ಪೊನ್ನಂಪೇಟೆಯಲ್ಲಿ ಮನಸೂರೆಗೊಂಡ ಸಾಂಸ್ಕøತಿಕ ಸೌರಭ
ಕೊಡಗು

ಪೊನ್ನಂಪೇಟೆಯಲ್ಲಿ ಮನಸೂರೆಗೊಂಡ ಸಾಂಸ್ಕøತಿಕ ಸೌರಭ

ವಿರಾಜಪೇಟೆ: ಕಲಾವಿದರ ನೃತ್ಯ, ಹಿಂದುಸ್ಥಾನಿ ಮತ್ತು ಕರ್ನಾಟಕ ಸಂಗೀತ ಗೀತಗಾಯನ, ವಯಲಿನ್, ಕೊಳಲು ವಾದನ, ಗೀಗಿಪದ, ಗಿರಿಜನ ನೃತ್ಯ, ಕಂಸಾಳೆ, ಮೊದಲಾದ ಸಾಂಸ್ಕøತಿಕ ಕಲೆಗಳು ಹಾಗೂ ಮೈಸೂರಿನ ಡೊಳ್ಳುಕುಣಿತದ ಕಲಾವಿದರು ನೋಡುಗರನ್ನು ರೋಮಾಂಚನಗೊಳಿಸಿದರು.

ಕನ್ನಡ ಮತ್ತು ಸಂಸ್ಕøತಿಕ ಇಲಾಖೆಯಿಂದ ಪೊನ್ನಂಪೇಟೆ ಸಾಯಿಶಂಕರ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಸಾಂಸ್ಕøತಿಕ ಸೌರಭದಲ್ಲಿ ಮೈಸೂರಿನ ಅರಮನೆ ಕಲಾವಿದರು ನುಡಿಸಿದ ಸುಶ್ರಾವ್ಯ ವಯಲಿನ್ ವಾದನ ಪ್ರೇಕ್ಷಕರಿಗೆ ಮುದ ನೀಡಿತು. ಇದೇ ಕಲಾವಿದರ ಕೊಳಲು ವಾದನವು ಇಂಪಾಗಿತ್ತು. ಆನಂತರ ಬೆಂಗ ಳೂರಿನ ನಾಟ್ಯಾಲಯ ನೃತ್ಯ ಶಾಲೆಯ ನೃತ್ಯ ಮನಮೋಹ ಕವಾಗಿತ್ತು. ಮತ್ತೊಂದು ಕಡೆ ಕಂಸಾಳೆ ಕಲಾವಿದರು ತಮ್ಮ ತಾಳಮೇಳದೊಂದಿಗೆ ಸುಂದರವಾಗಿ ನರ್ತಿಸಿದರು.

ಪೊನ್ನಂಪೇಟೆಯ ಸಂಗೀತ ಕಲಾವಿದೆ ನಿರ್ಮಲಾ ಬೋಪಣ್ಣ ಅವರ ಗೀತಗಾಯನ, ವಿರಾಜಪೇಟೆಯ ಬಿ.ಎಸ್. ದಿಲಿಕುಮಾರ್ ಅವರ ಶಾಸ್ತ್ರಿಯ ಸಂಗೀತ ಸುಶ್ರಾವ್ಯವಾಗಿತ್ತು. ಪೊನ್ನಂ ಪೇಟೆ ಜೈ ಭೀಮ್ ಯುವಕ ಸಂಘದ ಗಿರೀಶ್ ತಂಡದವರ ಜಾನ ಪದ ಗೀತೆ ನೃತ್ಯ ಹಾಗೂ ಗೀಗೀ ಪದ, ಷಡಕ್ಷರಯ್ಯ ಅವರ ವಚನ ಗಾಯನ ಅತ್ಯುತ್ತಮವಾಗಿ ಮೂಡಿ ಬಂತು. ನಾಣಚಿಯ ಅಮ್ಮಾಳಮ್ಮ ಗಿರಿಜನರ ನೃತ್ಯ ಮನಮೋಹಕ ವಾಗಿತ್ತು. ವೇದಿಕೆಯಲ್ಲಿ ಮೂಡಿ ಬಂದ ಈ ಎಲ್ಲಾ ವೈವಿಧ್ಯಮಯ ಕಾರ್ಯಕ್ರಮವನ್ನು ಆಸ್ವಾದಿ ಸಿದ ಪ್ರೇಕ್ಷಕರು ಚಪ್ಪಾಳೆಗಳ ಸುರಿಮಳೆ ಮೂಲಕ ಕುಣಿದು ಕುಪ್ಪಳಿ ಸಿತು. ಕಾರ್ಯಕ್ರಮವನ್ನು ಸಾಯಿಶಂಕರ ವಿದ್ಯಾಸಂಸ್ಥೆ ಅಧ್ಯಕ್ಷ ಕೋಳೆರ ಝರು ಗಣಪತಿ ಉದ್ಘಾಟಿಸಿದರು.

ಉಪನ್ಯಾಸಕ ಡಾ.ಜೆ.ಸೋಮಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತಾ ಗಣೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ದಕ್ಷನಾ, ಮಂಜುನಾಥ್ ಮಣಜೂರು, ಮೋಹನ್ ಕುಮಾರ್ ಮುಂತಾದವರು ಹಾಜರಿದ್ದರು.

January 12, 2019

Leave a Reply

Your email address will not be published. Required fields are marked *