ಮೈಸೂರು ಮೃಗಾಲಯಕ್ಕೆ ಮತ್ತೆ ಪ್ರವೇಶಾವಕಾಶ
ಮೈಸೂರು

ಮೈಸೂರು ಮೃಗಾಲಯಕ್ಕೆ ಮತ್ತೆ ಪ್ರವೇಶಾವಕಾಶ

June 9, 2020

ಮೈಸೂರು, ಜೂ. 8(ಎಂಟಿವೈ)- ಲಾಕ್ ಡೌನ್‍ನಿಂದಾಗಿ ಕಳೆದ 86 ದಿನಗಳಿಂದ ಬಂದ್ ಆಗಿದ್ದ ಮೈಸೂರು ಮೃಗಾಲಯಕ್ಕೆ ಸಾರ್ವಜನಿಕರಿಗೆ ಇಂದಿನಿಂದ ಪ್ರವೇಶ ಕಲ್ಪಿಸ ಲಾಯಿತು. ಸಂಸದೆ ಸುಮಲತಾ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಸೋಮವಾರ ಬೆಳಗ್ಗೆ ಉಪಸ್ಥಿತರಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಪರಿಶೀಲಿಸಿ, ಜನರ ಪ್ರವೇಶಾವಕಾಶಕ್ಕೆ ಚಾಲನೆ ನೀಡಿದರು.

ಹಕ್ಕಿಜ್ವರದ ಪರಿಣಾಮ ಮಾ.14ರಿಂದ ಬಂದ್ ಆಗಿದ್ದ ಮೃಗಾಲಯವನ್ನು, ಲಾಕ್ ಡೌನ್ ಅವಧಿಯಲ್ಲೂ ಬಂದ್ ಮಾಡ ಲಾಗಿತ್ತು. ಸೋಮವಾರ ಬೆಳಗ್ಗೆ ಮೃಗಾ ಲಯದಲ್ಲಿ ತಾಯಿ ಚಾಮುಂಡೇಶ್ವರಿ ವಿಗ್ರಹಕ್ಕೆ ಪೂಜೆ ಸಲ್ಲಿಸಿ, ಪ್ರವಾಸಿಗರು ಬರುವ ಗೇಟ್ ನಲ್ಲಿ ಟೇಪು ಕತ್ತರಿಸುವ ಮೂಲಕ ಪ್ರವಾಸಿ ಗರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಯಿತು.

ಬಳಿಕ ಮೃಗಾಲಯದ ಆವರಣದಲ್ಲಿ ರುವ ಆ್ಯಂಪಿ ಥಿಯೇಟರ್‍ನಲ್ಲಿ ನಡೆದ ಪುನ ರಾರಂಭದ ಸಭಾ ಕಾರ್ಯಕ್ರಮದಲ್ಲಿ ಮೃಗಾ ಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ಮೂರು ತಿಂಗಳು ಲಾಕ್‍ಡೌನ್ ಆಗಿದ್ದರಿಂದ ಮೃಗಾಲಯಕ್ಕೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸ ಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರವಾಸಿಗರು ಇಲ್ಲದೆ ಮೃಗಾಲಯದ ಆದಾಯ ಮೂಲಕ್ಕೆ ಹೊಡೆತ ಬಿದ್ದಿತ್ತು. ಸಿಬ್ಬಂದಿ ವೇತನಕ್ಕೂ ಕಷ್ಟವಾಗಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿ ಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಪ್ರಾಣಿ -ಪಕ್ಷಿಗಳಲ್ಲದೆ, ಮೃಗಾಲಯದ ಸಿಬ್ಬಂದಿ ಗಳ ಹಿತಕಾಯುವ ನಿಟ್ಟಿನಲ್ಲಿ ಐದು ಹಂತ ಗಳಲ್ಲಿ ತಮ್ಮ ಕ್ಷೇತ್ರದ ಜನತೆಯಿಂದ, ಆಪ್ತರಿಂದ 3.23 ಕೋಟಿ ರೂಪಾಯಿ ಸಂಗ್ರಹಿಸಿ ಕೊಟ್ಟರು. 128 ವರ್ಷಗಳ ಮೈಸೂರು ಮೃಗಾ ಲಯದ ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದ ಮೊತ್ತದ ಮೃಗಾಲಯಕ್ಕೆ ದೇಣಿಗೆ ಬಂದಿರುವುದು ಇದೇ ಮೊದಲು. ಇದಕ್ಕಾಗಿ ಸಚಿವರಿಗೆ ಮೃಗಾಲಯ ಅಭಾರಿಯಾಗಿದೆ ಎಂದು ತಿಳಿಸಿದರು.

ಶಾಸಕ ಎಸ್.ಎ.ರಾಮದಾಸ್ ಮಾತ ನಾಡಿ, ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ವಿಲ್ಲದ ಕಾರಣ ಆದಾಯವಿಲ್ಲದೆ ಸಂಕಷ್ಟ ದಲ್ಲಿದ್ದ ಮೃಗಾಲಯ ಪರಿಸ್ಥಿತಿ ಅರಿತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್, ಮೃಗಾಲಯ ಪರಿಶೀಲನೆಗೆ ಬಂದಿ ದ್ದಾಗ `ಚಾಮುಂಡಿ’ ಆನೆಯನ್ನು ದತ್ತು ಪಡೆದರು. ಬಳಿಕ ಅವರು ಪ್ರತಿನಿಧಿಸುವ ಯಶವಂತಪುರ ಕ್ಷೇತ್ರದ ಜನರು, ಹಿತೈಷಿ ಗಳಿಂದ ಹಂತಹಂತವಾಗಿ ದೇಣಿಗೆ ಸಂಗ್ರಹಿಸಿ ಮೃಗಾಲಯಕ್ಕೆ ನೀಡಿದ್ದಾರೆ. ಅಲ್ಲದೆ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥರಾದ ಡಾ.ಸುಧಾಮೂರ್ತಿ ಅವರೂ 20 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಈ ಎಲ್ಲಾ ಚಟುವಟಿಕೆ ಮೂಲಕ ಸಚಿವರು ತಮ್ಮ ಲ್ಲಿರುವ ಮಾನವೀಯತೆ ಪ್ರದರ್ಶಿಸಿದ್ದಾರೆ ಎಂದು ಗುಣಗಾನ ಮಾಡಿದರು.

ಇದೇ ವೇಳೆ ಅಮೆರಿಕದ ಅಕ್ಕ ಸಂಸ್ಥೆ ವತಿಯಿಂದ 40 ಲಕ್ಷ ರೂ. ದೇಣಿಗೆ ಚೆಕ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಅಕ್ಕ ಸಂಘಟನೆಯ ಮಾಜಿ ಅಧ್ಯಕ್ಷ ಶಿವ ಮೂರ್ತಿ ಕಿಲಾರ ಮೃಗಾಲಯ ಕಾರ್ಯ ನಿರ್ವಾಹಕಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಜಿರಾಫೆ ಮರಿಗಳಿಗೆ ನಾಮಕರಣ: ಮೈಸೂರು ಮೃಗಾಲಯದಲ್ಲಿ ಮಾ.7 ರಂದು ಭರತ್-ಖುಷಿ ಜೋಡಿಗೆ ಜನಿಸಿದ ಜಿರಾಫೆ ಮರಿಗೆ `ಆದÀ್ಯವೀರ್’ (ಆದ್ಯ ಯಧುವೀರ), ಮೇ 30ರಂದು ಭರತ್-ಮೇರಿ ಜೋಡಿಗೆ ಜನಿಸಿದ ಗಂಡು ಮರಿಗೆ `ಬಾಲಾಜಿ’ ಎಂದು ಸಂಸದೆ ಸುಮಲತಾ ನಾಮಕರಣ ಮಾಡಿ, ಫಲಕ ಪ್ರದರ್ಶಿಸಿದರು.

ಹುಲಿಯ ಹೊಸ ಮನೆ ಲೋಕಾರ್ಪಣೆ: ಮೃಗಾಲಯದ ಆವರಣದಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ಹೊಸದಾಗಿ ಹುಲಿ ಹಾಗೂ ಜಾಗ್ವಾರ್‍ಗೆ ನಿರ್ಮಿಸಲಾಗಿರುವ ಹೊಸ ಮನೆಯನ್ನು ಸಚಿವರು ಹಾಗೂ ಸಂಸದರು ಲೋಕಾರ್ಪಣೆ ಮಾಡಿದರು. ಪ್ರಸ್ತುತ ಮೃಗಾ ಲಯದಲ್ಲಿ ಒಂದು ಜಾಗ್ವಾರ್ ಇದ್ದು, ಕಳೆದ ವರ್ಷ ನಾಗರಹಾವಿನೊಂದಿಗೆ ಕಾದಾಟ ನಡೆಸಿ ಮತ್ತೊಂದು ಜಾಗ್ವಾರ್ ಮೃತ ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸದ್ಯ ಒಂದು ಜಾಗ್ವಾರ್ (ಪ್ರತ್ಯೇಕ ಮನೆ) ಹಾಗೂ ಐದೂವರೆ ವರ್ಷದ ಬಿಳಿ ಹುಲಿ ತಾರ, 10 ವರ್ಷದ ರಾಹುಲಿ ಹುಲಿಯನ್ನು ಹೊಸ ಮನೆಯಲ್ಲಿಡಲಾಗಿದೆ.

ನೆರವಾದವರ ಸ್ಮರಣೆ: ಸಂಕಷ್ಟದ ಕಾಲದಲ್ಲಿ ಮೃಗಾಲಯಕ್ಕೆ 3.23 ಕೋಟಿ ರೂ. ದೇಣಿಗೆ ಸಂಗ್ರಹಿಸಿಕೊಟ್ಟ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಗೌರ ವಾರ್ಥವಾಗಿ ಅವರ ಹೆಸರಿನಲ್ಲಿ ಮೃಗಾ ಲಯದ ಮುಖ್ಯ ಪ್ರವೇಶ ದ್ವಾರದ ಎದುರು ಫಲಕವೊಂದನ್ನು ಸ್ಥಾಪಿಸಲಾಗಿದ್ದು, ಅದನ್ನು ಅನಾವರಣ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಟಿ. ದೇವೇಗೌಡ, ಎಲ್.ನಾಗೇಂದ್ರ, ಹರ್ಷ ವರ್ಧನ್, ಡಿಸಿ ಅಭಿರಾಮ್ ಜಿ.ಶಂಕರ್, ಡಿಸಿಪಿ ಪ್ರಕಾಶ್‍ಗೌಡ, ಮೇಯರ್ ತಸ್ನಿಂ, ಜಿಪಂ ಸಿಇಒ ಪ್ರಶಾಂತ್‍ಕುಮಾರ್, ಪಾಲಿಕೆ ಸದಸ್ಯೆ ಛಾಯಾದೇವಿ, ಮಾಜಿ ಮೇಯರ್ ಸಂದೇಶ್‍ಸ್ವಾಮಿ, ಬಿಜೆಪಿ ಮುಖಂಡ ಹೆಚ್.ವಿ.ರಾಜೀವ್, ಬಿ.ಪಿ.ಮಂಜುನಾಥ್, ಅಕ್ಕ ಸಂಘಟನೆಯ ಮಾಜಿ ಅಧ್ಯಕ್ಷ ಶಿವ ಮೂರ್ತಿ ಕಿಲಾರ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Translate »