ಕುಶಾಲನಗರ: ಪಟ್ಟಣದ ರಾಧಾಕೃಷ್ಣ ಬಡಾವಣೆಯಲ್ಲಿರುವ ಮುಳ್ಳುಸೋಗೆ ಗ್ರಾಮ ದೇವತೆ ಶ್ರೀ ಕೋಣ ಮಾರಿಯಮ್ಮ ದೇವಿಯ 14ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ ಇತ್ತೀಚೆಗೆ ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆಯಿಂದ ಜರುಗಿತು.
ಶ್ರೀ ಕೋಣ ಮಾರಿಯಮ್ಮ ದೇವತಾ ಸೇವಾ ಸಮಿತಿ ವತಿಯಿಂದ ಪ್ರತಿ ವರ್ಷ ದಂತೆ ಸಾರ್ವಜನಿಕರ ಹಾಗೂ ದಾನಿಗಳ ಸಹಕಾರದೊಂದಿಗೆ ಶಕ್ತಿ ದೇವಿಯ ಹಬ್ಬ ವನ್ನು ವೈಶಿಷ್ಟಪೂರ್ಣವಾಗಿ ಆಚರಿಸಲಾಯಿತು.
ಮುಳ್ಳುಸೋಗೆ ಗ್ರಾಮದ ಪಟೇಲ್ ಎಂ.ಎನ್. ಬಸಪ್ಪ ಅವರ ಮನೆಯಲ್ಲಿರುವ ದೇವಿಯ ವಿಗ್ರ ಹಗಳನ್ನು ತಂದು ಅಂದು ಬೆಳಿಗ್ಗೆ 5 ಗಂಟೆಗೆ ಪವಿತ್ರ ಕಾವೇರಿ ನದಿಯಲ್ಲಿ ಸ್ವಚ್ಚಗೊಳಿಸಿ ಪೂಜೆ ಸಲ್ಲಿಸ ಲಾಯಿತು. ನಂತರ ಗಂಗೆ ಪೂಜೆ ಸಲ್ಲಿಸಿ ದೇವಿಯ ವಿಗ್ರಹದೊಂದಿಗೆ ಪೂರ್ಣ ಕುಂಭ ಹೊತ್ತು ಮಹಿಳೆಯರು ಉತ್ಸವ ದೊಂದಿಗೆ ಮಂಗಳವಾದ್ಯದೊಂದಿಗೆ ಮೆರ ವಣಿಗೆ ನಡೆಸಿದರು. ಪಟ್ಟಣ ಪ್ರಮುಖ ಬೀದಿ ಗಳಲ್ಲಿ ಮೆರ ವಣಿಗೆ ನಡೆಸಿ ನಂತರ ಗೌಡ ಸಮಾಜ ರಸ್ತೆಯಲ್ಲಿರುವ ಕೋಣ ಮಾರಿಯಮ್ಮ ಬನದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿ ಸಲಾಯಿತು. ದೇವಿಯ ಬನದಲ್ಲಿ ಗಣಪತಿ ಹೋಮ ಮಹಾಮಂಗಳಾರತಿ ನೆರವೇರಿಸಿದ ಬಳಿಕ ಭಕ್ತಾ ದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು.