ವಿಧಾನಸಭೆಯಿಂದ ಪರಿಷತ್‍ಗೆ ಚುನಾವಣೆ ಬಿಜೆಪಿಯಲ್ಲಿ ಭಾರೀ ಲಾಬಿ ಐದು ಸ್ಥಾನಕ್ಕೆ ಹಲವರ ಪೈಪೋಟಿ
ಮೈಸೂರು

ವಿಧಾನಸಭೆಯಿಂದ ಪರಿಷತ್‍ಗೆ ಚುನಾವಣೆ ಬಿಜೆಪಿಯಲ್ಲಿ ಭಾರೀ ಲಾಬಿ ಐದು ಸ್ಥಾನಕ್ಕೆ ಹಲವರ ಪೈಪೋಟಿ

May 29, 2018

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‍ಗೆ ಜೂನ್ 11ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿಯಲ್ಲಿ ಭಾರೀ ಲಾಬಿ ಆರಂಭವಾಗಿದೆ.

ಹಾಲಿ ಸದಸ್ಯರಾದ ರಘುನಾಥ್ ಮಲ್ಕಾಪುರೆ, ಬಿ.ಜೆ.ಪುಟ್ಟಸ್ವಾಮಿ, ಸೋಮಣ್ಣ ಬೇವಿನ ಮರದ್, ಎಂ.ಬಿ.ಭಾನುಪ್ರಕಾಶ್ ಮತ್ತು ಡಿ.ಎಸ್.ವೀರಯ್ಯ ಅಧಿಕಾರಾವಧಿ ಜೂ.17ಕ್ಕೆ ಮುಗಿಯಲಿದೆ.

ತೆರವಾಗಲಿರುವ ಐದು ಸ್ಥಾನಗಳಿಗೆ ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಇದರಲ್ಲಿ ರಘನಾಥ್ ಮಲ್ಕಾಪುರೆ, ಬಿ.ಜೆ.ಪುಟ್ಟಸ್ವಾಮಿ, ಡಿ.ಎಸ್.ವೀರಯ್ಯ, ಭಾನುಪ್ರಕಾಶ್ ಮತ್ತೊಂದು ಅವಧಿಗೆ ಮರು ಆಯ್ಕೆ ಬಯಸಿದ್ದಾರೆ.

ಇನ್ನು ವಿಧಾಸಭೆ ಚುನಾವಣೆಯಲ್ಲಿ ಟಿಕೆಟ್ ವಂಚಿತರಾದ ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಗೌಡ, ರಘುನಾಥ್ ಮಲ್ಕಾಪುರೆ, ಪಕ್ಷದ ವಕ್ತಾರೆ ಹಾಗೂ ಮಾಜಿ ಸಂಸದೆ ತೇಜಸ್ವಿನಿ ರಮೇಶ್‍ಗೌಡ, ಉದ್ಯಮಿ ಕೆ.ಪಿ.ನಂಜುಂಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವಥ್‍ನಾರಾಯಣ, ಪಕ್ಷದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಸೇರಿದಂತೆ ಅನೇಕರು ಆಕಾಂಕ್ಷಿಗಳಾಗಿದ್ದಾರೆ.

ವಿಧಾನಸಭೆಯಲ್ಲಿ ಬಿಜೆಪಿ 104 ಸದಸ್ಯರನ್ನು ಹೊಂದಿರುವುದರಿಂದ ಮೇಲ್ಮನೆಗೆ ಐದು ಸದಸ್ಯರನ್ನು ಆಯ್ಕೆ ಮಾಡಲು ಅವಕಾಶವಿದೆ. ಎಲ್ಲರನ್ನು ಸಮಾಧಾನಪಡಿಸಿ ಯಾವುದೇ ರೀತಿಯ ಗೊಂದಲಕ್ಕೆ ಅವಕಾಶವಿಲ್ಲದಂತೆ

Translate »