ಸುಂಟಿಕೊಪ್ಪದಲ್ಲಿ ದುಷ್ಕರ್ಮಿಗಳಿಂದ ಆಟೋಗೆ ಬೆಂಕಿ
ಕೊಡಗು

ಸುಂಟಿಕೊಪ್ಪದಲ್ಲಿ ದುಷ್ಕರ್ಮಿಗಳಿಂದ ಆಟೋಗೆ ಬೆಂಕಿ

November 12, 2018

ಸುಂಟಿಕೊಪ್ಪ: ಸುಂಟಿಕೊಪ್ಪದಲ್ಲಿ ದುಷ್ಕರ್ಮಿ ಗಳು ಆಟೋ ರಿಕ್ಷಾವೊಂದಕ್ಕೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಕಳೆದ 4 ತಿಂಗಳ ಹಿಂದೆಯಷ್ಟೆ ಆಟೋ ರಿಕ್ಷಾವೊಂದು ಕಿಡಿಗೇಡಿಗಳ ದುಷ್ಕೃತ್ಯದಿಂದ ಅಗ್ನಿಗೆ ಆಹುತಿ ಯಾದ ಘಟನೆ ಮರೆಯಾಗುವ ಮುನ್ನವೇ ಮತ್ತೊಮ್ಮೆ ಇಂತಹ ಘಟನೆ ಮರುಕಳಿಸಿದೆ.

ಸುಂಟಿಕೊಪ್ಪದಲ್ಲಿ ಆಟೋ ರಿಕ್ಷಾ ಚಾಲಿಸಿತ್ತಾ ಜೀವನ ನಿರ್ವಹಿಸುತ್ತಿದ್ದ ಶಿವರಾಮ್ ಅಲಿಯಾಸ್ ಶಿವಮಣಿ ಎಂಬು ವರ ಆಟೋ ರಿಕ್ಷಾ (ಕೆಎ.12. ಬಿ.1716) ಬೆಂಕಿಗೆ ಸಿಲುಕಿ ಸುಟ್ಟು ಕರಕಲಾಗಿದೆ. ಎಂದಿನಂತೆ ನಿನ್ನೆ ರಾತ್ರಿ ಶಿವಮಣಿ ಮಾದಾ ಪುರ ರಸ್ತೆಯಲ್ಲಿ ತನ್ನ ಮನೆಯ ಪಕ್ಕದ ರಸ್ತೆ ಬದಿಯಲ್ಲಿ ಆಟೋ ನಿಲ್ಲಿಸಿ. ತೆರೆಳಿದ್ದರು. ಇಂದು ಮುಂಜಾನೆ ಯಾರೋ ಕಿಡಿ ಗೇಡಿಗಳು ಆಟೋ ರಿಕ್ಷಾಕ್ಕೆ ಬೆಂಕಿ ಹಚ್ಚಿದ್ದಾರೆ. ಬೆಂಕಿಯ ತೀವ್ರತೆಗೆ ಇಂಜಿನ್ ಸಹಿತ ಆಟೋ ಸಂಪೂರ್ಣವಾಗಿ ಭಸ್ಮವಾಗಿದೆ. ಬೆಳಕು ಹರಿಯುತ್ತಿದ್ದಂತೆಯೇ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಕುರಿತು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಲಾಗಿದೆ.

ಪ್ರತಿಭಟನೆ: ಆಟೋ ರಿಕ್ಷಾಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪ್ರಕರಣವನ್ನು ಖಂಡಿಸಿ ಸುಂಟಿಕೊಪ್ಪದ ಆಟೋ ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಕನ್ನಡ ವೃತ್ತದಲ್ಲ್ಲಿ ರಸ್ತೆತಡೆ ನಡೆಸಿ ಪ್ರತಿಭಟಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎಂ. ಲತೀಫ್ ಅವರುಗಳು ದುಷ್ಕ ರ್ಮಿಗಳ ಕೃತ್ಯವನ್ನು ಖಂಡಿಸಿದರು. ಸುಂಟಿಕೊಪ್ಪ ವ್ಯಾಪ್ತಿ ಯಲ್ಲಿ ಕೆಲವು ಗಾಂಜಾ ವ್ಯಸನಿ ಯುವಕರಿಂದ ನಿರಂತರ ವಾಗಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯು ತ್ತಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದರಲ್ಲದೇ, ತಪ್ಪಿದಲ್ಲಿ ಹೋರಾಟವನ್ನು ತೀವ್ರ ಗೊಳಿಸುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಬಿ.ಕೆ. ಪ್ರಶಾಂತ್ ಕೋಕ, ಮಾಜಿ ಅಧ್ಯಕ್ಷ ಸಂತೋಷ್ ದಿನು, ಆಟೋ ರಿಕ್ಷಾ ಚಾಲಕರು ಹಾಗೂ ಮಾಲೀಕರು ಪಾಲ್ಗೊಂಡಿದ್ದರು.

Translate »