ಸಾಮಾಜಿಕ ನ್ಯಾಯದ ಪರವಾಗಿರುವವರನ್ನೇ ಬೆಂಬಲಿಸಿ
ಮೈಸೂರು

ಸಾಮಾಜಿಕ ನ್ಯಾಯದ ಪರವಾಗಿರುವವರನ್ನೇ ಬೆಂಬಲಿಸಿ

November 11, 2018

ಮೈಸೂರು: ಕಾಯಕ ಹಾಗೂ ಶೋಷಿತ ಸಮುದಾಯದವರು, ಯಾರು ಸಾಮಾಜಿಕ ನ್ಯಾಯದ ಪರ-ವಿರುದ್ಧ ಇದ್ದಾರೆ ಎನ್ನುವುದನ್ನು ಚಿಂತಿಸಿ, ಪರ ಇದ್ದವರ ಬೆನ್ನಿಗೆ ನಿಲ್ಲಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ಮೈಸೂರಿನ ಪುರಭವನದ ಆವರಣದಲ್ಲಿ ಜಿಲ್ಲಾ ಕಾಯಕ ಸಮಾಜಗಳ ಒಕ್ಕೂ ಟದ ಉದ್ಘಾಟನಾ ಸಮಾರಂಭದಲ್ಲಿ ಮಾತ ನಾಡಿದ ಅವರು, ಕೆಲವರು ಸ್ವಾರ್ಥಕ್ಕಾಗಿ ಶೋಷಿತರು ಹಾಗೂ ಕಾಯಕ ಸಮಾಜ ಗಳ ವಿರುದ್ಧ ಷಡ್ಯಂತ್ರ ಹೆಣೆಯುತ್ತಾ ಬಂದಿದ್ದಾರೆ. ರಾಜಕೀಯ ಲಾಭಕ್ಕಾಗಿ ಕೇವಲ ಕಾಯಕ ಸಮಾಜದ ಪರವಾಗಿರುವುದಾಗಿ ಮೊಸಳೆ ಕಣ್ಣೀರು ಸುರಿಸಿ ಅಮಾಯಕರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಈ ಷಡ್ಯಂತ್ರದ ಸೂಕ್ಷ್ಮವನ್ನು ಅರಿತು ಕಾಯಕ ಸಮಾಜ ದವರು ಎಚ್ಚರಿಕೆಯಿಂದ ಹೆಜ್ಜೆಯಿಡಬೇಕು. ಯಾರು ಅಸಮಾನತೆ ಪರ ಹಾಗೂ ಸಾಮಾ ಜಿಕ ನ್ಯಾಯವನ್ನು ವಿರೋಧಿಸುತ್ತಾರೆ ಎನ್ನು ವುದನ್ನು ಅರಿತುಕೊಳ್ಳಬೇಕು.

ಇದರಿಂದ ವಂಚನೆಗೀಡಾಗುವುದು ತಪ್ಪುತ್ತದೆ ಎಂದು ಹೇಳಿದರು. ಬೆಣ್ಣೆ ಮಾತಿಗೆ ಮರುಳಾಗಿ ಕೋಮುವಾದಿಗಳು ಹಾಗೂ ಸಾಮಾಜಿಕ ನ್ಯಾಯದ ವಿರೋಧಿಗಳ ನಡುವೆ ಸೇರಿ ಚಪ್ಪಾಳೆ ಹೊಡೆಯುವುದನ್ನು ನಿಲ್ಲಿಸ ಬೇಕೆಂದು ಅವರು ಸಲಹೆ ನೀಡಿದರು.
1994ರಲ್ಲಿ ನಾನು ಉಪ ಮುಖ್ಯಮಂತ್ರಿ ಯಾಗಿದ್ದಾಗ ಸ್ಥಳೀಯ ಸಂಸ್ಥೆಗಳಲ್ಲಿ ಶೇ. 33ರಷ್ಟು ಮೀಸಲಾತಿ ಜಾರಿಗೆ ತಂದಿದ್ದೆ.

ಮೊದಲು ಬರೀ ಎಸ್ಸಿ-ಎಸ್ಟಿ ಮೀಸಲಾತಿ ಇತ್ತು. ಹಿಂದುಳಿದ ವರ್ಗದವರಿಗೂ ಮೀಸ ಲಾತಿ ಇರುವ ಕಾರಣ ಅನೇಕರು ಈಗ ರಾಜಕೀಯ ಪ್ರಾತಿನಿಧ್ಯ ಪಡೆದುಕೊಂಡಿ ದ್ದಾರೆ. ಹಿಂದುಳಿದ ವರ್ಗಗಳಿಗೆ ಮೀಸ ಲಾತಿ ಕಲ್ಪಿಸುವುದಕ್ಕೆ ಮುಂದಾದಾಗ ಇದೇ ಕೆ.ಎಸ್.ಈಶ್ವರಪ್ಪ, ಬಿ.ಜೆ.ಪುಟ್ಟಸ್ವಾಮಿ ಸೇರಿದಂತೆ ಬಿಜೆಪಿ ನಾಯಕರು ವಿರೋಧ ಮಾಡಿದರು. ಈಗ ಇದೆ ನಾಯಕರು ಹಿಂದುಳಿದ ವರ್ಗದವರ ಬಗ್ಗೆ ಮಾತನಾಡುತ್ತಿ ದ್ದಾರೆ. ಅಂತಹವರ ಬಗ್ಗೆ ಎಚ್ಚರಿಕೆ ವಹಿಸ ಬೇಕು ಎಂದು ಕಿವಿಮಾತು ಹೇಳಿದರು.

12ನೇ ಶತಮಾನದಲ್ಲಿ ಬಸವಾದಿ ಶರ ಣರು ತಳ ಸಮುದಾಯದವರಿಗೆ ಅನು ಕೂಲ ಮಾಡಿಕೊಟ್ಟರು. ತಳಸಮುದಾಯ ಮತ್ತು ಬ್ರಾಹ್ಮಣರನ್ನು ಸಮಾನತೆಯಿಂದ ಕಾಣುವುದಕ್ಕೆ ಸುಧಾರಣೆ ತರುವ ಪ್ರಯತ್ನ ಮಾಡಿದರು. ಮೇಲು-ಕೀಳು ಎಂಬ ಭಾವನೆಯನ್ನು ತೊಡೆದು ಹಾಕುವುದಕ್ಕೆ ಮುಂದಾದರು. ಅನುಭವ ಮಂಟಪದಲ್ಲಿ ಎಲ್ಲ ರಿಗೂ ಸ್ಥಾನ ಕೊಟ್ಟರು. ಕಾಯಕ ಮಾಡು ವವರು ಎಲ್ಲರೂ ಒಂದೆ ಎಂದು ತೋರಿಸಿ ಕೊಟ್ಟರು. ಆದರೆ ಕಾಯಕ ಮಾಡಿದವರು ಶೂದ್ರರು ಎಂದೇ ಮೇಲ್ವರ್ಗದವರು ಭಾವಿಸಿಕೊಂಡು ಬಂದಿದ್ದರು ಎಂದು ಮಾಜಿ ಮುಖ್ಯಮಂತ್ರಿ ವಿಷಾದಿಸಿದರು.

ಕೇವಲ ಹಿಂದುಳಿದ ವರ್ಗದವರಿಗೆ ಮಾಡಲಿಲ್ಲ: ಬಿಜೆಪಿಯವರು ನನ್ನ ವಿರುದ್ಧ ಅಪಪ್ರಚಾರ ಮಾಡಿದರು. ನನ್ನ ಅಧಿಕಾರಾವಧಿಯಲ್ಲಿ ಹಿಂದುಳಿದ ವರ್ಗಗಳವರಿಗೆ ಮಾತ್ರ ಯೋಜನೆ ರೂಪಿಸಿದ್ದಾರೆ ಎಂದು ಜನರನ್ನು ನಂಬಿಸುವ ಪ್ರಯತ್ನ ಮಾಡಿದರು. ನಾನು ಅಧಿಕಾರದಲ್ಲಿದ್ದಾಗ ಕೇವಲ ಎಸ್‍ಸಿ -ಎಸ್ಟಿ, ಹಿಂದುಳಿದ ವರ್ಗದವರಿಗೆ ಮಾತ್ರ ಆಡಳಿತ ಕೊಡಲಿಲ್ಲ. ಹಸಿವಿನಿಂದ ಬಳಲ ದಂತೆ ನಾಲ್ಕು ಕೋಟಿ ಜನರಿಗೆ ಅನ್ನ ಭಾಗ್ಯ ಯೋಜನೆ ಜಾರಿಗೆ ತಂದು ಅದ ಕ್ಕಾಗಿ 4200 ಕೋಟಿ ರೂ.ಗಳನ್ನು ಪ್ರತಿ ವರ್ಷ ಖರ್ಚು ಮಾಡಲಾಗುತ್ತಿತ್ತು. ಅದೇ ರೀತಿ 29,500 ಕೋಟಿ ರೂ. ಅನುದಾನ ವನ್ನು ಎಸ್ಸಿ-ಎಸ್ಟಿ ವರ್ಗದವರಿಗೆ ಪ್ರತ್ಯೇಕ ವಾಗಿ ಇಟ್ಟು ಕಾಮಗಾರಿಯಲ್ಲೂ ಮೀಸ ಲಾತಿ ನೀಡಲಾಗಿತ್ತು. ವಿದ್ಯಾಸಿರಿ, ಕೃಷಿ ಹೊಂಡ, ಮಾತೃಪೂರ್ಣ ಯೋಜನೆ, ಇಂದಿರಾ ಕ್ಯಾಂಟೀನ್ ಎಲ್ಲವೂ ಎಲ್ಲ ವರ್ಗದ ಜನರಿಗೆ ತಲುಪಿವೆ ಎನ್ನುವುದನ್ನು ಮರೆ ಯಬಾರದು ಎಂದು ಗಮನ ಸೆಳೆದರು.

ಆರ್ಥಿಕ-ಸಾಮಾಜಿಕ ಸ್ವಾತಂತ್ರ್ಯ ಸಿಗಬೇಕು: ಶೂದ್ರರು ಶೋಷಣೆ, ದಬ್ಬಾಳಿಕೆ, ದೌರ್ಜನ್ಯದಿಂದ ತಪ್ಪಿಸಿಕೊಳ್ಳಬೇಕಾದರೆ ಅಧಿಕಾರ ಸಂಪತ್ತು ಹಂಚಿಕೆಯಾಗಬೇಕು. ಕೆಲವೇ ಜನರ ಬಳಿ ಅಧಿಕಾರ, ಸಂಪತ್ತು ಇರುವ ತನಕ ನಿರಂತರವಾಗಿ ಶೋಷಣೆ ಮುಂದುವರೆಯಲಿದೆ. ಅದಕ್ಕಾಗಿ ಸಮಾ ನತೆ ಬರಬೇಕಾಗಿದೆ ಎಂದು ಪ್ರತಿಪಾದಿ ಸಿದರು. ರಾಜಕೀಯ ಸ್ವಾತಂತ್ರ್ಯದ ಜತೆಗೆ ಆರ್ಥಿಕ-ಸಾಮಾಜಿಕ ಸ್ವಾತಂತ್ರ್ಯ ಬೇಕಿದೆ ಎಂಬುದನ್ನು ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಆದರೆ, ನಮಗೆ ಈಗ ಸ್ವಾತಂತ್ರ್ಯ ಸಿಕ್ಕಿದೆ ಹೊರತು ಅಧಿಕಾರ-ಸಂಪತ್ತು ಸಿಕ್ಕಿಲ್ಲ ಎಂದು ಹೇಳಿದರು.

ಕಾಯಕ ಮುಖ್ಯ, ಕಾಂಚಾಣವಲ್ಲ: ಡಾ.ಮುರುಘಾಶ್ರೀ

ಮೈಸೂರು : ಪ್ರಸ್ತುತ ಸಂದರ್ಭದಲ್ಲಿ ಬಹುತೇಕರು ಕಾಂಚಾ ಣದ ಹಿಂದೆ ಬಿದ್ದಿರುವುದರಿಂದ ಸಮಾಜ ದಲ್ಲಿ ಮೌಲ್ಯ ಕುಸಿಯುತ್ತಿದೆ ಎಂದು ಚಿತ್ರ ದುರ್ಗದ ಬೃಹನ್ ಮಠ ಪೀಠಾಧ್ಯಕ್ಷ ಶ್ರೀ ಡಾ.ಶಿವಮೂರ್ತಿ ಮುರುಘ ರಾಜೇಂದ್ರ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಪುರಭವನದಲ್ಲಿ ಶನಿವಾರ ನಡೆದ ಜಿಲ್ಲಾ ಕಾಯಕ ಸಮಾಜಗಳ ಒಕ್ಕೂ ಟದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಇತ್ತೀ ಚಿನ ದಿನಗಳಲ್ಲಿ ಕಾಂಚಾಣದ ಮೇಲೆ ವ್ಯಾಮೋಹ ಬೆಳೆಸಿಕೊಂಡಿರುವವರ ಸಂಖ್ಯೆ ಹೆಚ್ಚಾಗಿದೆ. ಬಹುಬೇಗ ಹಣ ಸಂಪಾದಿ ಸಬೇಕೆಂಬ ಹಂಬಲ ವ್ಯಕ್ತಪಡಿಸುತ್ತಿದ್ದಾರೆ. ಕಾಂಚಾಣದಿಂದ ಕಾಯಕವಲ್ಲ, ಕಾಯಕ ದಿಂದ ಕಾಂಚಾಣ ಕಾಣುವ ಮನೋ ಭಾವ ಬೆಳೆಸಿಕೊಳ್ಳುವ ಅಗತ್ಯವಿದೆ. ಶರಣರು ಕಾಂಚಾಣದ ಹಿಂದೆ ಹೋದವರಲ್ಲ. ಅವರು ಕಾಯಕ ಮಾಡಿದರು, ಕಾಂಚಾಣ ತಾನಾ ಗಿಯೇ ಬಂತು. ಆದರೆ ಇಂದು ಕಾಯಕ ವನ್ನು ನಿರ್ಲಕ್ಷಿಸಿ ಕಾಂಚಾಣಕ್ಕೆ ಮಹತ್ವ ನೀಡುವ ಪರಿಸ್ಥಿತಿ ಉದ್ಭವಿಸಿದೆ ಎಂದರು.

ಜನರಲ್ಲಿ ಕಾಯಕದ ಮಹತ್ವವನ್ನು ಸಾರುವ ನಿಟ್ಟಿನಲ್ಲಿ 12ನೇ ಶತಮಾನದಲ್ಲಿ ವಚನ ಕಾರರು ಬಂಡವಾಳಶಾಹಿ, ಸಾಮ್ರಾಜ್ಯ ಷಾಹಿ, ವೈದಿಕಶಾಹಿಗಳಿಂದ ದೂರ ಉಳಿದು ಬದುಕು ನಡೆಸಿದ ಸಾಹಸಿಗರು ಎನಿಸಿ ದ್ದಾರೆ. ಕಾಯಕದ ಮೂಲಕ ಎಲ್ಲಾ ಸಮು ದಾಯಗಳನ್ನು ಒಂದುಗೂಡಿಸುವ ಕಾರ್ಯ ಮಾಡಿದರು. ಕುಲಕಸುಬುಗಳನ್ನು ಗೌರ ವಿಸುವ ಮೂಲಕ ಎಲ್ಲಾ ವೃತ್ತಿಗೂ ಗೌರವ ಸಲ್ಲಿಸುತ್ತಿದ್ದರು. ಅನುಭವ ಮಂಟಪದ ಮೂಲಕ ಕಾಯಕ ಸಮಾಜಗಳನ್ನು ಒಂದು ಗೂಡಿಸುವ ಕೆಲಸ ಮಾಡಿದರು. ರಾಜರು ಹಾಗೂ ಅರಮನೆಯ ಬಳಿ ಹೋಗದೆ, ಗುಡಿಸಲುಗಳ ಕಡೆಗೆ ರಾಜರು ಬರುವಂತೆ ಮಾಡಿದರು ಎಂದು ತಿಳಿಸಿದರು.

ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ವಚನಕಾರರ ಆದರ್ಶಗಳು ಪ್ರಸ್ತುತ ಹೇಗಿವೆ ಎಂಬು ದನ್ನು ಆರ್ಥೈಸಿಕೊಳ್ಳಬೇಕಿದೆ. ಕಾಯಕವನ್ನು ಗೌರವಿಸಬೇಕೇ ಹೊರತು ಜಾತಿಯನ್ನಲ್ಲ ಎಂದು ಬಸವಣ್ಣ ಹೇಳಿದರು. ಆದರೆ ಇಂದು ದೇಶದಲ್ಲಿ ಪೆನ್ನುಗಳು ಮಾತನಾಡುವ ಬದಲಿಗೆ ಗನ್ನುಗಳು ಮಾತನಾಡುತ್ತಿವೆ. ಪ್ರಜಾಪ್ರಭುತ್ವ ಕೆಲವರಿಂದ, ಕೆಲವರಿಗಾಗಿ, ಕೆಲವರಿಗೋಸ್ಕರ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಚಾಣ ಜೀವಿಗಳ ಪ್ರಜಾಪ್ರಭುತ್ವವೆನ್ನುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ರೈತರು ಸಣ್ಣ ಮೊತ್ತದ ಸಾಲಕ್ಕೆ ಹೆದರಿ ಸಾವಿಗೆ ಶರಣಾ ಗುತ್ತಿದ್ದಾರೆ. ಆದರೆ ದೇಶದ ಸಂಪತ್ತನ್ನು ದೊಡ್ಡಮಟ್ಟದಲ್ಲಿಯೇ ಲೂಟಿ ಮಾಡಿದ ವರು ರಾಜಾರೋಷವಾಗಿ ವಿದೇಶಗಳಲ್ಲಿ ಓಡಾಡಿಕೊಂಡಿದ್ದಾರೆ. ಅಭಿವೃದ್ಧಿಯ ಹೆಸರಿ ನಲ್ಲಿ ಮೂಲ ನಿವಾಸಿಗಳು, ಶ್ರಮ ಜೀವಿ ಗಳು, ಕಾಯಕ ಜೀವಿಗಳನ್ನು ನಿಷ್ಕ್ರಿಯಗೊಳಿಸಿ, ಬಂಡವಾಳಶಾಹಿಗಳಿಗೆ ಒತ್ತು ನೀಡಲಾ ಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾಯಕ ಸಮಾಜಗಳ ಒಕ್ಕೂಟ ಅಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ ಮಾತನಾಡಿ, ಪುರಾಣವನ್ನು ಚರಿತ್ರೆ ಮಾಡಿ, ಚರಿತ್ರೆ ಯನ್ನು ಪುರಾಣ ಮಾಡುವ ಮೂಲಕ ಸಂವಿ ಧಾನಕ್ಕೆ ಅಪಚಾರ ಎಸಗಲಾಗುತ್ತಿದೆ ಎಂದರು.

ಜನಸಂಖ್ಯೆಗೆ ಅನುಗುಣವಾಗಿ ಮೀಸ ಲಾತಿ ನೀಡಬೇಕು. ಈಗಿರುವ ಶೇ.15ರಷ್ಟು ಮೀಸಲಾತಿಯನ್ನು ಶೇ.20ರಷ್ಟಕ್ಕೆ ಹೆಚ್ಚಿಸ ಬೇಕು. ಮೀಸಲಾತಿಯ ಲಾಭ ಎಲ್ಲಾ ಜನಾಂಗಗಳಿಗೆ ದೊರೆಯಲು ಒಳ ಮೀಸ ಲಾತಿ ಜಾರಿಗೆ ತರಬೇಕು. ಎಸ್‍ಸಿ, ಎಸ್‍ಟಿ ವಿದ್ಯಾರ್ಥಿಗಳಿಗೆ ಸರಕಾರ ನೀಡುತ್ತಿರುವ ಎಲ್ಲಾ ಸೌಲಭ್ಯಗಳನ್ನು ಕಾಯಕ ಸಮಾಜ ಗಳ ವಿದ್ಯಾರ್ಥಿಗಳಿಗೂ ನೀಡಬೇಕು ಎಂಬ ಹಕ್ಕೊತ್ತಾಯಗಳನ್ನು ಮಂಡಿಸಿದರು.

ಕಾರ್ಯಕ್ರಮದಲ್ಲಿ ರಾವಂದೂರು ಶಾಖೆಯ ಪೀಠಾಧ್ಯಕ್ಷ ಮೋಕ್ಷಪತಿ ಸ್ವಾಮೀಜಿ, ಜ್ಞಾನ ಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿ ಡಾ.ಚಂದ್ರ ಶೇಖರ ಕಂಬಾರ, ಜಿಲ್ಲಾ ಕಾಯಕ ಸಮಾಜ ಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬೋರಪ್ಪಶೆಟ್ಟಿ, ಕೋಶಾಧ್ಯಕ್ಷ ಲಕ್ಷ್ಮೀಕಾಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಗೋಮುಖ ವ್ಯಾಘ್ರ ಬಿಜೆಪಿ ಮುಖಂಡರೇ ಮತಾಂಧರು: ಸಿದ್ದು

ಮೈಸೂರು: ಎರಡು ಮುಖ ಹಾಗೂ ಎರಡು ನಾಲಿಗೆ ಹೊಂದಿದ ಬಿಜೆಪಿ ಮುಖಂಡರು ಗೋಮುಖ ವ್ಯಾಘ್ರಗಳು. ಅಮಾನವೀಯ, ಮನುಷ್ಯತ್ವ ಇಲ್ಲದ ವ್ಯಕ್ತಿಗಳೇ ಮತಾಂಧರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನ ಪುರಭವನದ ಆವರಣದಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಸಂಸದ ನಳಿನ್‍ಕುಮಾರ್ ಕಟೀಲ್ ಅವರು ಟಿಪ್ಪುವಿಗಿಂತ ಸಿದ್ದರಾಮಯ್ಯ ದೊಡ್ಡ ಮತಾಂಧ ಎಂದು ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿ, ಸಂಸದ ನಳಿನ್‍ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ನಾಯಕರು ಮತಾಂಧರಾಗಿದ್ದಾರೆ. ಧರ್ಮ-ಧರ್ಮಗಳ ನಡುವೆ ದ್ವೇಷದ ಬೀಜ ಬಿತ್ತಿ, ಕೋಮು ಸೌಹಾರ್ದತೆ ಹದಗೆಡಿಸುವುದೇ ಇವರ ಗುರಿಯಾಗಿದೆ. ಕೋಮುವಾದಿಗಳು ಹಾಗೂ ಮನುಷ್ಯತ್ವ ಇಲ್ಲದವರು ಬೇರೆ ಧರ್ಮವನ್ನು ದ್ವೇಷಿಸುತ್ತಾರೆ. ದಯವೇ ಧರ್ಮದ ಮೂಲವಾಗಿದೆ. ಆದರೆ ಬಿಜೆಪಿ ನಾಯಕರಿಗೆ ದಯೆಯೂ ಇಲ್ಲ, ಧರ್ಮವೂ ಇಲ್ಲ. ಹೀಗಿರುವಾಗ ಇಂತಹವರು ಧರ್ಮದ ಅನುಯಾಯಿಗಳಾಗಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಟಿಪ್ಪು ಜಯಂತಿ ವಿರೋಧಕ್ಕೆ ವಾಗ್ದಾಳಿ: ಟಿಪ್ಪುಸುಲ್ತಾನ್ ಹಿಂದೂ-ಕನ್ನಡ ವಿರೋಧಿ ಅನ್ನುತ್ತಿರುವುದು ಸರಿಯಲ್ಲ. ನಾನು ಆಡಳಿತದಲ್ಲಿದ್ದಾಗ ಟಿಪ್ಪು ಜಯಂತಿ ಒಂದನ್ನೇ ಮಾಡಲಿಲ್ಲ. ಕೃಷ್ಣ ಜಯಂತಿ, ಭಗೀರಥ ಜಯಂತಿ, ದೇವರದಾಸಿಮಯ್ಯ, ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ, ಕೆಂಪೇಗೌಡ, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಸೇರಿ 13 ಜಯಂತಿಗಳನ್ನು ಆರಂಭಿಸಿದ್ದೇನೆ. ಈ ಎಲ್ಲ ಜಯಂತಿ ಮಾಡಿರುವಾಗ ಟಿಪ್ಪು ಜಯಂತಿಗೆ ಏಕೆ ವಿರೋಧ? ಎಂದು ಪ್ರಶ್ನಿಸಿದರು.

ಕೇರ್ ಮಾಡಲ್ಲ: ಸ್ವಾಭಿಮಾನಿಯಾಗಿದ್ದರಿಂದ ದುರಹಂಕಾರಿ ಅನ್ನುತ್ತಾರೆ. ಅದಕ್ಕೆಲ್ಲಾ ನಾನು ಕೇರ್ ಮಾಡಲ್ಲ. ಸ್ವಾಭಿಮಾನ ದಿಂದ ಇರುವವರನ್ನು ಕಂಡರೆ ಕೆಲವರಿಗೆ ಆಗಲ್ಲ, ಸಹಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಸಿದ್ದರಾಮಯ್ಯ ದುರಹಂಕಾರಿ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಯಡ್ಡಿಖಾನ್ ಅನ್ನಲೇ: ನನ್ನನ್ನು ಸಿದ್ದುಖಾನ್ ಅಂತ ಕರೆದಿದ್ದರೆ ನಾನು ಯಡ್ಡಿಖಾನ್ ಅನ್ನಲೇ? ಮುನ್ನುಡಿ ಬರೆದ ಜಗದೀಶ್ ಶೆಟ್ಟರ್ ಬಗ್ಗೆ ಏನನ್ನಬೇಕು, ಅಶೋಕ್, ಶ್ರೀರಾಮುಲು, ಪಿ.ಸಿ.ಮೋಹನ್ ಟಿಪ್ಪು ಟೋಪಿ ಹಾಕಿದ್ದರು. ಇವರನ್ನೆಲ್ಲಾ ಏನಂಥ ಕರೆಯಬೇಕು? ಎಂದರು.

Translate »