ಕೆಆರ್‍ಎಸ್‍ನಲ್ಲಿ ನಾಲ್ವಡಿ-ವಿಶ್ವೇಶ್ವರಯ್ಯ ಪ್ರತಿಮೆ ಒಂಡೆಡೆ ಬೇಡ: ಎ.ಹೆಚ್.ವಿಶ್ವನಾಥ್ ಸಲಹೆ
Uncategorized, ಮೈಸೂರು ಗ್ರಾಮಾಂತರ

ಕೆಆರ್‍ಎಸ್‍ನಲ್ಲಿ ನಾಲ್ವಡಿ-ವಿಶ್ವೇಶ್ವರಯ್ಯ ಪ್ರತಿಮೆ ಒಂಡೆಡೆ ಬೇಡ: ಎ.ಹೆಚ್.ವಿಶ್ವನಾಥ್ ಸಲಹೆ

June 11, 2020

ಹುಣಸೂರು, ಜೂ.9(ಕೆಕೆ)-ಕೆಆರ್‍ಎಸ್‍ನಲ್ಲಿ ನಿರ್ಮಿಸಲುದ್ದೇಶಿಸಿರುವ ಮೈಸೂರು ಮಹಾರಾಜ ನಾಲ್ವಾಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆಗಳನ್ನು ಒಂದೆಡೆ ಸ್ಥಾಪಿಸುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಸಲಹೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನ ಮಹಾರಾಜ ನಾಲ್ವಾಡಿ ಕೃಷ್ಣರಾಜ ಒಡೆಯರ್ ನಾಡಿದಲ್ಲಿ ಪ್ರಜಾಪ್ರಭತ್ವ ವ್ಯವಸ್ಥೆ ಜಾರಿಗೆ ತಂದು ಶೋಷಿತರಿಗೆ ಮೀಸಲು ಸೌಲಭ್ಯ ಕಲ್ಪಿಸಿಕೊಟ್ಟವರು. ನೀರಾವರಿ, ಆರೋಗ್ಯ, ಶಿಕ್ಷಣ, ಕಲೆ ಮತ್ತು ಸಾಹಿತ್ಯ ಸೇರಿದಂತೆ ಹಲವು ಕ್ಷೇತ್ರಗಳಿಗೆ ಆದ್ಯತೆ ನೀಡಿದ್ದಾರೆ. ಅವರು ನೀಡಿರುವ ಅನೇಕ ಜನಪರ ಕಾರ್ಯಕ್ರಮಗಳು ಅವಿಸ್ಮರಣೀಯ. ಅವರ ಕನ್ನಂಬಾಡಿಕಟ್ಟೆ ನಿರ್ಮಾಣ ಕನಸನ್ನು ನನಸಾಗಿಸುವಲ್ಲಿ ಸರ್.ಎಂ.ವಿಶ್ವೇಶರಯ್ಯನವರ ಪಾತ್ರ ದೊಡ್ಡದು ಎಂದರು.

ತಾಂತ್ರಿಕ ಕೌಶಲ್ಯತೆಯಲ್ಲಿ ವಿಶ್ವಮಾನ್ಯರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯನವÀರು ಹಾಗೂ ಮಹಾರಾಜರನ್ನು ಸಮಾನವಾಗಿ ಕಾಣುವುದು ತರವಲ್ಲವೆಂಬುದು ಚಳವಳಿಗಾರರ ಅನಿಸಿಕೆ. ಹೀಗಾಗಿ ಮಹಾರಾಜರ ಪ್ರತಿಮೆ ಸಮನಾಗಿ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪಿಸುವÀ ಯೋಜನೆ ಕೈ ಬಿಟ್ಟು, ಪ್ರತ್ಯೇಕವಾಗಿ ಸ್ಥಾಪಿಸುವುದು ಒಳಿತು. ಈ ಬಗ್ಗೆ ಸರ್ಕಾರ ಹಠ ಬಿಟ್ಟು ಸ್ಪಂದಿಸಬೇಕು ಎಂದು ತಿಳಿಸಿದರು.

Translate »