ಬಲವಂತ ಬಂದ್‍ಗೆ ಮುಂದಾದರೆ ಕಠಿಣ ಕ್ರಮ
ಮೈಸೂರು

ಬಲವಂತ ಬಂದ್‍ಗೆ ಮುಂದಾದರೆ ಕಠಿಣ ಕ್ರಮ

November 22, 2020

ಬೆಂಗಳೂರು, ನ.21(ಕೆಎಂಶಿ)- ಸಂಪುಟ ವಿಸ್ತರಣೆ ಬಗ್ಗೆ ಮೌನ ವಹಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ, ಬಲವಂತದಿಂದ ಬಂದ್ ಮಾಡಿದರೆ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ಮಂತ್ರಿಮಂಡಲವನ್ನು ಮೂರು ನಾಲ್ಕು ದಿನದಲ್ಲಿ ವಿಸ್ತರಿಸುವುದಾಗಿ ಹೇಳುತ್ತಿದ್ದರು. ಅದೇ ಪ್ರಶ್ನೆಯನ್ನು ಇಂದು ಪತ್ರಕರ್ತರು ಕೇಳಿದಾಗ ಕೋಪಗೊಂಡ ಮುಖ್ಯಮಂತ್ರಿಯವರು, ಏನೂ ಉತ್ತರ ನೀಡದೆ ತೆರಳಿದರು. ಅಷ್ಟೇ ಅಲ್ಲ, ಮರಾಠ ನಿಗಮದ ಆದೇಶವನ್ನು ಹಿಂದಕ್ಕೆ ಪಡೆ ಯುವ ವಿಚಾರದಲ್ಲೂ ಅವರು ಅದೇ ಧಾಟಿಯನ್ನು ಅನುಸರಿಸಿದರು. ಇದಕ್ಕೂ ಮುನ್ನ ಬಂದ್‍ಗೆ ಕರೆ ನೀಡಿರುವ ಸಂಘಟನೆಗಳ ವಿರುದ್ಧ ಕಿಡಿಕಾರಿರುವ ಮುಖ್ಯಮಂತ್ರಿಯವರು ನಾನು ಕನ್ನಡ ಮತ್ತು ಕನ್ನಡಿಗರ ಪರವಾಗಿದ್ದೇನೆ. ಈ ವಿಷಯದಲ್ಲಿ ಯಾವುದೇ ಸವಲತ್ತುಗಳನ್ನು ನೀಡಲು ನಾನು ಈಗಲೂ ಸಿದ್ಧ. ಬೇರೆ ಬೇರೆ ಕಾರಣಗಳಿಗೆ ಬಂದ್‍ಗೆ ಕರೆ ನೀಡಿ, ಕಾನೂನು ಸುವ್ಯವಸ್ಥೆ ಕೈಗೆತ್ತಿಕೊಂಡರೆ, ಅಂತಹವರಿಗೆ ಶಿಕ್ಷೆ ಕಾದಿದೆ ಎಂದು ಯಡಿಯೂರಪ್ಪ ಎಚ್ಚರಿಸಿದರು.

Translate »