ಗುಂಪುಮನೆ ಯೋಜನೆ ಅಧ್ಯಯನಕ್ಕೆ ನಾಳೆ ಬೆಂಗಳೂರಿಗೆ ಮುಡಾ ಅಧಿಕಾರಿಗಳ ತಂಡ
ಮೈಸೂರು

ಗುಂಪುಮನೆ ಯೋಜನೆ ಅಧ್ಯಯನಕ್ಕೆ ನಾಳೆ ಬೆಂಗಳೂರಿಗೆ ಮುಡಾ ಅಧಿಕಾರಿಗಳ ತಂಡ

November 22, 2020

ಮೈಸೂರು, ನ.21(ಆರ್‍ಕೆ)-ಸೂರಿಲ್ಲದವರಿಗೆ ಕೈಗೆಟಕುವ ಬೆಲೆ ಯಲ್ಲಿ ಸೂರು ಕಲ್ಪಿಸಲು ಮುಡಾ ನಿರ್ಧರಿಸಿದೆ. ಈ ಯೋಜನೆ ಅನು ಷ್ಠಾನಗೊಳಿಸಲು ತೀರ್ಮಾನಿಸಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಸೋಮವಾರ (ನ.23) ಅಧಿಕಾರಿಗಳ ತಂಡವು ಬೆಂಗಳೂರಿಗೆ ತೆರಳಿ ಬಿಡಿಎ ವತಿಯಿಂದ ನಿರ್ಮಿಸಿರುವ ಹೈರೈಸ್ ಗುಂಪು ಮನೆಗಳ ಸಮುಚ್ಛಯ ಕಟ್ಟಡಗಳನ್ನು ಖುದ್ದು ಅಧ್ಯಯನ ಮಾಡಲಿದೆ ಎಂದರು.

ಮೈಸೂರಿನ ರಿಂಗ್‍ರಸ್ತೆ ಒಳಗೆ ವಿವಿಧ ಬಡಾವಣೆಗಳಲ್ಲಿರುವ ಮುಡಾಗೆ ಸೇರಿದ ಜಾಗಗಳಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳೊಂದಿಗೆ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಿ ವಿವಿಧ ಅಳತೆಯ ಮನೆಗಳನ್ನು ಲಾಭ-ನಷ್ಟವಿಲ್ಲದೆ ಕೈಗೆಟಕುವ ದರದಲ್ಲಿ ಆಕಾಂಕ್ಷಿಗಳಿಗೆ ನಿಯಮಾನುಸಾರ ಹಂಚಿಕೆ ಮಾಡಲು ಪ್ರಾಧಿಕಾರವು ಯೋಜನೆ ರೂಪಿಸಿದೆ ಎಂದರು.

ಕೆಲ ಬಿಲ್ಡರ್‍ಗಳು, ಕಟ್ಟಡ ನಿರ್ಮಾಣ ಕ್ಷೇತ್ರದ ಹಲವು ಸಂಸ್ಥೆಗಳು ಗುಂಪು ಮನೆ ಯೋಜನೆಗೆ ಸಹಕಾರ ನೀಡಲು ಮುಂದಾಗಿರುವುದರಿಂದ ಅತೀ ಶೀಘ್ರ ಟೆಂಡರ್ ಕರೆದು ಕಾಮಗಾರಿ ಆರಂಭಿಸುವುದಾಗಿ ತಿಳಿಸಿದ ಅವರು ಒಳಚರಂಡಿ, ರಸ್ತೆ, ವಿದ್ಯುತ್, ಕುಡಿಯುವ ನೀರು, ವಾಹನ ನಿಲುಗಡೆ ಸ್ಥಳ, ಎಸ್‍ಟಿಪಿಯಂತಹ ಮೂಲ ಸೌಕರ್ಯದೊಂದಿಗೆ ಬಹುಮಹಡಿಗಳ ಕಟ್ಟಡ ನಿರ್ಮಿಸಿ ನಿವೇಶನ ಹಾಗೂ ಮನೆ ಇಲ್ಲದವರಿಗೆ ಹಂಚಿಕೆ ಮಾಡಲಾಗುವುದು ಎಂದರು.

Translate »