ನಾನು ಮಾಡಿದ ಕೆಲಸವನ್ನು ತಾವು  ಮಾಡಿದ್ದು ಎನ್ನುವುದು ನ್ಯಾಯವೇ..
ಮೈಸೂರು

ನಾನು ಮಾಡಿದ ಕೆಲಸವನ್ನು ತಾವು ಮಾಡಿದ್ದು ಎನ್ನುವುದು ನ್ಯಾಯವೇ..

November 11, 2018

ಮೈಸೂರು:  ಶಾಸಕ ಎಸ್.ಎ.ರಾಮದಾಸ್ ಅವರು ನಾನು ಮಾಡಿದ ಕಾಮಗಾರಿಗಳನ್ನು ತಾವು ಮಾಡಿದ್ದೆಂದು ಹೇಳಿಕೊಳ್ಳುತ್ತಾ ಜನರನ್ನ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕೃಷ್ಣ ರಾಜ ಕ್ಷೇತ್ರದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ವಾಗ್ದಾಳಿ ನಡೆಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮದಾಸ್ ಅವರು ಗೆದ್ದು ಆರು ತಿಂಗಳಾದರೂ ಕ್ಷೇತ್ರಕ್ಕೆ ಒಂದು ರೂಪಾಯಿ ತರದಿದ್ದರೂ, ನಾನು ಮಾಡಿದ ಕಾಮ ಗಾರಿಯನ್ನೇ ತಾವು ಮಾಡಿದ್ದು ಎಂದು ಹೇಳಿಕೊಂಡಿದ್ದಾರೆ. ಮೈಸೂರಿನ ಜೆಎಲ್‍ಬಿ ರಸ್ತೆಯ ತುಳಸಿದಾಸ್ ಮೋಹನ್‍ದಾಸ್ ಆಸ್ಪತ್ರೆ ಆವರಣದಲ್ಲಿ ನಿರ್ಮಾಣವಾಗು ತ್ತಿರುವ 100 ಹಾಸಿಗೆಯ ಆಸ್ಪತ್ರೆ ತಮ್ಮ ಕನಸಿನ ಕಾಮಗಾರಿ. ಇದಕ್ಕಾಗಿ ಶ್ರಮಿಸಿದ್ದೇನೆ ಎಂದು ಶಾಸಕ ರಾಮದಾಸ್ ನೀಡಿರುವ ಹೇಳಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸೋಮ ಶೇಖರ್, ನಿಜ ಸ್ಥಿತಿ ಎಂದರೆ, ಜಿಲ್ಲಾಸ್ಪತ್ರೆಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಶಿಖಾ ಅವರೊಂದಿಗೆ ಚರ್ಚಿಸಿ, ಇಲ್ಲಿ ಸ್ಥಳ ಚಿಕ್ಕದೆಂದು ಕೆ.ಆರ್.ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಂತಿಮವಾಗಿ ಹೈಟೆಕ್ ಆಸ್ಪತ್ರೆಗೆ 20 ಕೋಟಿ ರೂ. ಮಂಜೂರು ಮಾಡಿಸಿ, 2018ರ ಮಾರ್ಚ್ 10ರಂದು ಸಿದ್ದರಾಮಯ್ಯ ಶಂಕುಸ್ಥಾಪನೆಯನ್ನೂ ನೆರವೇರಿಸಿದ್ದರು ಎಂದು ಸ್ಪಷ್ಪಪಡಿಸಿದರು.

ತಾವು ಕಚೇರಿಯಿಂದ ಕಚೇರಿಗೆ ಸುತ್ತಾಡಿ, 3 ವರ್ಷ ಶ್ರಮಪಟ್ಟು ಈ ಕೆಲಸ ಮಾಡಿ ದ್ದೇನೆ. ಇಂತಹ ಅದ್ಭುತ ಕಷ್ಟದ ಕೆಲಸವನ್ನು ಈಗ ನಾನು ಮಾಡಿದ್ದು ಎಂದು ಹೇಳುವ ಮೂಲಕ ಶಾಸಕ ರಾಮದಾಸ್ ಬಹುದೊಡ್ಡ ಸುಳ್ಳುಗಾರ ಎಂದು ತೋರಿಸಿ ಕೊಂಡಿ ದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನನ್ನ ಕಾಲದಲ್ಲಿ ಮಂಜೂರಾದ ಕೆಲಸ ಗಳೇ ಇಂದು ನಡೆಯುತ್ತಿದೆ. ಇನ್ನೂ ಆರು ತಿಂಗಳು ಕೆಲಸ ನಡೆಯುತ್ತದೆ. ಅದರ ಮುಂದೆ ಹೋಗಿ ತಾವು ಮಾಡಿದ್ದು ಎಂದು ಫೋಟೊ ತೆಗೆಸಿ, ಪತ್ರಿಕೆಗಳಲ್ಲಿ ಹಾಕಿಸಿಕೊಳ್ಳುವ ಶಾಸಕರ ವರ್ತನೆ ಘೋರ ಅಪರಾಧ. ಇಂತಹ ಕೆಲಸವನ್ನು ಯಾರೂ ಮಾಡಬಾರದು ಎಂದು ಅಭಿಪ್ರಾಯಪಟ್ಟರು. ಗೋಷ್ಠಿ ಯಲ್ಲಿ ಕಾರ್ಪೊರೇಟರ್‍ಗಳಾದ ಗೋಪಿ, ಶೋಭಾ, ಮಾಜಿ ಕಾರ್ಪೊರೇಟರ್ ಸುನೀಲ್, ಕೆ.ಆರ್.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ್, ಮುಖಂಡರಾದ ಎಚ್. ಶೇಖರ್, ಶ್ರೀಧರ್ ಉಪಸ್ಥಿತರಿದ್ದರು.

Translate »