ಮೈಸೂರಿನ ರಿಂಗ್ ರಸ್ತೆಯಲ್ಲಿ ತ್ಯಾಜ್ಯ ಸುರಿದರೆ ಕಠಿಣ ಕ್ರಮ
ಮೈಸೂರು

ಮೈಸೂರಿನ ರಿಂಗ್ ರಸ್ತೆಯಲ್ಲಿ ತ್ಯಾಜ್ಯ ಸುರಿದರೆ ಕಠಿಣ ಕ್ರಮ

November 22, 2020

ಮೈಸೂರು, ನ.21(ಆರ್‍ಕೆ)- ಸ್ವಚ್ಛ ನಗರ ಖ್ಯಾತಿ ಪಡೆದಿರುವ ಮೈಸೂರಿನ ರಿಂಗ್ ರಸ್ತೆ ಬದಿ ಘನ ತ್ಯಾಜ್ಯ, ಕಟ್ಟಡ ತ್ಯಾಜ್ಯ ಸುರಿದು ಅನೈರ್ಮಲ್ಯ ಉಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಎಚ್ಚರಿಸಿದ್ದಾರೆ. ಮುಡಾ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ರಿಂಗ್ ರಸ್ತೆ ಬದಿ ಸಾರ್ವಜನಿಕರು ಕಟ್ಟಡ ತ್ಯಾಜ್ಯ (ಡಬ್ರಿಸ್)ಗಳನ್ನು ಸುರಿಯುತ್ತಿರು ವುದರಿಂದ ಮೈಸೂರಿನ ಸೌಂದ ರ್ಯದ ಜೊತೆಗೆ ಸ್ವಚ್ಛತೆಗೆ ಧಕ್ಕೆ ಉಂಟಾಗುತ್ತಿದೆಯಾದ್ಧರಿಂದ ನಾಗರಿ ಕರು ಕಸ ಹಾಗೂ ಕಟ್ಟಡ ತ್ಯಾಜ್ಯವನ್ನು ತಂದು ಸುರಿಯಬಾರದೆಂದು ತಿಳಿಸಿದರು.

13 ಸ್ಥಳಗಳನ್ನು ‘ಹಾಟ್‍ಸ್ಪಾಟ್’ಗಳೆಂದು ಗುರ್ತಿಸಲಾಗಿದೆ. ಸ್ವಚ್ಛತೆ ಕಾಪಾ ಡುವ ದೃಷ್ಟಿಯಿಂದ ಪ್ರಾಧಿಕಾರವು ನ.28ರೊಳಗಾಗಿ ರಿಂಗ್ ರಸ್ತೆ ಬದಿಯಲ್ಲಿರುವ ತ್ಯಾಜ್ಯಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲು ಕಾರ್ಯಕ್ರಮ ರೂಪಿಸಿದೆ ಎಂದರು. ಇನ್ನು ಮುಂದೆ ರಿಂಗ್ ರಸ್ತೆ ಬದಿಯಲ್ಲಿ ಕಸ ಸುರಿಯುವುದನ್ನು ನಿಷೇಧಿಸಿದ್ದು, ಪಾಲಿಕೆ ನಿಗದಿಪಡಿಸಿರುವ ಸೀವೆಜ್ ಫಾರ್ಮನಲ್ಲಿಯೇ ಮುಡಾ, ಮೈಸೂರು ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳನ್ನೊಳ ಗೊಂಡ ಜಾಗೃತದಳ ರಚಿಸಲಾಗಿದ್ದು, ರಿಂಗ್ ರಸ್ತೆ ಬದಿ ಯಾವುದೇ ಬಗೆಯ ತ್ಯಾಜ್ಯ ಸುರಿಯದಂತೆ ಎಚ್ಚರ ವಹಿಸಲಾಗುವುದು. ಸಿಕ್ಕಿಬಿದ್ದವರ ವಿರುದ್ಧ ಕಠಿಣ ಕಾನೂನು ಕ್ರಮ ವಹಿಸುವ ಬಗ್ಗೆ ಶುಕ್ರವಾರ ನಡೆದ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ರಿಂಗ್ ರಸ್ತೆಯ 30 ಸ್ಥಳಗಳಲ್ಲಿ ಡಬ್ರಿಸ್‍ಗಳನ್ನು ಸುರಿಯುತ್ತಿದ್ದು, ಆ ಪೈಕಿ ವಿಲೇವಾರಿ ಮಾಡಬೇಕು. ಒಂದು ವೇಳೆ ಅತಿಕ್ರಮ ಪ್ರವೇಶ ಮಾಡಿ ಕಟ್ಟಡ ತ್ಯಾಜ್ಯ ಸುರಿಯುವುದು ಕಂಡುಬಂದಲ್ಲಿ ಫೋಟೋ ಅಥವಾ ವಿಡಿಯೋ ತೆಗೆದು ಮೊಬೈಲ್ ಸಂಖ್ಯೆ 88840-00750ಗೆ ಕಳುಹಿಸುವಂತೆ ರಾಜೀವ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Translate »