ಮೈಸೂರು, ನ.21(ಆರ್‍ಕೆ)- ಸ್ವಚ್ಛ ನಗರ ಖ್ಯಾತಿ ಪಡೆದಿರುವ ಮೈಸೂರಿನ ರಿಂಗ್ ರಸ್ತೆ ಬದಿ ಘನ ತ್ಯಾಜ್ಯ, ಕಟ್ಟಡ ತ್ಯಾಜ್ಯ ಸುರಿದು ಅನೈರ್ಮಲ್ಯ ಉಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಎಚ್ಚರಿಸಿದ್ದಾರೆ. ಮುಡಾ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ರಿಂಗ್ ರಸ್ತೆ ಬದಿ ಸಾರ್ವಜನಿಕರು ಕಟ್ಟಡ ತ್ಯಾಜ್ಯ (ಡಬ್ರಿಸ್)ಗಳನ್ನು ಸುರಿಯುತ್ತಿರು ವುದರಿಂದ ಮೈಸೂರಿನ ಸೌಂದ ರ್ಯದ ಜೊತೆಗೆ ಸ್ವಚ್ಛತೆಗೆ ಧಕ್ಕೆ ಉಂಟಾಗುತ್ತಿದೆಯಾದ್ಧರಿಂದ ನಾಗರಿ ಕರು ಕಸ ಹಾಗೂ ಕಟ್ಟಡ ತ್ಯಾಜ್ಯವನ್ನು…
ಕಂಡ ಕಂಡಲ್ಲಿ ತ್ಯಾಜ್ಯ ವಿಲೇವಾರಿ ಪಿಡಬ್ಲ್ಯೂಡಿ ಗುತ್ತಿಗೆದಾರನಿಗೆ 10 ಸಾವಿರ ದಂಡ
June 9, 2020ಮೈಸೂರು, ಜೂ.8(ಎಸ್‍ಬಿಡಿ)- ಸರ್ಕಾರಿ ಜಾಗದಲ್ಲಿ ಕಟ್ಟಡ ತ್ಯಾಜ್ಯ ಹಾಕಿದ ಪಿಡಬ್ಲ್ಯೂಡಿ ಗುತ್ತಿಗೆದಾರನಿಗೆ ಮೈಸೂರು ನಗರ ಪಾಲಿಕೆ 10 ಸಾವಿರ ರೂ. ದಂಡ ವಿಧಿಸಿದೆ. ಪಾಲಿಕೆ ವಲಯ ಕಚೇರಿ 2ರ ವ್ಯಾಪ್ತಿಯಲ್ಲಿರುವ ಚಿಕ್ಕಹರದನಹಳ್ಳಿಯ ಚಂದಶೇಖರ್, ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯ ಹಾಕಿದ ತಪ್ಪಿಗೆ ದಂಡ ತೆತ್ತಿದ್ದಾರೆ. ಇವರು ತಮ್ಮ ಹಳೇ ಮನೆಯನ್ನು ಕೆಡವಿ, ತ್ಯಾಜ್ಯ ವನ್ನು ಸರ್ಕಾರಿ ಪಾಳು ಜಾಗದಲ್ಲಿ ಸುರಿಸಿದ್ದರು. ಅದಾಗಲೇ ಏಳೆಂಟು ಟಾಕ್ಟರ್ ತ್ಯಾಜ್ಯ ಸುರಿಯಲಾಗಿತ್ತು. ಮತ್ತೊಂದು ಲೋಡ್ ತಂದು ಸುರಿಯುವ ಸಂದರ್ಭದಲ್ಲಿ ಪರಿಸರ ವಿಜ್ಞಾನಿ ಸ್ಫೂರ್ತಿ,…
ಬೈಕ್‍ಗೆ ಟಿಪ್ಪರ್ ಡಿಕ್ಕಿ: ಸವಾರ ಸಾವು
July 23, 2018ಮೈಸೂರು: ಬೈಕ್‍ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಿಂಗ್ ರಸ್ತೆಯ ರಾಯಲ್ ಇನ್ ಹೋಟೆಲ್ ಸಿಗ್ನಲ್ ಬಳಿ ಶನಿವಾರ ನಡೆದಿದೆ. ಜಯರಾಮು ಮೃತಪಟ್ಟವರು. ಇವರು ಬೈಕ್ (ಕೆಎ09ವಿ1437)ನಲ್ಲಿ ಶನಿವಾರ ಬೆಳಿಗ್ಗೆ ರಿಂಗ್ ರಸ್ತೆಯ ರಾಯಲ್ ಇನ್ ಹೋಟೇಲ್ ಸಿಗ್ನಲ್ ಲೈಟ್ ಜಂಕ್ಷನ್ ಬಳಿ ಹೋಗುತ್ತಿದ್ದಾಗ ಸಿಗ್ನಲ್ ಇದ್ದರೂ ಬಲಭಾಗದಿಂದ ವೇಗವಾಗಿ ಬಂದ ಟಿಪ್ಪರ್ (ಕೆಎ11 ಬಿ5376) ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಕೆಳಗೆ ಬಿದ್ದಿದ್ದಾರೆ. ಈ ವೇಳೆ…
ಆಗಸ್ಟ್ ಎರಡನೇ ವಾರದಲ್ಲಿ ಪೂರ್ವ ಪ್ರಾದೇಶಿಕ ಸಾರಿಗೆ ಇಲಾಖೆ ಹೊಸ ಕಚೇರಿ ಆರಂಭ
July 13, 2018ಕೊನೆಗೂ ಬಾಡಿಗೆ ಕಟ್ಟಡದಿಂದ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಸುಸಜ್ಜಿತ ಕಟ್ಟಡದಲ್ಲಿ ಚಟುವಟಿಕೆ ಆರಂಭವಾಗಲಿದೆ ಮೈಸೂರು: ಮೈಸೂರಿನ ರಿಂಗ್ ರಸ್ತೆಯಲ್ಲಿ ನಾರಾಯಣ ಹೃದಯಾಲಯದ ಬಳಿ ಕಳೆದ ಎರಡು ವರ್ಷದ ಹಿಂದೆ 9.30 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಿರುವ ಪ್ರಾದೇಶಿಕ ಸಾರಿಗೆ ಇಲಾಖೆಯ ಪೂರ್ವ ಕಚೇರಿ ಹಾಗೂ ಡ್ರೈವಿಂಗ್ ಟ್ರಾಕ್ ಕೊನೆಗೂ ಕಾರ್ಯ ನಿರ್ವಹಿಸುವುದಕ್ಕೆ ಕಾಲಸನ್ನಿಹಿತವಾಗಿದ್ದು, ಆಗಸ್ಟ್ ತಿಂಗಳ ಎರಡನೇ ವಾರದಲ್ಲಿ ನೂತನ ಕಚೇರಿಗೆ ಚಟುವಟಿಕೆ ಸ್ಥಳಾಂತರ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಚಾಲನೆಯಲ್ಲಿ ನೈಪುಣ್ಯತೆ ಹೊಂದಿರುವವರಿಗೆ ಹಾಗೂ ಸಂಚಾರಿ…
ಮೈಸೂರು ರಿಂಗ್ ರಸ್ತೆ ಬೀದಿ ದೀಪ ಇನ್ನು ಮೂರು ತಿಂಗಳ ಕಾಲ ಮುಡಾ ನಿರ್ವಹಣೆ
July 6, 2018ಸಂಸದ ಪ್ರತಾಪ್ ಸಿಂಹ ನೇತೃತ್ವದ ಮುಡಾ, ಪಾಲಿಕೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ, ನಿರ್ಧಾರ ಮೈಸೂರು: ಮೈಸೂರಿನ ರಿಂಗ್ ರಸ್ತೆಯ ಬೀದಿ ದೀಪ ನಿರ್ವಹಣೆಯನ್ನು ಮೂರು ತಿಂಗಳ ಅವಧಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಹಿಸಿಕೊಳ್ಳಲು ಸಂಸದ ಪ್ರತಾಪ್ ಸಿಂಹ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ನಿರ್ಣಯಿಸಲಾಗಿದ್ದು, ಸದ್ಯ ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಕ್ಕಿದೆ. ವರ್ಷದ ಹಿಂದೆಯಷ್ಟೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ತನ್ನ ಉಸ್ತುವಾರಿಯಲ್ಲಿದ್ದ ಮೈಸೂರು ರಿಂಗ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ…
ರಿಂಗ್ ರಸ್ತೆಯಲ್ಲಿ ಬಾರ್‍ಗಳಿಂದ ಅಪಘಾತ: ಸಂಸದ ಪ್ರತಾಪ್ ಸಿಂಹ ಅಸಮಾಧಾನ
July 4, 2018ಮೈಸೂರು: ರಿಂಗ್ ರಸ್ತೆಯಲ್ಲಿ ತಲೆ ಎತ್ತಿರುವ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ವೈನ್ ಸ್ಟೋರ್‍ಗಳಿಂದ ಅಪಘಾತಗಳು ಸಂಭವಿಸುತ್ತಿವೆ ಎಂದು ಸಂಸದ ಪ್ರತಾಪ್ ಸಿಂಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿನಕಲ್ ಬಳಿ ರಿಂಗ್ ರೋಡ್ ಜಂಕ್ಷನ್‍ನಲ್ಲಿ ಫ್ಲೈಓವರ್ ಕಾಮಗಾರಿ ಪರಿಶೀಲನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಿಂಗ್ ರಸ್ತೆ ಇರುವುದು ಮೈಸೂರು ನಗರದ ವಾಹನ ದಟ್ಟಣೆ ತಪ್ಪಿಸುವುದಕ್ಕೆ. ಅಪಘಾತಗಳನ್ನು ನಿಯಂತ್ರಿಸಿ ಜನರ ಪ್ರಾಣ ಉಳಿಸಬೇಕೆಂಬ ಉದ್ದೇಶದಿಂದ ನಿರ್ಮಾಣವಾದ ರಿಂಗ್ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿದೆ. ಇಲ್ಲಿ ಬಾರ್ ಮತ್ತು…
ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುವ ಹಾವಳಿಗೆ ಕಡಿವಾಣ ಹಾಕದ ಅಧಿಕಾರಿ ವರ್ಗ
June 18, 2018ಮೈಸೂರು: ಮೈಸೂರಿನ ರಿಂಗ್‍ರಸ್ತೆ ಬದಿಯಲ್ಲಿ ಕಟ್ಟಡ ತ್ಯಾಜ್ಯದ ರಾಶಿ ಹೆಚ್ಚುತ್ತಿದ್ದರೂ ನಗರ ಪಾಲಿಕೆ ನಿರ್ಲಕ್ಷ್ಯ ವಹಿಸಿರುವ ಪರಿಣಾಮ ನಗರದ ಪ್ರಮುಖ ರಸ್ತೆಗಳೂ ಇದಕ್ಕೆ ಗುರಿಯಾಗುತ್ತಿವೆ. ಕೆಆರ್‍ಎಸ್ ರಸ್ತೆಯಲ್ಲಿ ಇಎಸ್‍ಐ ಆಸ್ಪತ್ರೆ ಹಾಗೂ ಶಿವಮ್ಮ ಮಹದೇವಪ್ಪ ಕಲ್ಯಾಣ ಮಂಟಪದ ನಡುವೆ ರಸ್ತೆ ಬದಿಯಲ್ಲಿ ಕಟ್ಟಡ ತ್ಯಾಜ್ಯವನ್ನು ಸುರಿಯಲಾಗಿದೆ. ಈ ರಸ್ತೆಯಲ್ಲಿ ಸದಾ ವಾಹನ ಸಂಚಾರವಿರುವ ಕಾರಣ ಯಾರೋ ಕಿಡಿಗೇಡಿಗಳು ರಾತ್ರಿ ವೇಳೆ ಕಟ್ಟಡ ತ್ಯಾಜ್ಯವನ್ನು ವಾಹನಗಳಲ್ಲಿ ತಂದು ಸುರಿದು ಹೋಗಿದ್ದಾರೆ. ಕೆಆರ್‍ಎಸ್‍ನಿಂದ ಮೈಸೂರಿಗೆ ಬರುವ ಪ್ರವಾಸಿಗರಿಗೆ ಸ್ವಚ್ಛ ನಗರದ…