Tag: M.K. Somashekar

ಹಣ, ಅಧಿಕಾರಕ್ಕಿಂತ ಆರೋಗ್ಯವಂತ ಬದುಕಿಗೆ ಮಹತ್ವ ನೀಡಲು ಮಾಜಿ ಶಾಸಕ ಎಂಕೆಎಸ್ ಸಲಹೆ
ಮೈಸೂರು

ಹಣ, ಅಧಿಕಾರಕ್ಕಿಂತ ಆರೋಗ್ಯವಂತ ಬದುಕಿಗೆ ಮಹತ್ವ ನೀಡಲು ಮಾಜಿ ಶಾಸಕ ಎಂಕೆಎಸ್ ಸಲಹೆ

March 15, 2021

ಮೈಸೂರು,ಮಾ.14(ಆರ್‍ಕೆಬಿ)- ಇಂದು ಹಣ, ಅಧಿಕಾರಕ್ಕೆ ಹೆಚ್ಚು ಮಹತ್ವ ನೀಡು ತ್ತೇವೆ. ಆದರೆ ಸಮಾಜದಲ್ಲಿ ಒಬ್ಬ ಉತ್ತಮ ಆರೋಗ್ಯವಂತ ವ್ಯಕ್ತಿಯಾಗಿ ಬದುಕು ವುದು ಬಹು ದೊಡ್ಡ ಸವಾಲಾಗಿದೆ ಎಂದು ಕೃಷ್ಣರಾಜ ಕ್ಷೇತ್ರದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಅಭಿಪ್ರಾಯಪಟ್ಟರು. ಮೈಸೂರಿನ ಅಶೋಕಪುರಂ ಜೈಭೀಮ್ ಪವರ್ ಇಂಡಿಯಾ ವ್ಯಾಯಾಮ ಶಾಲೆ ಯಲ್ಲಿ ಅಭ್ಯಾಸ ಮಾಡಿ, ರಾಷ್ಟ್ರ, ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ರುವ ಮೋಹನ್, ಜಾನ್ ಬ್ಯಾಪ್ಟಿನ್ ಅವ ರನ್ನು ಅಭಿನಂದಿಸಿ ಅವರು ಮಾತನಾಡಿ ದರು. ಇಂದು ಬಹುತೇಕ…

150 ಆಟೋ ಚಾಲಕರಿಗೆ 1 ಲೀ. ಉಚಿತ ಪೆಟ್ರೋಲ್ ವಿತರಣೆ
ಮೈಸೂರು

150 ಆಟೋ ಚಾಲಕರಿಗೆ 1 ಲೀ. ಉಚಿತ ಪೆಟ್ರೋಲ್ ವಿತರಣೆ

June 21, 2020

ಮೈಸೂರು, ಜೂ.20(ಆರ್‍ಕೆಬಿ)- ಕೇಂದ್ರ ಸರ್ಕಾರದ ಪೆಟ್ರೋಲ್, ಡೀಸೆಲ್ ದರ ಏರಿಕೆ ನೀತಿ ಖಂಡಿಸಿ ದಟ್ಟಗಳ್ಳಿ ವಾರ್ಡ್‍ನ ಯಶವಂತ್ ನೇತೃತ್ವದಲ್ಲಿ ದಟ್ಟಗಳ್ಳಿಯ ಅಮ್ಮ ಸಮುದಾಯ ಭವನದಲ್ಲಿ ಶನಿವಾರ 150 ಆಟೋ ಚಾಲಕರಿಗೆ ತಲಾ 1 ಲೀ. ಉಚಿತ ಪೆಟ್ರೋಲ್ ವಿತರಿಸಲಾಯಿತು. ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಸಮಾರಂಭದ ಪೂರ್ವಭಾವಿ ಸಭೆ ನಡೆಯಿತು. ಕಾಂಗ್ರೆಸ್‍ನ ಚಾಮುಂಡೇ ಶ್ವರಿ ವಿಧಾನಸಭಾ ಕ್ಷೇತ್ರ ಉಸ್ತುವಾರಿ ಗುರು ಪಾದಸ್ವಾಮಿ, ಬ್ಲಾಕ್ ಅಧ್ಯಕ್ಷ ಉಮಾಶಂಕರ್, ಚಂದ್ರು…

ಸಣ್ಣಪುಟ್ಟ ವೃತ್ತಿದಾರರಿಗೆ ಕೇಂದ್ರ ಸರ್ಕಾರದಿಂದ ಯಾವುದೇ ನೆರವಿಲ್ಲ: ಸಂಕಷ್ಟದಲ್ಲಿ ಕೂಲಿ ಕಾರ್ಮಿಕರು
ಮೈಸೂರು

ಸಣ್ಣಪುಟ್ಟ ವೃತ್ತಿದಾರರಿಗೆ ಕೇಂದ್ರ ಸರ್ಕಾರದಿಂದ ಯಾವುದೇ ನೆರವಿಲ್ಲ: ಸಂಕಷ್ಟದಲ್ಲಿ ಕೂಲಿ ಕಾರ್ಮಿಕರು

April 18, 2020

ಮೈಸೂರು, ಏ.17(ಎಂಟಿವೈ)- ಕೇಂದ್ರ ಸರ್ಕಾರ ಜನ್‍ಧನ್ ಯೋಜನೆಯಡಿ 500 ರೂ., ಕಟ್ಟಡ ಕಾರ್ಮಿಕರ ಖಾತೆಗೆ 2000 ರೂ ಹಾಕಿದ್ದಾರೆ ಅಷ್ಟೇ. ಆದರೆ ಚಿಲ್ಲರೆ ಅಂಗಡಿ, ಸವಿತಾ ಸಮಾಜದ ಕ್ಷೌರಿಕರು, ಟೈಲರಿಂಗ್, ಬಟ್ಟೆ ಅಂಗಡಿಯಲ್ಲಿ ಕೆಲಸ ನಿರ್ವಹಿಸು ವವರು, ಮಧ್ಯಮ ವರ್ಗದವರು, ಪ್ರತಿನಿತ್ಯ ಕೂಲಿ ಮಾಡುವವರ ಪಾಡೇನು? ಅವರ ಸ್ಥಿತಿ ಸರ್ಕಾರಕ್ಕೆ ತಿಳಿಯುತ್ತಿಲ್ಲವೇ? ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಮೈಸೂರಿನ ಇಂದಿರಾಗಾಂಧಿ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷದ ವತಿಯಿಂದ…

5ನೇ ದಿನ ಆಹಾರ ವಿತರಣೆ: ಎಂ ಕೆ ಸೋಮಶೇಖರ್
ಮೈಸೂರು

5ನೇ ದಿನ ಆಹಾರ ವಿತರಣೆ: ಎಂ ಕೆ ಸೋಮಶೇಖರ್

March 28, 2020

ಮೈಸೂರು, ಮಾ.28(SPN)-ಮಾಜಿ ಶಾಸಕ ಎಂ ಕೆ ಸೋಮಶೇಖರ್ ನೇತೃತ್ವದ ಜನಸ್ಪಂದನ ಟ್ರಸ್ಟ್ (ರಿ) ವತಿಯಿಂದ ಮೈಸೂರು ರೈಲ್ವೆ ನಿಲ್ದಾಣದ ಬಳಿ 500 ಕ್ಕೂ ಹೆಚ್ಚಿನ ನಿರಾಶ್ರಿತರಿಗೆ,ಅಶಕ್ತರಿಗೆ,ವಯೋವೃದ್ಧರಿಗೆ ಉಚಿತ ನೀರು ಊಟ ಮಾಸ್ಕ್ ವಿತರಣೆ ಮಾಡಲಾಯಿತು. ಗುಣಶೇಖರ್, ವಿಶ್ವ,ನಾಗಮಹದೇವ,ರಮೇಶ್,ಗುರು,ರಾಜು ಬಂಡೆಂಪಾ ಕಾಶೆಂಪೂರ್ ಮತ್ತಿತರರು ಉಪಸ್ಥಿತರಿದ್ದರು. ಎಲ್ಲರಿಗೂ ಆರೋಗ್ಯ ಅಧಿಕಾರಿಗಳನ್ನೂ ಕರೆಯಿಸಿ ಕೋವಿಡ್ -19ರ ಬಗ್ಗೆ ಜಾಗೃತಿ ಮೂಡಿಸಿ ಇನ್ನು ಮುಂದೆ ಬೀದಿಗಳಲ್ಲಿ ಊಟ ಕೊಡಲಾಗುವುದಿಲ್ಲ.ಜಿಲ್ಲಾಡಳಿತ,ಪಾಲಿಕೆ ಗುರುತಿಸಿದ ಗಂಜಿ ಕೇಂದ್ರಗಳಲ್ಲಿ ಊಟ ಕೊಡಲಾಗುವುದು ಎಂದು ಮನವರಿಕೆ ಮಾಡಿದರು.200ಕ್ಕೂ ಹೆಚ್ಚು ಜನರನ್ನು…

4ನೇ ದಿನ ಆಹಾರ ವಿತರಣೆ
ಮೈಸೂರು

4ನೇ ದಿನ ಆಹಾರ ವಿತರಣೆ

March 27, 2020

ಮೈಸೂರು, ಮಾ.27: ಮಾಜಿ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್ ರವರ ನೇತೃತ್ವದ ಜನಸ್ಪಂದನ ಟ್ರಸ್ಟ್ (ರಿ) ವತಿಯಿಂದ ಮೈಸೂರು ರೈಲ್ವೆ ನಿಲ್ದಾಣದ ಬಳಿ 500 ಕ್ಕೂ ಹೆಚ್ಚಿನ ನಿರಾಶ್ರಿತರಿಗೆ,ಅಶಕ್ತರಿಗೆ,ವಯೋವೃದ್ಧರಿಗೆ ಉಚಿತ ನೀರು ಊಟ ಮಾಸ್ಕ್ ವಿತರಣೆ ಮಾಡಲಾಯಿತು. ಗುಣಶೇಖರ್,ವಿಶ್ವ,ಅರ್ಜುನ್,ನಾಗಮಹದೇವ,ರಮೇಶ್,ಗುರು,ಅರ್ಜುನ,ಶಂಕರ್,ಕೆ ಬ್ಲಾಕ್ ಪಾಪು ಮತ್ತಿತರರು ಪಾಲ್ಗೊಂಡಿದ್ದರು. ಹಾಗೂ ಮೈಸೂರಿನ ಯೂತ್ ಹಾಸ್ಟೆಲ್ ನಲ್ಲಿ ತಂಗಿದ್ದ 50ಕ್ಕೂ ಹೆಚ್ಚು ಜನರಿಗೆ ಮಾಸ್ಕ್ ಊಟ ನೀರು ವಿತರಿಸಲಾಯಿತು.

ನಾನು ಮಾಡಿದ ಕೆಲಸವನ್ನು ತಾವು  ಮಾಡಿದ್ದು ಎನ್ನುವುದು ನ್ಯಾಯವೇ..
ಮೈಸೂರು

ನಾನು ಮಾಡಿದ ಕೆಲಸವನ್ನು ತಾವು ಮಾಡಿದ್ದು ಎನ್ನುವುದು ನ್ಯಾಯವೇ..

November 11, 2018

ಮೈಸೂರು:  ಶಾಸಕ ಎಸ್.ಎ.ರಾಮದಾಸ್ ಅವರು ನಾನು ಮಾಡಿದ ಕಾಮಗಾರಿಗಳನ್ನು ತಾವು ಮಾಡಿದ್ದೆಂದು ಹೇಳಿಕೊಳ್ಳುತ್ತಾ ಜನರನ್ನ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕೃಷ್ಣ ರಾಜ ಕ್ಷೇತ್ರದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ವಾಗ್ದಾಳಿ ನಡೆಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮದಾಸ್ ಅವರು ಗೆದ್ದು ಆರು ತಿಂಗಳಾದರೂ ಕ್ಷೇತ್ರಕ್ಕೆ ಒಂದು ರೂಪಾಯಿ ತರದಿದ್ದರೂ, ನಾನು ಮಾಡಿದ ಕಾಮ ಗಾರಿಯನ್ನೇ ತಾವು ಮಾಡಿದ್ದು ಎಂದು ಹೇಳಿಕೊಂಡಿದ್ದಾರೆ. ಮೈಸೂರಿನ ಜೆಎಲ್‍ಬಿ ರಸ್ತೆಯ ತುಳಸಿದಾಸ್ ಮೋಹನ್‍ದಾಸ್…

ಸರ್ಕಾರ ಮಾಡಲಾಗದ ಅಭಿವೃದ್ಧಿ ನಾಲ್ವಡಿಯವರು ಮಾಡಿದ್ದಾರೆ
ಮೈಸೂರು

ಸರ್ಕಾರ ಮಾಡಲಾಗದ ಅಭಿವೃದ್ಧಿ ನಾಲ್ವಡಿಯವರು ಮಾಡಿದ್ದಾರೆ

June 5, 2018

ಮೈಸೂರು: ಮೈಸೂರಿನ ತ್ಯಾಗರಾಜ ರಸ್ತೆ ಅರಸು ಮಂಡಳಿ ಸಂಘದ ಸಭಾಂಗಣದಲ್ಲಿ ಸೋಮವಾರ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಅವರು ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ನಾಲ್ವಡಿಯವರ 134ನೇ ಜನ್ಮದಿನೋತ್ಸ ವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಾದರಿ ರಾಜಕೀಯ ವ್ಯವಸ್ಥೆಗೆ ನಾಂದಿ ಹಾಡಿದ ಹೆಗ್ಗಳಿಕೆ ನಾಲ್ವಡಿಯ ವರಿಗೆ ಸಲ್ಲುತ್ತದೆ. ಶಿಕ್ಷಣ ಕ್ರಾಂತಿ, ರಸ್ತೆ, ಒಳಚರಂಡಿ ವ್ಯವಸ್ಥೆ, ಪಾರಂಪರಿಕ ಕಟ್ಟಡಗಳ ನಿರ್ಮಾಣ ಅವರು ಯಾವುದೇ ಒಂದು ಸರ್ಕಾರ ಮಾಡಲಾಗದಷ್ಟು…

ಸಾಕಷ್ಟು ಕೆಲಸ ಮಾಡಿದ್ದರೂ ಮತದಾರರು ನನ್ನನ್ನು ಏಕೆ ಸೋಲಿಸಿದರೋ ಗೊತ್ತಿಲ್ಲ
ಮೈಸೂರು

ಸಾಕಷ್ಟು ಕೆಲಸ ಮಾಡಿದ್ದರೂ ಮತದಾರರು ನನ್ನನ್ನು ಏಕೆ ಸೋಲಿಸಿದರೋ ಗೊತ್ತಿಲ್ಲ

May 29, 2018

ಮೈಸೂರು:  ನಾನು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ ಕ್ಷೇತ್ರದ ಜನತೆ ನನ್ನನ್ನು ಏಕೆ ಸೋಲಿಸಿದರೋ ಗೊತ್ತಿಲ್ಲ. ಆದರೂ ಮತದಾರರ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ. ಸೋಲು ಗೆಲುವು ಸಹಜ. ಹಾಗೆಂದು ಎದೆಗುಂದದೆ ಮತದಾರರ ಸಮಸ್ಯೆಗಳಿಗೆ ಸ್ಪಂದಿಸಿ, ಜನರಿಗಾಗಿ ಹೋರಾಟ ಮುಂದುವರಿಸುತ್ತೇನೆ ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮ್ಮ ಶಾಸಕ ಅವಧಿಯಲ್ಲಿ ತಾವು ರಸ್ತೆ, ಒಳಚರಂಡಿ, ಉದ್ಯಾನವನಗಳ ಅಭಿವೃದ್ಧಿ ಸೇರಿದಂತೆ ಶೇ.90ರಷ್ಟು ಅಭಿವೃದ್ಧಿಪರ ಕೆಲಸಗಳನ್ನು…

Translate »