ಕೂಡಿಗೆ ಬಳಿ ಚಿರತೆ ದಾಳಿಗೆ ಆಕಳು ಬಲಿ
ಕೊಡಗು

ಕೂಡಿಗೆ ಬಳಿ ಚಿರತೆ ದಾಳಿಗೆ ಆಕಳು ಬಲಿ

January 12, 2019

ಕುಶಾಲನಗರ: ಸಮೀಪದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಕಾಡಂಚಿನ ಗ್ರಾಮದಲ್ಲಿ ಬುಧವಾರ ಸಂಜೆ ಚಿರತೆ ದಾಳಿಗೆ ಆಕಳೊಂದು ಮೃತಪಟ್ಟಿ ರುವ ಘಟನೆ ನಡೆದಿದೆ.

ಹುದುಗೂರು ಗ್ರಾಮದ ನಿವಾಸಿ ರೈತ ಮಹಿಳೆ ಆಶೀಯಾ ಎಂಬುವರಿಗೆ ಸೇರಿದ 3 ವರ್ಷದ ಆಕಳು ಬಲಿಯಾಗಿದೆ. ಸೋಮ ವಾರಪೇಟೆ ವಿಭಾಗದ ಹುದುಗೂರು ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಕಾಡಂಚಿನಲ್ಲಿರುವ ಜಮೀನಿನಲ್ಲಿ ಓಡಾ ಡುವ ಈ ಚಿರತೆ ಹೊಲಗದ್ದೆಗಳಲ್ಲಿ ಹುಲ್ಲು ಮೇಯುತ್ತಿರುವ ಹಸು, ಆಡು-ಕುರಿಗಳ ಮೇಲೆ ದಾಳಿ ನಡೆಸುತ್ತಿದೆ. ಬುಧವಾರ ಸಂಜೆ ಚಿರತೆ ದಾಳಿಗೆ ಆಕಳು ಬಲಿಯಾಗಿದ್ದು, ಚಿರತೆ ಆಕಳನ್ನು ಸಂಪೂರ್ಣ ತಿಂದು ಕಾಲ್ಕಿತ್ತಿದೆ. ಕಾಡಿನಿಂದ ಸಂಜೆ ವೇಳೆ ಆಗಮಿಸುವ ಈ ಚಿರತೆ ರೈತರ ಜಾನುವಾರಗಳ ಮೇಲೆ ದಾಳಿ ನಡೆಸುತ್ತಿದ್ದು, ಇದರಿಂದ ಸುತ್ತ ಮುತ್ತಲಿನ ರೈತರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ. ಹುದುಗೂರು ವ್ಯಾಪ್ತಿಯಲ್ಲಿ ಭಯದ ವಾತಾವರಣಕ್ಕೆ ಕಾರಣವಾಗಿರುವ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಕ್ರಮಕೈಗೊಳ್ಳ ಬೇಕು ಎಂದು ರೈತರು ಆಗ್ರಹಿಸಿದ್ದಾರೆ.

Translate »