ಮೈಸೂರು

ಮೈಸೂರಲ್ಲಿ ಪ್ರತಿಭಟನೆಗೆ ಸೀಮಿತವಾಗುವುದೇ ನಾಳಿನ ಬಂದ್?

December 4, 2020

ಮೈಸೂರು, ಡಿ.3(ಆರ್‍ಕೆ)-ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಕನ್ನಡ ಪರ ಸಂಘಟನೆ ಗಳು ಡಿ.5ರಂದು ಕರೆ ನೀಡಿರುವ ಕರ್ನಾಟಕ ಬಂದ್ ಮೈಸೂರಿನಲ್ಲಿ ಪ್ರತಿಭಟನೆಗೆ ಸೀಮಿತ ವಾಗಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ.

ರಾಜ್ಯ ಸರ್ಕಾರ ಘೋಷಿಸಿರುವ ಮರಾಠ ಅಭಿವೃದ್ಧಿ ನಿಗಮ ರದ್ದುಗೊಳಿಸುವಂತೆ ಆಗ್ರಹಿಸಿ ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಪರ ಸಂಘಟನೆಗಳು ಶನಿವಾರ ಕರೆ ನೀಡಿರುವ ಬಂದ್‍ಗೆ ಬೆಂಬಲ ಸೂಚಿಸಲು ಬಹುತೇಕ ಸಂಘ-ಸಂಸ್ಥೆಗಳು ನಿರಾಕರಿಸಿರುವುದರಿಂದ ಮೈಸೂರಲ್ಲಿ ಕೇವಲ ಪ್ರತಿಭಟನೆಗಷ್ಟೇ ಸೀಮಿತ ವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಡಿ.5ರ ಕರ್ನಾಟಕ ಬಂದ್‍ಗೆ ಮೈಸೂರು ಕನ್ನಡ ವೇದಿಕೆ, ಕನ್ನಡ ಚಳುವಳಿಗಾರರ ಸಂಘಟನೆ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆ ಗಳು ಬೆಂಬಲ ನೀಡುವುದಾಗಿ ಘೋಷಿಸಿ ರುವುದಲ್ಲದೆ, ಇಂದು ಟಾಂಗಾ ಓಡಿಸುವವರು, ಕೆಲ ಆಟೋ ಚಾಲಕರು ಮತ್ತು ಮಾಲೀಕರ ಸಂಘಗಳ ಪದಾಧಿಕಾರಿಗಳು, ಅಂಗಡಿ ಮಾಲೀ ಕರನ್ನು ಭೇಟಿ ಮಾಡಿ ಬಂದ್‍ಗೆ ಬೆಂಬಲ ನೀಡು ವಂತೆ ಮೈಸೂರಿನ ಕನ್ನಡಪರ ಸಂಘಟನೆ ಗಳು ಮನವಿ ಮಾಡಿವೆ. ಬಟ್ಟೆ ವ್ಯಾಪಾರಿಗಳು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಹಲವು ಉದ್ದಿಮೆದಾರರ ಸಂಘಗಳು ಬೆಂಬಲ ನೀಡು ವುದಾಗಿ ಹೇಳಿವೆ. ಬಲವಂತವಾಗಿ ಅಂಗಡಿ ಗಳನ್ನು ಮುಚ್ಚಿಸುವುದಿಲ್ಲ. ಆದರೆ ಕೈಮುಗಿದು ಮನವಿ ಮಾಡಿಕೊಳ್ಳುತ್ತೇವೆ ಎಂದು ಮೈಸೂರು ಕನ್ನಡ ವೇದಿಕೆ ಬಾಲಕೃಷ್ಣ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಆದರೆ ಬಂದ್‍ಗೆ ನಾವು ನೈತಿಕ ಬೆಂಬಲವನ್ನಷ್ಟೇ ನೀಡುತ್ತೇವೆಯೇ ಹೊರತು, ಉದ್ದಿಮೆ ಬಂದ್ ಮಾಡುವುದಿಲ್ಲ ಎಂದು ಹೋಟೆಲ್ ಮಾಲೀಕರ ಸಂಘ, ಟ್ರಾವೆಲ್ ಅಸೋಸಿಯೇಷನ್, ಪ್ರವಾಸಿ ವಾಹನ ಚಾಲಕ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘ, ಪ್ರವಾಸಿ ಮಾರ್ಗದರ್ಶಿಗಳ ಸಂಘ, ಪೆಟ್ರೋಲ್ ಡೀಲರ್ ಅಸೋಸಿಯೇಷನ್, ವರ್ತಕರ ಸಂಘ ಸೇರಿದಂತೆ ಮೈಸೂರಿನ ಬಹುತೇಕ ಉದ್ದಿಮೆದಾರರ ಸಂಘಗಳು ಶನಿವಾರದ ಬಂದ್ ಬೆಂಬ ಲಿಸದಿರಲು ನಿರ್ಧರಿಸಿವೆ. ಕಲ್ಯಾಣ ಮಂಟಪ, ಸಿನೆಮಾ ಮಂದಿರ, ಬಸ್, ಟ್ಯಾಕ್ಸಿ, ಆಟೋ ಸಂಚಾರ, ಅಂಗಡಿ-ಮುಂಗಟ್ಟು, ಕಾಲೇಜುಗಳು ಎಂದಿನಂತೆ ನಡೆಯಲಿದ್ದು, ಮೈಸೂರಲ್ಲಿ ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುವ ಸಾಧ್ಯತೆ ದಟ್ಟವಾಗಿರುವುದರಿಂದ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಮಾತ್ರ ಸರ್ಕಾರದ ಕ್ರಮ ಖಂಡಿಸಿ ಡಿ.5ರಂದು ಪ್ರತಿಭಟನೆ ನಡೆಸಲಿವೆ ಎಂದು ಮೂಲಗಳು ತಿಳಿಸಿವೆ.

Translate »