾಯುತ್ತೇವೆ. ಮನ್ನಾ ಮಾಡದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ಇಂದು ಕರೆ ನೀಡಲಾಗಿದ್ದ ಸ್ವಯಂ ಕರ್ನಾಟಕ ಬಂದ್ ವೇಳೆ ಬಲ ಪ್ರಯೋಗ ಮಾಡಿ ಹತ್ತಿಕ್ಕುವ ಯತ್ನ ನಡೆದಿದೆ. ಇದರ ನಡುವೆಯೂ ಬಂದ್ ಯಶಸ್ವಿಯಾಗಿದೆ. ಇನ್ನೊಂದು ವಾರ ಕಾಯುತ್ತೇವೆ. ಸಾಲ ಮನ್ನಾ ಮಾಡದಿದ್ದಲ್ಲಿ ಬೀದಿಗಿಳಿದು ಉಗ್ರ ಹೋರಾಟ ನಡೆಸುವುದಾಗಿ ಹೇಳಿದರು.

Translate »