ಕನ್ನಡ ಪರ ಹೋರಾಟ ನಿರಂತರ
ಕೊಡಗು

ಕನ್ನಡ ಪರ ಹೋರಾಟ ನಿರಂತರ

November 12, 2018

ವಿರಾಜಪೇಟೆ : ಕರ್ನಾಟಕ ರಕ್ಷಣಾ ವೇದಿಕೆಯು (ಹೆಚ್.ಶಿವರಾಮೇಗೌಡ ಬಣ) ಕೊಡಗು ಜಿಲ್ಲೆಯಲ್ಲಿ ಕಳೆದ 13 ವರ್ಷ ಗಳಿಂದಲೂ ಕನ್ನಡಪರ ನ್ಯಾಯಕ್ಕಾಗಿ ಹೋರಾ ಟಗಳನ್ನು ನಡೆಸಿಕೊಂಡು ಬಂದಿದ್ದು ಮುಂದೆಯು ಕನ್ನಡ ಉಳಿವಿಗಾಗಿ ಹೋರಾಟ ನಡೆಸಲಾಗುವುದು ಎಂದು ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಪಿ.ಕೆ.ಜಗದೀಶ್ ಹೇಳಿದರು.

ವಿರಾಜಪೇಟೆ ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿಯ ಕಟ್ಟಡದ ಕರ್ನಾ ಟಕ ರಕ್ಷಣಾ ವೇದಿಕೆಯ ತಾಲೂಕು ಮಟ್ಟದ ನೂತನ ಕಛೇರಿಯನ್ನು ಉದ್ಘಾ ಟಿಸಿ ಮಾತನಾಡಿದ ಪಿ.ಕೆ.ಜಗದೀಶ್, ಕನ್ನಡ ಪರ ಕೆಲಸಗಳನ್ನು ಮಾಡಲು ಬೆಂಗಳೂ ರಿಗೆ ಹೋಗಬೇಕಾಗಿಲ್ಲ. ಕನ್ನಡ ನಾಡು ನುಡಿ ಉಳಿವಿಗೆ ಗಡಿ ಭಾಗದಲ್ಲಿ ನ್ಯಾಯ ಕ್ಕಾಗಿ ಹೋರಾಟ ನಡೆಸಬೇಕಾಗಿದೆ. ಈಗಾ ಗಲೇ ಕೊಡಗಿನಲ್ಲಿ ಪಟ್ಟಣ ಪಂಚಾಯಿತಿ ಚುನಾವಣೆ ನಡೆದಿದ್ದು, ಸದಸ್ಯರುಗಳು ಪಂಚಾಯಿತಿ ಒಳಗೊಂದು- ಹೊರಗೊಂದು ಆಗದಂತೆ ಎಚ್ಚರ ವಹಿಸಿ ಜನರಿಗೆ ಸೌಲ ಭ್ಯಗಳನ್ನು ಒದಗಿಸುವಂತಹ ಕೆಲಸ ಮಾಡಬೇಕಾಗಿದೆ ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ನಗರ ಠಾಣಾ ಧಿಕಾರಿ ಸಂತೋಷ್ ಕಶ್ಯಪ್ ಮಾತನಾಡಿ, ರಕ್ಷಣಾ ವೇದಿಕೆಯು ಜನರಿಗೆ ಗೊಂದಲ ಗಳು ಆಗದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕನ್ನಡ ಭಾಷೆ, ಸಂಸ್ಕøತಿ, ನಾಡು, ನುಡಿ, ಉಳಿಸಿ ಬೆಳೆಸು ವಂತ ಕೆಲಸಗಳು ಹೆಚ್ಚಾಗಿ ನಡೆಯಬೇಕಾ ಗಿದೆ ಎಂದು ಹಾರೈಸಿದರು.

ವೇದಿಕೆಯಲ್ಲಿದ್ದ ಸಮಾಜ ಸೇವಕ ಕಾಂಗ್ರೆ ಸ್‍ನ ಎಜಾಸ್, ಪಟ್ಟಣ ಪಂಚಾಯಿತಿ ಸದಸ್ಯ ರುಗಳಾದ ಮಹ್ಮದ್ ರಫಿ, ರಜನಿಕಾಂತ್, ಅಬ್ದುಲ್ ಜಲೀಲ್ ಅವರುಗಳು ಮಾತನಾಡಿ ದರು. ರಕ್ಷಣಾ ವೇದಿಕೆಯ ತಾಲೂಕು ಅಧಕ್ಷ ಕೆ.ಹೆಚ್.ಶರೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಫ್ರಾನಿಸ್ ಡಿಸೋಜ, ರೊನಾಲ್ಡ್, ನಂಜರಾಯ ಪಟ್ಟಣದ ಪಿ.ಪಿ.ಭಾಗಿರತಿ ಉಪಸ್ಥಿತರಿದ್ದರು. ವಿರಾಜಪೇಟೆ ತಾಲೂಕು ಉಪಾಧ್ಯಕ್ಷ ಮಲ್ಲಿಕಾರ್ಜುನ ರೆಡ್ಡಿ, ಕಾರ್ಯದರ್ಶಿ ತಭ್ರೀಜ್, ಖಜಾಂಚಿ ಆಶಿಫ್, ನಗರ ಅಧ್ಯಕ್ಷ ಸುಹನ್ ಕಬೀರ್ ಮುಂತಾದವರು ಹಾಜರಿದ್ದರು. ಸದಸ್ಯ ನಾಸೀರ್ ಸ್ವಾಗತಿಸಿ ನಿರೂಪಿಸಿದರು.

Translate »