ಸುಂಟಿಕೊಪ್ಪದಲ್ಲಿ ಅರೆ ಸೇನಾಪಡೆ ಪಥ ಸಂಚಲನ
ಕೊಡಗು

ಸುಂಟಿಕೊಪ್ಪದಲ್ಲಿ ಅರೆ ಸೇನಾಪಡೆ ಪಥ ಸಂಚಲನ

April 26, 2018

ಸುಂಟಿಕೊಪ್ಪ: ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆ ಆರೆ ಸೇನಾಪಡೆ ವತಿಯಿಂದ ಸುಂಟಿಕೊಪ್ಪ ಪಟ್ಟಣದಲ್ಲಿ ಬುಧವಾರ ಪಥಸಂಚಲನ ನಡೆಸಲಾಯಿತು.

ರಾಜ್ಯದಲ್ಲಿ ವಿಧಾಸಭಾ ಚುನಾವಣೆ ಹಿನ್ನಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆಯಾಗಿ ಅರೆ ಸೇನಾಪಡೆಯ ಸಿಬ್ಬಂದಿಗಳು ವಿವಿಧ ಶಸ್ತಾಸ್ತ್ರಗಳೊಂದಿಗೆ ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿಯಿಂದ ಗದ್ದೆಹಳ್ಳದ ಗಾಂಧಿ ವೃತ್ತದವರೆಗೆ ಪಥಸಂಚಲನ ನಡೆಸುವ ಮೂಲಕ ರಾಜ್ಯ ವಿಧಾನಸಭೆಗೆ ಮೇ 12 ರಂದು ಸಾರ್ವತ್ರಿಕ ಚುನಾವಣೆಯು ನಡೆಯುತ್ತಿದ್ದು ಜನತೆಯು ಮತದಾನಕ್ಕೆ ಯಾವುದೇ ರೀತಿಯ ಅಡ್ಡಿ ಅತಂಕಗಳು ಎದುರಾಗದಂತೆ ಮುಂಜಾಗ್ರತ ಕ್ರಮವಾಗಿ ಅರೇ ಸೇನಾಪಡೆಯ ಸಿಬ್ಬಂದಿಗಳು ನಿಮ್ಮಗಳ ರಕ್ಷಣೆಗಾಗಿ ನಿಯೋಜಿಸಲಾಗಿದೆ. ಮತದಾರರು ಯಾವುದೇ ನಿರ್ಭೀತಿಯಿಲ್ಲದೆ ಆಗಮಿಸಿ ಮತದಾನ ಮಾಡುವಂತೆ ಯಾವುದೇ ಅಹಿತಕರ ಘಟನೆ ಊಹಾಪೋಹ ವಿಚಾರಗಳಿಗೆ ಕಿವಿಗೊಡದಂತೆ ಕುಶಾಲನಗರ ವೃತ್ತನಿರೀಕ್ಷಕರಾದ ಕ್ಯಾತೇಗೌಡ ತಿಳಿಸಿದರು.

ಈ ಸಂದರ್ಭ ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಮ್ ಹಾಗೂ ಕುಶಾಲನಗರ ಠಾಣಾಧಿಕಾರಿ ಜಗದೀಶ್ ಪೊಲೀಸ್ ಸಿಬ್ಬಂದಿಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.

Translate »