ಮೈಸೂರು: ಲಲಿತಕಲೆಗಳಲ್ಲಿ ಶೈಕ್ಷಣ ಕ ಅರ್ಹತೆ ಪಡೆದವರಿಗೆ ಸೂಕ್ತ ಉದ್ಯೋಗಾವಕಾಶಗಳ ಕೊರತೆ ಇರುವುದರಿಂದಾಗಿ ಯುವಜನರು ಲಲಿತಕಲೆಗಳಲ್ಲಿ ಪದವಿ ಪಡೆಯಲು ಹಿಂದೇಟು ಹಾಕುವಂತಾಗಿದೆ. ಹಾಗಾಗಿಯೇ ಸಂದೇಶದಂಥ ಲಲಿತಕಲಾ ಕಾಲೇಜುಗಳು ಮುಚ್ಚಿ ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕರ್ನಾಟಕ ಅರೆಭಾಷೆ ಸಾಹಿತ್ಯ ಹಾಗೂ ಸಂಸ್ಕೃತಿ ಅಕಾಡೆಮಿ ಸದಸ್ಯೆ ಶ್ವೇತಾ ಮಡಪ್ಪಾಡಿ ಅಭಿಪ್ರಾಯಪಟ್ಟರು.
ಮೈಸೂರಿನ ಸಂದೇಶ ಸಂಸ್ಕೃತಿ ಹಾಗೂ ಶಿಕ್ಷಣ ಪ್ರತಿಷ್ಠಾನ ಭಾನುವಾರ ಹಮ್ಮಿಕೊಂಡಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿಯ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ಲಲಿತಕಲೆಗಳಲ್ಲಿ ಪದವಿ ಪಡೆದ ಎಷ್ಟೋ ವಿದ್ಯಾರ್ಥಿಗಳು ಅನಂತರದಲ್ಲಿ ಉದ್ಯೋಗಕ್ಕಾಗಿ ಎಂಬಿಎ ಮೊದಲಾದ ವೃತ್ತಿಪರ ಕೋರ್ಸ್‍ಗಳನ್ನು ಪಡೆದು ಕಲೆಯನ್ನೇ ತ್ಯಜಿಸಬೇಕಾದ ಸಂದರ್ಭಗಳು ಎದುರಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಕಲೆಯನ್ನು ಪ್ರೋತ್ಸಾಹಿಸಲು ಸರ್ಕಾರ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದ್ದರೂ ಅವುಗಳನ್ನು ವೃತ್ತಿಯನ್ನಾಗಿ ಮುಂದುವರೆಸಲು ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕಾಗಿದೆ. ಮೈಸೂರಿನಲ್ಲಿ ಸಂಗೀತ ಹಾಗೂ ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ, ಹಾವೇರಿಯಲ್ಲಿ ಜಾನಪದ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದು ಹೊರಬಂದ ವಿದ್ಯಾರ್ಥಿಗಳ ಭವಿಷ್ಯವೇನು ಎಂಬುದಕ್ಕೆ ಉತ್ತರ ಸಿಗುತ್ತಿಲ್ಲ. ಲಲಿತಕಲೆಯನ್ನು ಪದವಿ ವಿಷಯವಾಗಿ ಪರಿಚಯಿಸಿದ ಪ್ರತಿಷ್ಠಿತ ಕಾಲೇಜುಗಳೂ ಇಂಥ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವುದು ಆತಂಕಕಾರಿ. ಹೈಸ್ಕೂಲು, ಕಾಲೇಜುಗಳಲ್ಲಿ ಅವುಗಳನ್ನು ಕಲಿಕೆಯ ವಿಷಯವಾಗಿ ಪರಿಗಣ ಸಿದರೆ ಮಾತ್ರ ವಿದ್ಯಾರ್ಥಿಗಳಲ್ಲಿ ಲಲಿತಕಲೆಯನ್ನು ಶೈಕ್ಷಣ ಕ ಅರ್ಹತೆಯನ್ನಾಗಿಸಿಕೊಳ್ಳುವ ಆಸಕ್ತಿ ಮೂಡುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಂದೇಶ ಪ್ರತಿಷ್ಠಾನದ ಟ್ರಷ್ಟಿ ರಾಯ್ ಕ್ಯಾಸ್ಟಲಿನೋ, ಫಾದರ್ ವಿಕ್ಟರ್ ವಿಜಯ್ ಲೋಬೋ ಇನ್ನಿತರರು ಉಪಸ್ಥಿತರಿದ್ದರು.