‘ಕಾವೇರಿ’ ತಾಲೂಕು ಕೇಂದ್ರಕ್ಕೆ ರಾಜ್ಯ ಸರ್ಕಾರ ಅಸ್ತು
ಕೊಡಗು

‘ಕಾವೇರಿ’ ತಾಲೂಕು ಕೇಂದ್ರಕ್ಕೆ ರಾಜ್ಯ ಸರ್ಕಾರ ಅಸ್ತು

February 27, 2019

ಕುಶಾಲನಗರ: ಎರಡು ದಶಕದ ಕನಸಾದ ‘ಕಾವೇರಿ’ ತಾಲೂಕು ಹೋರಾಟಕ್ಕೆ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಸಿರು ನಿಶಾನೆ ತೋರಿಸಿದ್ದು, ಫೆ.28 ರಂದು ಕುಶಾಲನಗರಕ್ಕೆ ಬಂದು ಅಧಿಕೃತವಾಗಿ ಘೋಷಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ಹೋರಾಟ ಕೇಂದ್ರೀಯ ಸಮಿತಿ ಪದಾಧಿಕಾರಿ ಗಳು ಹಾಗೂ ಸಾರ್ವಜನಿಕರು ಸಂಭ್ರಮಾಚರಿಸಿದರು.

ಕುಶಾಲನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಮಂಗಳವಾರ ಸಂಜೆ ಸಮಾವೇಶಗೊಂಡ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ತಿನಿಸಿ ವಿಜಯೋತ್ಸವ ಆಚರಿಸಿದರು. ತಾಲೂಕು ಹೋರಾಟದ ಕನಸನ್ನು ನನಸಾಗಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಜೈಕಾರಗಳನ್ನು ಹಾಕಿದ ಹೋರಾಟಗಾರರು, ಸತತ ಹೋರಾಟದ ಫಲವಾಗಿ ದೊರೆತ ಕಾವೇರಿ ತಾಲೂಕು ಹೋರಾಟಕ್ಕೆ ಭಾಗಿಯಾದ ಸರ್ವ ಜನರಿಗೂ ತಾಲೂಕು ಹೋರಾಟ ಕೇಂದ್ರೀಯ ಸಮಿತಿಯಿಂದ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭ ಪ್ರಮುಖರಾದ ಕೆ.ಪಿ.ಚಂದ್ರಕಲಾ, ಆರ್.ಕೆ. ನಾಗೇಂದ್ರ ಬಾಬು, ಎಂ.ಕೆ.ದಿನೇಶ್, ಎಸ್.ಕೆ.ಸತೀಶ್, ಕೆ.ಎಸ್. ಮಹೇಶ್, ಅಬ್ದುಲ್ ಖಾದರ್, ಸುನೀತಾ ಮಂಜುನಾಥ್, ನವೀನ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Translate »