ಸರ್ಕಾರ ರಚನೆಗೆ ಬಿಜೆಪಿ ಭರದ ಸಿದ್ಧತೆ
ಮೈಸೂರು

ಸರ್ಕಾರ ರಚನೆಗೆ ಬಿಜೆಪಿ ಭರದ ಸಿದ್ಧತೆ

July 24, 2019

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ವಿಶ್ವಾಸಮತ ಸಾಬೀತು ಪಡಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದರೊಂದಿಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಅವಕಾಶ ಒದಗಿ ಬಂದಿದೆ.

ಈ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂ ರಪ್ಪ ತಮ್ಮ ಪಕ್ಷದ ಸದಸ್ಯರು ತಂಗಿರುವ ರಮಡ ರೆಸಾರ್ಟ್ ನಲ್ಲಿ ಶಾಸಕರ ಸಭೆ ನಡೆಸಿ, ಮುಂದಿನ ಉದ್ದೇಶಿತ ಬೆಳ ವಣಿಗೆಗಳ ಬಗ್ಗೆ ವಿವರ ನೀಡಿದ್ದಾರೆ. ಯಡಿಯೂರಪ್ಪ ಗುರು ವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ. ನಾಳೆ ಸಾಧ್ಯವಾದರೆ ದೆಹಲಿಗೆ ತೆರಳಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿ ಸರ್ಕಾರ ರಚನೆ ದಿನಾಂಕವನ್ನು ನಿಗದಿಪಡಿಸಿ ಕೊಳ್ಳಲಿದ್ದಾರೆ. ನಂತರ ರಾಜ್ಯಪಾಲರನ್ನು ಭೇಟಿ ಯಾಗಲಿ ರುವ ಯಡಿಯೂರಪ್ಪ,
ಸರ್ಕಾರ ರಚನೆ ಹಕ್ಕು ಮಂಡಿಸಲಿದ್ದಾರೆ. ಬಳಿಕ ರಾಜ್ಯಪಾಲರು ಸರ್ಕಾರ ರಚನೆಗೆ ಯಡಿಯೂರಪ್ಪರನ್ನು ಆಹ್ವಾನಿಸಲಿದ್ದಾರೆ. 224 ಸದಸ್ಯ ಬಲದ ವಿಧಾನಸಭೆಯಲ್ಲಿ

ಈಗ 20 ಶಾಸಕರು ರಾಜೀನಾಮೆ ಸಲ್ಲಿಸಿದ್ದು, ಇದರೊಂದಿಗೆ ಹಾಲಿ ಸದನದ ಸದಸ್ಯ ಬಲ 204ಕ್ಕೆ ಕುಸಿದಿದೆ. ಅದರಲ್ಲಿ ಬಿಜೆಪಿ 105 ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ 99 ಸದಸ್ಯರನ್ನು ಹೊಂದಿದೆ. ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮುವ ಮೂಲಕ ಬಿಜೆಪಿ ಸರ್ಕಾರ ರಚನೆ ಹಕ್ಕು ತಡೆದಿದ್ದು, ಯಡಿಯೂರಪ್ಪ ನೇತೃತ್ವದ ಹೊಸ ಸರ್ಕಾರ ರಚನೆಗೆ ಕ್ಷಣಗಣನೆ ಆರಂಭವಾಗಿದೆ. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಯಾರ್ಯಾರು ಮಂತ್ರಿಗಳಾಗಿ ಪದಗ್ರಹಣ ಮಾಡಲಿದ್ದಾರೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ಒಬ್ಬರು ಅಥವಾ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡಲಾಗುವುದು ಎಂಬ ಮಾತು ಕೇಳಿಬರುತ್ತಿದೆ.

20: 11 ಸೂತ್ರ: ಸರ್ಕಾರ ರಚಿಸಲು ತುದಿಗಾಲಲ್ಲಿ ನಿಂತಿರುವ ಬಿಜೆಪಿ ನಾಯಕರು ಈಗಾಗಲೇ ಯಡಿಯೂರಪ್ಪ ನೇತೃತ್ವದಲ್ಲಿ 23:11 ಸೂತ್ರದಡಿ ಮಂತ್ರಿ ಮಂಡಲ ರಚಿಸಲು ಸಜ್ಜಾಗಿದ್ದಾರೆ. ಯಡಿಯೂರಪ್ಪ ಅವರ ನೂತನ ಸರ್ಕಾರದಲ್ಲಿ ಇಬ್ಬರನ್ನು ಉಪಮುಖ್ಯಮಂತ್ರಿಯಾಗಿ ನೇಮಕ ಮಾಡುವ ನಿರ್ಧಾರವೂ ಆಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ರಾಜೀನಾಮೆ ನೀಡಿ ಬಂದಿರುವವರಲ್ಲಿ ಹನ್ನೊಂದು ಮಂದಿಗೆ ಮಂತ್ರಿ ಸ್ಥಾನಗಳನ್ನು ನೀಡಬೇಕು ಎಂದು ತೀರ್ಮಾನಿಸಲಾಗಿದೆ. ಸರ್ಕಾರ ರಚಿಸಲು ಬೆಂಬಲ ನೀಡಿರುವ ಈ ಶಾಸಕರಲ್ಲಿ ಹನ್ನೆರಡು ಮಂದಿ ತಮಗೆ ಮಂತ್ರಿಗಿರಿಬೇಕೆಂದು ಒತ್ತಾಯ ಮಾಡಿದ್ದು, ಅವರಿಗೆ ಕೊಟ್ಟಿರುವ ವಚನದ ಪ್ರಕಾರ ಆ ತಂಡದ ಹನ್ನೊಂದು ಮಂದಿಗೆ ಮಂತ್ರಿಗಿರಿ ನೀಡಲು ತೀರ್ಮಾನ ಮಾಡಲಾಗಿದೆ. ಉಳಿದಂತೆ ಮುಖ್ಯಮಂತ್ರಿ ಹುದ್ದೆ ಸೇರಿದಂತೆ ಬಿಜೆಪಿಯ ಇಪ್ಪತ್ಮೂರು ಮಂದಿಗೆ ಮಂತ್ರಿ ಮಂಡಲದಲ್ಲಿ ಸ್ಥಾನ ಕಲ್ಪಿಸಿಕೊಡಲು ತೀರ್ಮಾನಿಸಲಾಗಿದೆ. ಉಪಮುಖ್ಯಮಂತ್ರಿ ಹುದ್ದೆಗೇರಲು ಅರ್ಧ ಡಜನ್‍ನಷ್ಟು ಮಂದಿ ಸ್ಪರ್ಧೆಯಲ್ಲಿದ್ದರಾದರೂ ಇಬ್ಬರಿಗಿಂತ ಹೆಚ್ಚು ಮಂದಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವುದು ಸರಿಯಲ್ಲ ಎಂದು ಯಡಿಯೂರಪ್ಪ ಭಾವಿಸಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕೆ.ಎಸ್.ಈಶ್ವ ರಪ್ಪ ಹಾಗೂ ಆರ್.ಅಶೋಕ್ ಅವರು ಉಪಮುಖ್ಯಮಂತ್ರಿಗಳಾಗಿದ್ದರಾದರೂ ಈಗ ಆ ಹುದ್ದೆಗೇರಲು ಬಿ.ಶ್ರೀರಾಮುಲು, ಗೋವಿಂದ ಕಾರಜೋಳ್ ಸೇರಿದಂತೆ ಇನ್ನೂ ಹಲವು ಹೆಸರುಗಳು ಮುಂದೆ ಬಂದಿವೆ. ಈ ಮಧ್ಯೆ ಮಹಿಳಾ ಕೋಟಾದಡಿ ಮಂತ್ರಿಯಾಗಲು ಮೂರು ಮಂದಿ ಸ್ಪರ್ಧೆಯಲ್ಲಿದ್ದಾರಾರೂ ಶಶಿಕಲಾ ಜೊಲ್ಲೆ ಅವರಿಗೆ ಆ ಸ್ಥಾನವನ್ನು ನೀಡಬೇಕು ಎಂಬ ಅಭಿಪ್ರಾಯ ಪಕ್ಷದ ಬಹುತೇಕರಲ್ಲಿದೆ. ಸಂಪುಟರಚನೆ ನಂತರ ಭಿನ್ನಾಭಿಪ್ರಾಯಗಳಿದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸಬೇಕೇ ಹೊರತು ಬಹಿರಂಗವಾಗಿ ಮಾತನಾಡಬಾರದು ಎಂದು ತೀರ್ಮಾನಿಸಲಾಗಿದೆ.

Translate »