ಉರುಳಿಗೆ ಸಿಲುಕಿ ಚಿರತೆ ಸಾವು
ಕೊಡಗು

ಉರುಳಿಗೆ ಸಿಲುಕಿ ಚಿರತೆ ಸಾವು

September 16, 2018

ಸುಂಟಿಕೊಪ್ಪ: ಮತ್ತಿಕಾಡುವಿನ ತೋಟವೊಂದರಲ್ಲಿ ಪ್ರಾಣಿಗಳ ಬೇಟೆಗಾಗಿ ಅಳವಡಿಸಿಲಾಗಿದ್ದ ಬೇಲಿಯ ಉರು ಳಿಗೆ ಸಿಲುಕಿ ಚಿರತೆಯೊಂದು ಪ್ರಾಣ ತೆತ್ತಿರುವ ಘಟನೆ ವರದಿಯಾಗಿದೆ.

ತೋಟಕ್ಕೆ ಬೇಟೆ ಅರಸಿ ಬಂದಿದ್ದ ಅಂದಾಜು 7 ರಿಂದ 8 ವರ್ಷ ಪ್ರಾಯದ ಗಂಡು ಚಿರತೆ ಯಾರೋ ಅಳವಡಿಸಿದ ಉರುಳಿಗೆ ಸಿಲುಕಿ ಇಹಲೋಕ ತ್ಯಜಿಸಿದೆ. ಮತ್ತಿಕಾಡು ವಿನ ಕೃಷ್ಣ ತೋಟ (ಬೀಬಿ ಪ್ಲಾಂಟೇ ಶನ್) ಎಂಬವರ ತೋಟದಲ್ಲಿ ಈ ಘಟನೆಯು ಸಂಭವಿಸಿದ್ದು ತೋಟದ ಕಾರ್ಮಿಕ ಅಳಂಬೆ ಅರಸಿಕೊಂಡು ತೆರಳಿದ ಸಂದರ್ಭ ಘೋರಕೃತ್ಯ ಗೋಚರಿಸಿದೆ. ಕೂಡಲೇ ಕಾರ್ಮಿಕ ಚಿನ್ನಪ್ಪ ತೋಟದ ಮಾಲೀಕರಿಗೆ ವಿಚಾರವನ್ನು ತಿಳಿಸಿದ್ದಾನೆ. ಮಾಲೀಕರು ಸ್ಥಳಕ್ಕೆ ಭೇಟಿ ನೀಡಿ ಸಂಬಂಧಿ ಸಿದ್ದ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಯಾರೋ ರಾತ್ರಿಯ ವೇಳೆ ತೋಟದ ಬೇಲಿಗೆ ಉರುಳನ್ನು ಅಳವಡಿಸಿದ್ದು ಆಹಾರ ಅರಸಿ ಬೇಟೆಯ ಭರಟೆಯಲ್ಲಿ ಬಂದ ಚಿರತೆಯ ಕುತ್ತಿಗೆ ಉರುಳಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದೆ ತೋಟದ ಮಾಲೀಕರು ನೀಡಿದ್ದ ದೂರಿನ ಮೇರೆ ಪ್ರಕರಣ ದಾಖಲಿಸಿಕೊಂಡ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳಕ್ಕೆ ಅರಣ್ಯಾಧಿಕಾರಿ ಚಿಣ್ಣಪ್ಪ ಹಾಗೂ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ಪಶು ವೈದ್ಯಾಧಿಕಾರಿಗಳಿಂದ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

Translate »