ಸುಂಟಿಕೊಪ್ಪ: ಶಾಲಾ ಕಾಲೇಜು ಮಕ್ಕಳಿಗೆ, ಸಾರ್ವಜನಿಕರಿಗೆ ಬೆಳಗಿನ ವೇಳೆ ಸಕಾಲದಲ್ಲಿ ಸರಕಾರಿ ಬಸ್ ಸಿಗದೆ ತೊಂದರೆಯಾಗುತ್ತಿದೆ ಎಂದು ನೊಂದ ಸಾರ್ವಜನಿಕರು, ವಿದ್ಯಾರ್ಥಿಗಳು ತಿಳಿಸಿದ್ದಾರೆ. ಸುಂಟಿಕೊಪ್ಪದಿಂದ ಬೆಳಿಗ್ಗೆ 8 ರಿಂದ 9.30 ಗಂಟೆಯವರೆಗೆ ಕೆಎಸ್‍ಆರ್‍ಟಿಸಿ ಸೆಟಲ್ ಬಸ್ಸುಗಳು ಸಮಯಕ್ಕೆ ಸರಿಯಾಗಿ ಬಾರದೆ ಶಾಲಾ ಕಾಲೇಜು ಮಕ್ಕಳು, ಸರಕಾರಿ ಕಛೇರಿಗೆ ತೆರಳುವ ನಿತ್ಯ ಪ್ರಯಾಣಿಸುವ ಮಂದಿಗೆ ತೊಂದರೆಯಾಗುತ್ತಿದೆ. ಬಂದ ಬಸ್ಸಿನಲ್ಲಿ ನೂಕುನುಗ್ಗಲಿನಿಂದ ಪ್ರಯಾಣಿಸಬೇಕಾದ ಸಂಕಷ್ಟ ಎದುರಾಗಿದೆ. ಜಿಲ್ಲಾ ಕೇಂದ್ರ ಸ್ಥಾನವಾದ ಮಡಿಕೇರಿಗೆ ಸುಂಟಿಕೊಪ್ಪ ಸುತ್ತ ಮುತ್ತಲ್ಲ ಗ್ರಾಮಗಳಾದ ಭೂತನಕಾಡು, ಮತ್ತಿಕಾಡು,…
ಶ್ರೀರಂಗಪಟ್ಟಣ ಬಳಿ ಅಪಘಾತ; ಸುಂಟಿಕೊಪ್ಪ ವ್ಯಕ್ತಿಗೆ ಗಾಯ
November 16, 2018ಸುಂಟಿಕೊಪ್ಪ: ಶ್ರೀರಂಗಪಟ್ಟಣ ಸಮೀಪ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿಯಾಗಿ ಸುಂಟಿಕೊಪ್ಪದ ವ್ಯಕ್ತಿ ಯೋರ್ವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಡವಾಗಿ ವರದಿಯಾಗಿದೆ. ಅದೃಷ್ಟ ವಶಾತ್ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾ ಯದಿಂದ ಪಾರಾಗಿದ್ದಾರೆ. ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದ ನಿವಾಸಿ, ಗ್ರಾಮ ಪಂಚಾ ಯಿತಿಯ ಸ್ವಚ್ಚತಾಗಾರರಾಗಿರುವ ಎನ್. ರಾಮ ಚಂದ್ರ ಅವರು ಪತ್ನಿ ಯಶೋದ ಅವರೊಂದಿಗೆ ಶ್ರೀರಂಗ ಪಟ್ಟಣದ ನಗುವನಳ್ಳಿಯಲ್ಲಿರುವ ನಾದಿನಿಯ ಮನೆಗೆ ಹೋಗಿದ್ದು, ನ. 13 ರಂದು ಸಂಜೆ 4…
ಸುಂಟಿಕೊಪ್ಪದಲ್ಲಿ ದುಷ್ಕರ್ಮಿಗಳಿಂದ ಆಟೋಗೆ ಬೆಂಕಿ
November 12, 2018ಸುಂಟಿಕೊಪ್ಪ: ಸುಂಟಿಕೊಪ್ಪದಲ್ಲಿ ದುಷ್ಕರ್ಮಿ ಗಳು ಆಟೋ ರಿಕ್ಷಾವೊಂದಕ್ಕೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಕಳೆದ 4 ತಿಂಗಳ ಹಿಂದೆಯಷ್ಟೆ ಆಟೋ ರಿಕ್ಷಾವೊಂದು ಕಿಡಿಗೇಡಿಗಳ ದುಷ್ಕೃತ್ಯದಿಂದ ಅಗ್ನಿಗೆ ಆಹುತಿ ಯಾದ ಘಟನೆ ಮರೆಯಾಗುವ ಮುನ್ನವೇ ಮತ್ತೊಮ್ಮೆ ಇಂತಹ ಘಟನೆ ಮರುಕಳಿಸಿದೆ. ಸುಂಟಿಕೊಪ್ಪದಲ್ಲಿ ಆಟೋ ರಿಕ್ಷಾ ಚಾಲಿಸಿತ್ತಾ ಜೀವನ ನಿರ್ವಹಿಸುತ್ತಿದ್ದ ಶಿವರಾಮ್ ಅಲಿಯಾಸ್ ಶಿವಮಣಿ ಎಂಬು ವರ ಆಟೋ ರಿಕ್ಷಾ (ಕೆಎ.12. ಬಿ.1716) ಬೆಂಕಿಗೆ ಸಿಲುಕಿ ಸುಟ್ಟು ಕರಕಲಾಗಿದೆ. ಎಂದಿನಂತೆ ನಿನ್ನೆ ರಾತ್ರಿ ಶಿವಮಣಿ ಮಾದಾ ಪುರ ರಸ್ತೆಯಲ್ಲಿ ತನ್ನ…
ಕಾನ್‍ಬೈಲು ಬೈಚನಹಳ್ಳಿಯಲ್ಲಿ ಆನೆ ಹಾವಳಿ
October 8, 2018ಸುಂಟಿಕೊಪ್ಪ: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಮ್ಮೆಗುಂಡಿ ಕಾನ್‍ಬೈಲು ಬೈಚನಹಳ್ಳಿ ನಿವಾಸಿ ಅಣ್ಣುನಾಯ್ಕ ಎಂಬುವರ ಗದ್ದೆಗೆ ಕಾಡಾನೆಗಳ ಹಿಂಡು ದಾಳಿ ನಡೆಸಿ ಬೆಳೆ ನಾಶ ಮಾಡಿ ಸುಮಾರು 50 ಸಾವಿರ ರೂ. ನಷ್ಟ ಉಂಟು ಮಾಡಿರುವ ಬಗ್ಗೆ ವರದಿಯಾಗಿದೆ. ಈ ಬಾರಿ ಅತಿವೃಷ್ಠಿಯಿಂದ ಬೆಳೆ ನಷ್ಟಗೊಂಡಿದ್ದು, ಇದೀಗ ಕಾಡಾನೆಗಳು ನಾಟಿ ಮಾಡಿದ ಗದ್ದೆಗಳಿಗೆ ದಾಳಿ ಮಾಡಿ ಪೈರುಗಳನ್ನು ತಿಂದು ತುಳಿದು ದ್ವಂಸ ಗೊಳಿಸಿ ನಂತರ ಬಾಳೆ ತೆಂಗು ಭಾರಿ ಪ್ರಮಾಣದಲ್ಲಿ ನಷ್ಟ ಪಡಿಸಿವೆ ಎಂದು ಕಾನ್‍ಬೈಲು…
ಸುಂಟಿಕೊಪ್ಪದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ
October 6, 2018ಸುಂಟಿಕೊಪ್ಪ: ಶಾಲಾ ವಿದ್ಯಾರ್ಥಿನಿಯೋರ್ವಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸುಂಟಿಕೊಪ್ಪದಲ್ಲಿ ನಡೆದಿದೆ. ಬೆಟ್ಟಗೇರಿಯ ಬಿಜಿಲಿಮಂಟಿ ಕಾಫಿ ತೋಟದಲ್ಲಿ ಕಾರ್ಮಿಕರಾಗಿರುವ ಕಿಟ್ಟು ಹಾಗೂ ನೇತ್ರ ದಂಪತಿಯ ಪುತ್ರಿ ಸಿಂಚನ (13) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಕುಶಾಲನಗರದ ಶಾಲೆಯೊಂದರಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಿಂಚನಾಳನ್ನು ಪೋಷಕರು ಹಾಸ್ಟೆಲ್‍ಗೆ ಸೇರ್ಪಡೆ ಮಾಡಿ ದ್ದರು. ಆದರೆ ಸಿಂಚನಳಿಗೆ ಹಾಸ್ಟೆಲ್‍ನಲ್ಲಿರಲು ಇಷ್ಟವಿರದೇ ಒಲ್ಲದ ಮನಸ್ಸಿ ನಿಂದ ಹಾಸ್ಟೆಲ್‍ನಿಂದ ಶಾಲೆಗೆ ಹೋಗಿ ಬರುತ್ತಿದ್ದಳು ಎನ್ನಲಾಗಿದೆ. ಇತ್ತೀಚೆಗೆ ತೋಟದಲ್ಲಿರುವ ಲೈನ್ ಮನೆಗೆ ಬಂದಿದ್ದ…
ಉರುಳಿಗೆ ಸಿಲುಕಿ ಚಿರತೆ ಸಾವು
September 16, 2018ಸುಂಟಿಕೊಪ್ಪ: ಮತ್ತಿಕಾಡುವಿನ ತೋಟವೊಂದರಲ್ಲಿ ಪ್ರಾಣಿಗಳ ಬೇಟೆಗಾಗಿ ಅಳವಡಿಸಿಲಾಗಿದ್ದ ಬೇಲಿಯ ಉರು ಳಿಗೆ ಸಿಲುಕಿ ಚಿರತೆಯೊಂದು ಪ್ರಾಣ ತೆತ್ತಿರುವ ಘಟನೆ ವರದಿಯಾಗಿದೆ. ತೋಟಕ್ಕೆ ಬೇಟೆ ಅರಸಿ ಬಂದಿದ್ದ ಅಂದಾಜು 7 ರಿಂದ 8 ವರ್ಷ ಪ್ರಾಯದ ಗಂಡು ಚಿರತೆ ಯಾರೋ ಅಳವಡಿಸಿದ ಉರುಳಿಗೆ ಸಿಲುಕಿ ಇಹಲೋಕ ತ್ಯಜಿಸಿದೆ. ಮತ್ತಿಕಾಡು ವಿನ ಕೃಷ್ಣ ತೋಟ (ಬೀಬಿ ಪ್ಲಾಂಟೇ ಶನ್) ಎಂಬವರ ತೋಟದಲ್ಲಿ ಈ ಘಟನೆಯು ಸಂಭವಿಸಿದ್ದು ತೋಟದ ಕಾರ್ಮಿಕ ಅಳಂಬೆ ಅರಸಿಕೊಂಡು ತೆರಳಿದ ಸಂದರ್ಭ ಘೋರಕೃತ್ಯ ಗೋಚರಿಸಿದೆ. ಕೂಡಲೇ ಕಾರ್ಮಿಕ…
ದೇಶದಲ್ಲಿ ಗುರುವಿಗೆ ಮಹತ್ತರ ಸ್ಥಾನ
July 30, 2018ಸುಂಟಿಕೊಪ್ಪ: ದೇಶದಲ್ಲಿ ಗುರುವಿಗೆ ಮಹತ್ತರ ಸ್ಥಾನವಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ತ್ಯಾಗ ಮನೋಭಾವನೆಯಿಂದ ಸಮಾಜ ಕಟ್ಟುವ ಕೆಲಸ ವನ್ನು ನಿರ್ವಹಿಸುತ್ತಿದ್ದು, ಯಾವುದೇ ಪ್ರತಿಫಲಾಪೇಕ್ಷೆ ನಿರೀಕ್ಷಿಸದೆ ಉತ್ತಮ ಕೆಲಸವನ್ನು ಮಾಡುತ್ತಿದೆ ಎಂದು ರಾಷ್ಟ್ರೀಯ ಸೇವಕ ಸಂಘದ ಜಿಲ್ಲಾ ಸಂಚಾಲಕ ಬೌದ್ದಿಕ್ ಅವಿನಾಶ್ ಹೇಳಿದರು. ಇಲ್ಲಿನ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಗುರು ಪೂಜೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದಿನ ಕಾಲದ ಗುರುಕುಲದಲ್ಲಿ ಗುರುಗಳು ತ್ಯಾಗ ಮನೋಭಾವ ದಿಂದ ಶಿಕ್ಷಣವನ್ನು ಶಿಷ್ಯರಿಗೆ ಧಾರೆಯೆರೆಯುತ್ತಿದ್ದರು. ಶಿಷ್ಯರು ಅಷ್ಟೇ ಗೌರವವನ್ನು…
ಕೊಡಗಿನಲ್ಲಿ ಮಳೆ ತಂದ ಅವಘಡಗಳು
July 16, 2018ಮಡಿಕೇರಿ: ಬಿರುಗಾಳಿ ಮಳೆಗೆ ಕೊಡಗು ಜಿಲ್ಲೆಯ ಜನತೆ ತತ್ತರಿಸಿದ್ದು, ಭಾರೀ ಗಾಳಿಗೆ ಹಲವೆಡೆ ಮರ, ವಿದ್ಯುತ್ ಕಂಬ ಸೇರಿದಂತೆ ಮನೆಗಳು ಕುಸಿದು ಬಿದ್ದಿದೆ. ಮಾದಾಪುರ ಸಮೀಪದ ಶಾಸಕ ಅಪ್ಪಚ್ಚು ರಂಜನ್ ಅವರ ನಿವಾಸದ ಬಳಿ ಭಾರಿ ಗಾತ್ರದ ಮರ ರಸ್ತೆಗೆ ಉರುಳಿ ಬಿದ್ದಿದ್ದು, ಮಡಿಕೇರಿ ಸೋಮವಾರಪೇಟೆ ಮಾರ್ಗವಾಗಿ ಕೆಎಸ್‍ಆರ್‍ಟಿಸಿ ಬಸ್ಸೊಂದು ಕೂದಲೆಳೆಯ ಅಂತರದಲ್ಲಿ ಭಾರೀ ಅನಾಹುತದಿಂದ ತಪ್ಪಿಸಿಕೊಂಡಿದೆ. ಮಾದಾಪುರ ಬಳಿ ಬಸ್ಸ್ ಬರುತ್ತಿದ್ದಂತೆಯೇ ಮರ ಧರೆಗುರುಳಲು ಸಿದ್ಧವಾಗುತ್ತಿತ್ತು. ತಕ್ಷಣವೇ ಸಮಯ ಪ್ರಜ್ಞೆ ಮರೆದ ಬಸ್‍ನ ಚಾಲಕ ಬಸ್ಸನ್ನು…
ತೋಟದಲ್ಲಿ ಮಗುಚಿ ಬಿದ್ದ ಕಾರು
July 15, 2018ಸುಂಟಿಕೊಪ್ಪ: ಚಾಲಕನ ಅಜಾಗರೂಕತೆಯಿಂದ ಮತ್ತು ಅತೀ ವೇಗದ ಚಾಲನೆ ಯಿಂದ ಕಾರೊಂದು ತೋಟದೊಳಗೆ ಮಗುಚಿಕೊಂಡ ಘಟನೆ ಸಮೀಪದ ಬಾಳೆಕಾಡು ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಶನಿವಾರ ನಡೆದಿದೆ. ಕುಶಾಲನಗರದಿಂದ ಮಡಿಕೇರಿಯತ್ತ ತೆರಳುತ್ತಿದ್ದ ನಾಲ್ವರು ಪ್ರವಾಸಿಗರಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯ ಬಲಭಾಗದ ತೋಟದೊಳಗೆ ಮಗುಚಿಕೊಂಡಿದೆ. ಪರಿಣಾಮ ಸಣ್ಣಪುಟ್ಟ ಗಾಯಗಳಿಂದ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಂಟಿಕೊಪ್ಪದ ಗ್ಯಾಸ್ ಏಜೆನ್ಸಿಯ ಸಮೀಪದಲ್ಲಿ ನಿಲ್ಲಿಸಿದ್ದ ಕಾರೊಂದಕ್ಕೆ ಈ ಕಾರು ತಾಗಿಸಿಕೊಂಡು ಹೋಗಿದ್ದು, ನಮ್ಮನ್ನು ಅಟ್ಟಿಸಿಕೊಂಡು ಬರುವರೆನ್ನುವ ಭೀತಿಯಿಂದ ತಪ್ಪಿಸಿಕೊಳ್ಳುವ…
ಬೀಟೆ ಮರ ಸಾಗಾಣೆ: ಇಬ್ಬರು ಆರೋಪಿ ಬಂಧನ ಮತ್ತೋರ್ವ ಆರೋಪಿ ಪರಾರಿ
June 18, 2018ಮಡಿಕೇರಿ: ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯಿಂದ ಮಡಿ ಕೇರಿ ಕಡೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಬೀಟೆಮರದ ನಾಟಾಗಳನ್ನು ಕುಶಾಲ ನಗರ ವಲಯ ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕಂಬಿಬಾಣೆ ಅಂದಗೋವೆಯಿಂದ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ ಅಂದಾಜು ಎರಡು ಲಕ್ಷ ಮೌಲ್ಯದ ಮೂರು ಬೀಟೆನಾಟಾಗಳನ್ನು ಸಾಗಿಸಲಾಗುತ್ತಿತ್ತು. ಈ ಬಗ್ಗೆ ಗ್ರಾಮಸ್ಥರಿಂದ ಖಚಿತ ಮಾಹಿತಿ ಪಡೆದ ಕುಶಾಲನಗರ ವಲಯ ಅರಣ್ಯಾ ಧಿಕಾರಿಗಳು ಮತ್ತು ಸಿಬ್ಬಂದಿಗಳು, ಸಿನಿ ಮೀಯ ಮಾದರಿಯಲ್ಲಿ ಕಂಬಿಬಾಣೆ ಬಳಿ ಮರ ಸಾಗಿಸುತ್ತಿದ್ದ ವಾಹನ ವನ್ನು ಅಡ್ಡಗಟ್ಟಿದ್ದಾರೆ. ಆದರೆ ಮರಗಳ್ಳರು…