ಸರ್ಕಾರ ಮಾಡಲಾಗದ ಅಭಿವೃದ್ಧಿ ನಾಲ್ವಡಿಯವರು ಮಾಡಿದ್ದಾರೆ
ಮೈಸೂರು

ಸರ್ಕಾರ ಮಾಡಲಾಗದ ಅಭಿವೃದ್ಧಿ ನಾಲ್ವಡಿಯವರು ಮಾಡಿದ್ದಾರೆ

June 5, 2018

ಮೈಸೂರು: ಮೈಸೂರಿನ ತ್ಯಾಗರಾಜ ರಸ್ತೆ ಅರಸು ಮಂಡಳಿ ಸಂಘದ ಸಭಾಂಗಣದಲ್ಲಿ ಸೋಮವಾರ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಅವರು ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ನಾಲ್ವಡಿಯವರ 134ನೇ ಜನ್ಮದಿನೋತ್ಸ ವಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಾದರಿ ರಾಜಕೀಯ ವ್ಯವಸ್ಥೆಗೆ ನಾಂದಿ ಹಾಡಿದ ಹೆಗ್ಗಳಿಕೆ ನಾಲ್ವಡಿಯ ವರಿಗೆ ಸಲ್ಲುತ್ತದೆ. ಶಿಕ್ಷಣ ಕ್ರಾಂತಿ, ರಸ್ತೆ, ಒಳಚರಂಡಿ ವ್ಯವಸ್ಥೆ, ಪಾರಂಪರಿಕ ಕಟ್ಟಡಗಳ ನಿರ್ಮಾಣ ಅವರು ಯಾವುದೇ ಒಂದು ಸರ್ಕಾರ ಮಾಡಲಾಗದಷ್ಟು ಅಭಿ ವೃದ್ಧಿ ಕೆಲಸವನ್ನು ಅವರ ಅಧಿಕಾರ ಅವಧಿ ಯಲ್ಲಿ ಆಗಿವೆ. ಸಾಮಾಜಿಕ ಬದಲಾವಣೆ, ಮಹಿಳೆಯರ ಬಗೆಗಿನ ಕಾಳಜಿ ಅವರ ಲ್ಲಿತ್ತು. ಪ್ರಸ್ತುತ ಸರ್ಕಾರಗಳು ಹೊಸ ಅಭಿ ವೃದ್ಧಿ ಕೆಲಸಗಳನ್ನು ಮಾಡುವುದಕ್ಕಿಂತ ನಾಲ್ವಡಿ ಯವರ ಅಭಿವೃದ್ಧಿ ಕಾರ್ಯಗಳನ್ನು ಉಳಿಸಿ ಕೊಂಡು ಹೋದರೆ ಅದೇ ನಾಲ್ವಡಿ ಅವರಿಗೆ ಸಲ್ಲಿಸುವ ಗೌರವ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಅರಸು ಮಂಡಳಿ ಸಂಘದ ಅಧ್ಯಕ್ಷ ಕೆಂಪರಾಜ ಅರಸು, ಉಪಾ ಧ್ಯಕ್ಷ ಲಿಂಗರಾಜೇ ಅರಸ್, ಕಾರ್ಯದರ್ಶಿ ಕಿರಣ್ ಜಿ.ಎಸ್.ಅರಸ್, ಸಾಂಸ್ಕøತಿಕ ಸಮಿತಿ ಅಧ್ಯಕ್ಷೆ ಸುಮಾ, ರೈತಮುಖಂಡ ಅಶ್ವಥ್‍ನಾರಾಯಣ ರಾಜೇ ಅರಸ್ ಇನ್ನಿತರರು ಉಪಸ್ಥಿತರಿದ್ದರು.

Translate »