ಕಂಡ ಕಂಡಲ್ಲಿ ತ್ಯಾಜ್ಯ ವಿಲೇವಾರಿ ಪಿಡಬ್ಲ್ಯೂಡಿ ಗುತ್ತಿಗೆದಾರನಿಗೆ 10 ಸಾವಿರ ದಂಡ
ಮೈಸೂರು

ಕಂಡ ಕಂಡಲ್ಲಿ ತ್ಯಾಜ್ಯ ವಿಲೇವಾರಿ ಪಿಡಬ್ಲ್ಯೂಡಿ ಗುತ್ತಿಗೆದಾರನಿಗೆ 10 ಸಾವಿರ ದಂಡ

June 9, 2020

ಮೈಸೂರು, ಜೂ.8(ಎಸ್‍ಬಿಡಿ)- ಸರ್ಕಾರಿ ಜಾಗದಲ್ಲಿ ಕಟ್ಟಡ ತ್ಯಾಜ್ಯ ಹಾಕಿದ ಪಿಡಬ್ಲ್ಯೂಡಿ ಗುತ್ತಿಗೆದಾರನಿಗೆ ಮೈಸೂರು ನಗರ ಪಾಲಿಕೆ 10 ಸಾವಿರ ರೂ. ದಂಡ ವಿಧಿಸಿದೆ. ಪಾಲಿಕೆ ವಲಯ ಕಚೇರಿ 2ರ ವ್ಯಾಪ್ತಿಯಲ್ಲಿರುವ ಚಿಕ್ಕಹರದನಹಳ್ಳಿಯ ಚಂದಶೇಖರ್, ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯ ಹಾಕಿದ ತಪ್ಪಿಗೆ ದಂಡ ತೆತ್ತಿದ್ದಾರೆ. ಇವರು ತಮ್ಮ ಹಳೇ ಮನೆಯನ್ನು ಕೆಡವಿ, ತ್ಯಾಜ್ಯ ವನ್ನು ಸರ್ಕಾರಿ ಪಾಳು ಜಾಗದಲ್ಲಿ ಸುರಿಸಿದ್ದರು. ಅದಾಗಲೇ ಏಳೆಂಟು ಟಾಕ್ಟರ್ ತ್ಯಾಜ್ಯ ಸುರಿಯಲಾಗಿತ್ತು. ಮತ್ತೊಂದು ಲೋಡ್ ತಂದು ಸುರಿಯುವ ಸಂದರ್ಭದಲ್ಲಿ ಪರಿಸರ ವಿಜ್ಞಾನಿ ಸ್ಫೂರ್ತಿ, ಆರೋಗ್ಯ ನಿರೀಕ್ಷಕ ಬಸವ ರಾಜ್ ಹಾಗೂ ಸಿಬ್ಬಂದಿ, ಕಾರ್ಯಾ ಚರಣೆ ನಡೆಸಿದ್ದಾರೆಂದು ಪಾಲಿಕೆ ಆರೋ ಗ್ಯಾಧಿಕಾರಿ ಡಾ.ನಾಗರಾಜು ತಿಳಿಸಿದರು.

ನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಳೇ ಕಟ್ಟಡ ಗಳನ್ನು ಕೆಡವಲು ನಿಗದಿತ ಶುಲ್ಕ ಪಾವ ತಿಸಿ, ಅನುಮತಿ ಪಡೆಯಬೇಕು. ಕಟ್ಟಡ ತ್ಯಾಜ್ಯವನ್ನು ಪಾಲಿಕೆ ಸೂಚಿಸಿದ ನಿಗದಿತ ಪದೇಶಕ್ಕೆ ವಿಲೇವಾರಿ ಮಾಡಬೇಕು. ಹೀಗೆ ಎಲ್ಲೆಂದರಲ್ಲಿ ಹಾಕಿದರೆ ಬಾರೀ ದಂಡ ತೆರ ಬೇಕಾಗುತ್ತದೆ. ಇಂತಹ ಘಟನೆಗಳು ಕಂಡು ಬಂದರೆ ಸಾರ್ವಜನಿಕರು ಪಾಲಿಕೆ ಗಮನಕ್ಕೆ ತರಬೇಕೆಂದು ಅವರು ಮನವಿ ಮಾಡಿದರು.

ರಿಂಗ್ ರಸ್ತೆಗೆಂದು ಮುಕ್ತಿ: ತ್ಯಾಜ್ಯ ಸುರಿಯುವುದು ಆಕಸ್ಮಿಕವಾಗಿ ಕಾಣಿಸಿದರೆ ಮಾತ್ರ ಪಾಲಿಕೆ ಅಧಿಕಾರಿಗಳು ದಂಡ ವಿಧಿಸುತ್ತಿ ದ್ದಾರೆ. ಹೊರತಾಗಿ ಯಾವುದೇ ಕಾರ್ಯಾ ಚರಣೆ ನಡೆಸುವುದಿಲ್ಲ. ಪರಿಣಾಮ ವಿಜಯ ನಗರ ಸೇರಿದಂತೆ ಹಲವು ಬಡಾವಣೆಗಳ ಖಾಲಿ ಜಾಗ, ರಸ್ತೆ ಬದಿಯಲ್ಲಿ ಕಟ್ಟಡ ತ್ಯಾಜ್ಯದ ರಾಶಿ ಬಿದ್ದಿದೆ. ಅದರಲ್ಲೂ ನಗರದ ರಿಂಗ್ ರಸ್ತೆಯಂತೂ ತ್ಯಾಜ್ಯ ವಿಲೇವಾರಿ ಪದೇಶವಾಗಿಬಿಟ್ಟಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು ಸಮೀಪದ ಹಲವು ಗಾಮಗಳ ತ್ಯಾಜ್ಯ ರಿಂಗ್ ರಸ್ತೆಗೆ ಸೇರುತ್ತಿದೆ. ಕಟ್ಟಡ ತ್ಯಾಜ್ಯ, ಮಾಂಸದಂಗಡಿ ತ್ಯಾಜ್ಯ, ಕೋಳಿ ಫಾರಂ ತ್ಯಾಜ್ಯ, ಸತ್ತ ಪಾಣಿಗಳು ಹೀಗೆ ಎಲ್ಲವನ್ನೂ ರಿಂಗ್ ರಸ್ತೆ ಇಕ್ಕೆಲಗಳಿಗೆ ಸುರಿದು ಹೋಗುತ್ತಾರೆ. `ಸ್ವಚ್ಛ ನಗರಿಯ ಸುತ್ತ ತ್ಯಾಜ್ಯದ ವೃತ್ತ’ ಎಂಬಂತಾಗಿದೆ. ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಪಾಲಿಕೆ ಕೈಕಟ್ಟಿ ಕುಳಿತಿದ್ದರೆ, ಇದರ ನಿರ್ವಹಣೆ ನಮ್ಮಿಂದ ಸಾಧ್ಯವಿಲ್ಲ ಎಂಬುದು ಗಾಪಂಗಳ ವಾದವಾಗಿದೆ. ಪರಿಣಾಮ ಹಲವು ವರ್ಷ ಗಳಿಂದ ಈ ಸಮಸ್ಯೆ ಕಗ್ಗಂಟಾಗಿ ಉಳಿದಿದೆ.

ಇತ್ತೀಚೆಗೆ ಗಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪನವರು ಮೈಸೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿ, ಸದ್ಯಕ್ಕೆ ಪಾಲಿಕೆ ಸಹಕಾರದೊಂದಿಗೆ ತ್ಯಾಜ್ಯ ವಿಲೇವಾರಿ ನಡೆಸು ವಂತೆ ಸೂಚಿಸಿದ್ದರು. ಮನೆಗಳಿಂದ ಒಣ ಹಾಗೂ ಹಸಿ ಕಸವನ್ನು ಪತ್ಯೇಕವಾಗಿ ಸಂಗಹಿಸಿ ನೀಡುವುದರ ಜೊತೆಗೆ ಸಾಗಣಿ ವೆಚ್ಚ ಭರಿಸಿದರೆ ತ್ಯಾಜ್ಯ ವಿಲೇವಾರಿಗೆ ಪಾಲಿಕೆ ಸಿದ್ಧವಿದೆ. ಆದರೆ ಈ ನಿಟ್ಟಿನಲ್ಲಿ ಯಾವುದೇ ಬೆಳವಣಿಗೆ ನಡೆದಂತಿಲ್ಲ. ದಿನೇ ದಿನೆ ರಿಂಗ್ ರಸ್ತೆ ತ್ಯಾಜ್ಯದ ರಾಶಿ ಬೆಳೆಯುತ್ತಲೇ ಇದೆ.

 

 

Translate »