ಪ್ರತಿಭಾನ್ವಿತ ಕ್ಯಾಥೋಲಿಕ್ ವಿದ್ಯಾರ್ಥಿಗಳಿಗೆ ಅಭಿನಂದನೆ
ಮೈಸೂರು

ಪ್ರತಿಭಾನ್ವಿತ ಕ್ಯಾಥೋಲಿಕ್ ವಿದ್ಯಾರ್ಥಿಗಳಿಗೆ ಅಭಿನಂದನೆ

November 11, 2018

ಮೈಸೂರು: ಮೈಸೂರಿನ ಬನ್ನಿಮಂಟಪದಲ್ಲಿರುವ ಸೆಂಟ್ ಫಿಲೋ ಮಿನಾ ಕಾಲೇಜು ಸಭಾಂಗಣದಲ್ಲಿ ಎಸ್‍ಎಸ್ ಎಲ್‍ಸಿ, ದ್ವಿತೀಯ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಪಿಹೆಚ್‍ಡಿ ಪದವಿ ಮತ್ತು ಇತರೆ ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡಿದ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಯ ಪ್ರತಿಭಾನ್ವಿತ ಕ್ಯಾಥೋಲಿಕ್ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಮೈಸೂರು ಧರ್ಮಕ್ಷೇತ್ರ ಶಿಕ್ಷಣ ಸಂಸ್ಥೆ (ಎಂಡಿಇಎಸ್) ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ 73, ಪಿಯುಸಿಯ 40, ಬಿಇಡಿ ಮತ್ತು ಯುಜಿ ವಿಭಾಗದ 66, ಪಿಹೆಚ್‍ಡಿ, ಸ್ನಾತಕೋತ್ತರ ಹಾಗೂ ಡಿಪ್ಲೊಮೊ ವಿಭಾಗದಲ್ಲಿ 23 ಉನ್ನತ ಶ್ರೇಣಿಯಲ್ಲಿ ಅಂಕ ಪಡೆದ ವಿದ್ಯಾರ್ಥಿ ಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಇದಕ್ಕೂ ಮೊದಲು ಕಾರ್ಯಕ್ರಮ ವನ್ನು ಉದ್ಘಾಟಿಸಿದ ಕರ್ನಾಟಕ ಜೆಸ್ಯೂಟ್ ಸಭೆಯ ಪ್ರಾದೇಶಿಕ ಅಧ್ಯಕ್ಷ ಸ್ಟ್ಯಾನಿ ಡಿಸೋಜ ಮಾತನಾಡಿ, ವಿದ್ಯಾರ್ಥಿಗಳು ಸಾಧನೆ ಮಾಡಲು ಗುರಿ ಮತ್ತು ಸತತ ಪ್ರಯತ್ನ ಬಹಳ ಮುಖ್ಯ. ವಿದ್ಯಾ ಕ್ಷೇತ್ರದಲ್ಲಿ ಸಾಧನೆ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಬೌದ್ದಿ ಕತೆ ಹಾಗೂ ನೈತಿಕತೆ ವೃದ್ಧಿಸುತ್ತದೆ. ವಿದ್ಯಾರ್ಥಿ ಗಳಲ್ಲಿ ಓದುವುದರಲ್ಲಿ ಏಕಾಂತತೆ ಹಾಗೂ ಸಾಮಾಜಿಕ ಬದ್ದತೆಯಲ್ಲಿ ಲೋಕಾಂತತೆ ಯನ್ನು ಬೆಳೆಸುವ ಉದ್ದೇಶದಿಂದ ನಾವು ಏಕಾಂತ ಮತ್ತು ಲೋಕಾಂತ ಎಂಬ ಎರಡು ಅಂಶಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದೇವೆ ಎಂದರು.

ವಿದ್ಯಾರ್ಥಿಗಳು ತಮ್ಮ ಪ್ರಯತ್ನವನ್ನು ಒಂದು ಪ್ರಶಸ್ತಿ ಬಂದಿದೆ ಎಂದು ನಿಲ್ಲಿಸದೆ, ದೇಶದ ಉತ್ತಮ ನಾಗರಿಕರಾಗಿ, ನಾಯಕ ರಾಗಿ ಬೆಳೆಯಬೇಕು. ನಿಮ್ಮ ಜೀವನದ ಜೊತೆ ಇತರರ ಜೀವನವನ್ನು ಬೆಳಗಿಸುವ ಸಾಮಥ್ರ್ಯ ಸಂಪಾದನೆ ಮಾಡಿಕೊಳ್ಳಬೇಕು. ಸರ್ವಜ್ಞ ನಂತೆ ಸರ್ವರಿಂದ ಪದ ಕಲಿತು ಪರ್ವತದಂತೆ ಬೆಳೆಯಬೇಕು ಎಂದು ಹೇಳಿದರು.

ಮೈಸೂರು ಬಿಷಪ್ ಡಾ.ಕೆ.ವಿ. ವಿಲಿಯಂ ಮಾತನಾಡಿ, ವಿದ್ಯಾರ್ಥಿಗಳ ತಮ್ಮ ಸಾಧನೆ ಮೂಲಕ ತಂದೆ ತಾಯಿ ಮತ್ತು ಶಿಕ್ಷಣ ಸಂಸ್ಥೆ ಗಳಿಗೆ ಒಳ್ಳೆಯ ಹೆಸರು ತಂದುಕೊಡಬೇಕು. ನಮಗೆ ಅಭಿನಂದನೆ ದೊರೆಯಿತು ಎಂದು ನಿಲ್ಲದೆ ಮುಂದೆ ಸಾಗಿ, ದೊಡ್ಡ ಮಟ್ಟದ ಸಾಧನೆಗಳನ್ನು ಮಾಡಬೇಕು ಎಂದು ಹೇಳಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ನಿವೃತ್ತ ಮೈಸೂರು ಬಿಷಪ್ ಡಾ.ಥಾಮಸ್ ಅಂಥೋನಿ ವಾಳ್ಹಪಿಳ್ಳಿ, ಎಂಡಿಇಎಸ್ ಆರೋಗ್ಯ ಮತ್ತು ಶಿಕ್ಷಣ ವಿಭಾಗದ ಸಿಇಒ ಲೆಸ್ಲಿ ಮೊರಸ್, ವಿಕಾರ್ ಜನರಲ್ ಸಿ. ರಾಯಪ್ಪ, ಕಾರ್ಯದರ್ಶಿ ರೆ.ಫಾ.ವಿಜಯ್ ಕುಮಾರ್, ಸಂತ ಫಿಲೋಮಿನಾ ಕಾಲೇ ಜಿನ ಸ್ನಾತಕೋತ್ತರ ಕೇಂದ್ರ ರೆಕ್ಟಾರ್ ಬರ್ನಾಡ್ ಪ್ರಕಾಶ್, ಸಂತ ಜೋಸೆಫರ ಶಿಕ್ಷಣ ಸಂಸ್ಥೆ ಗಳ ಕಾರ್ಯನಿರ್ವಾಹಕ ಅಧಿಕಾರಿ ಪ್ರೊ. ಮಣಿ ಮ್ಯಾಥ್ಯೂ, ಜಾಯ್ಸ್ ಲೋಬೋ, ಮೋಸಸ್, ಸೆಬಿ ಮಾವೆಲಿ ಉಪಸ್ಥಿತರಿದ್ದರು.

Translate »