ಹಾರಂಗಿ ಜಲಾನಯನದಲ್ಲಿ ತುಂಬಿರುವ ಹೂಳು: ಪ್ರಮಾಣ ಪತ್ತೆಗೆ ಭರದಿಂದ ಸಾಗಿದೆ ಸರ್ವೇ ಕಾರ್ಯ
ಕೊಡಗು

ಹಾರಂಗಿ ಜಲಾನಯನದಲ್ಲಿ ತುಂಬಿರುವ ಹೂಳು: ಪ್ರಮಾಣ ಪತ್ತೆಗೆ ಭರದಿಂದ ಸಾಗಿದೆ ಸರ್ವೇ ಕಾರ್ಯ

February 15, 2019

ಕುಶಾಲನಗರ: ಕೊಡಗು ಜಿಲ್ಲೆಯಲ್ಲಿ ಕಳೆದ ಆಗಸ್ಟ್ ನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಹಾರಂಗಿ ಜಲಾನಯನ ಪ್ರದೇಶದಲ್ಲಿ ಅಪಾರ ಪ್ರಮಾಣ ದಲ್ಲಿ ಭೂಕುಸಿತ ಸಂಭವಿಸಿದ್ದು, ಬೆಟ್ಟಗುಡ್ಡಗಳ ಮಣ್ಣು ನದಿ ನೀರಿನೊಂದಿಗೆ ಮಿಶ್ರಣಗೊಂಡು ಹಾರಂಗಿ ಜಲಾ ಶಯದ ಒಡಲು ಸೇರುವ ಹಿನ್ನೆಲೆಯಲ್ಲಿ ಎಷ್ಟು ಪ್ರಮಾ ಣದಲ್ಲಿ ಹೂಳು ತುಂಬಿದೆ ಎಂಬುದನ್ನು ಪತ್ತೆ ಹಚ್ಚಲು ಇದೀಗ ಹಾರಂಗಿ ಜಲಾನಯನ ಪ್ರದೇಶದಲ್ಲಿ ಸರ್ವೇ ಕಾರ್ಯ ಭರದಿಂದ ನಡೆಯುತ್ತಿದೆ.

ರಾಜ್ಯ ಸಮ್ಮಿಶ್ರ ಸರ್ಕಾರ ಹಾರಂಗಿ ಜಲಾನಯನ ಪ್ರದೇಶ ಹಾಗೂ ನದಿ ಪಾತ್ರಗಳ ಪುನಶ್ಚೇತನ ಕಾಮ ಗಾರಿಗಳಿಗೆ ಬಜೆಟ್‍ನಲ್ಲಿ ರೂ.75 ಕೋಟಿ ಅನುದಾನ ವನ್ನು ಮೀಸಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ಕಣಿ ವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿ ಅಣೆಕಟ್ಟೆ ವ್ಯಾಪ್ತಿಯಲ್ಲಿ ಸರ್ವೇ ಕಾರ್ಯ ಕೈಗೊಳ್ಳಲು ಮಂಡ್ಯ ಕೃಷ್ಣರಾಜಸಾಗರ ಎಂಜಿನಿಯ ರಿಂಗ್ ಸಂಶೋಧನಾ ಸಂಸ್ಥೆ ವತಿಯಿಂದ ಟೆಂಡರ್ ಆಹ್ವಾನಿಸಿ ಮಂಗಳೂರಿನ ಜಿಯೋಮರೈನ್ ಪ್ರ್ವೈವೈಟ್ ಲಿಮಿಟೆಡ್ ಸಂಸ್ಥೆಗೆ ಸರ್ವೇ ಕಾರ್ಯ ನಡೆಸಲು ಗುತ್ತಿಗೆ ನೀಡಲಾಗಿದ್ದು, ಕಳೆದ ನಾಲ್ಕು ದಿನಗಳಿಂದ ಸರ್ವೇ ಕಾರ್ಯ ಸದ್ದಿಲ್ಲದೆ ಸಾಗಿದೆ.

ಕೊಡಗು ಜಿಲ್ಲೆಯಲ್ಲಿ ಕಳೆದ ಆಗಸ್ಟ್‍ನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭ ಹಾರಂಗಿ ಜಲಾ ನಯನ ಪ್ರದೇಶ ವ್ಯಾಪ್ತಿಯಲ್ಲಿ ಭೂ ಕುಸಿತ ಉಂಟಾದ ಪರಿಣಾಮ ಭಾರಿ ಪ್ರಮಾಣದಲ್ಲಿ ಮಣ್ಣು ಮಳೆ ನೀರಿನೊಂದಿಗೆ ನದಿಯ ಮೂಲಕ ಜಲಾಶಯದ ಒಡಲು ಸೇರಿದೆ. ಈ ವರ್ಷ ವಾಡಿಕೆಗಿಂತ ಅಧಿಕ ಪ್ರಮಾಣ ದಲ್ಲಿ ಹೂಳು ಸಂಗ್ರಹಗೊಂಡು ನೀರಿನ ಸಂಗ್ರಹ ಪ್ರಮಾಣದಲ್ಲಿ ಇಳಿಮುಖವಾಗಿದೆ ಎಂಬ ಆತಂಕ ಎದುರಾಗಿದೆ. ಇದರಿಂದ ಅಣೆಕಟ್ಟೆ ಕಾರ್ಯಕ್ಷಮತೆ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದ ರಿಂದ ಹೊಳೆತ್ತಲು ಕ್ರಮ ಕೈಗೊಳ್ಳುವಂತೆ ರೈತರು ಒತ್ತಾಯಿಸಿದ್ದರು.

ಜಲಾಶಯದ ಪ್ರಮುಖ ಜಲಮೂಲ ವಾದ ಕೂಟುಹೊಳೆ, ಹಟ್ಟಿಹೊಳೆ, ಮಾದಾಪುರ ಹೊಳೆಗಳು ಹರಿಯವ ಪ್ರದೇಶದಲ್ಲಿಯೇ ದೊಡ್ಡ ಪ್ರಮಾಣದಲ್ಲಿ ಬೆಟ್ಟಗುಡ್ಡಗಳು ಕುಸಿದಿದ್ದು, ಅಪಾರ ಪ್ರಮಾಣ ದಲ್ಲಿ ಮಣ್ಣು ನದಿ ಸೇರಿದೆ. ಮಂಗಳೂರಿನ ಜಿಯೋ ಮರೈನ್ ಪ್ರ್ವೈವೈಟ್ ಲಿಮಿಟೆಡ್ ಸಂಸ್ಥೆಯ ಎಂಟು ಜನರ ತಂಡ ಕಳೆದ ನಾಲ್ಕು ದಿನಗಳಿಂದ ಹಾರಂಗಿ, ಗರ ಗಂದೂರು, ಹೇರೂರು, ಹಾರಂಗಿ ಹಿನ್ನೀರು, ಮಾದಾಪುರ ಸುತ್ತಮುತ್ತಲ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯ ಯನ ನಡೆಸಿದ್ದಾರೆ. ಹಾರಂಗಿ ಅಣೆಕಟ್ಟೆಯಲ್ಲಿ ನೀರು ಇರುವ ಪ್ರದೇಶದಲ್ಲಿ ಬೋಟ್ ಮೂಲಕ ಹೈಡ್ರೋ ಗ್ರಾಫಿಕ್ ಸರ್ವೇ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ. ನೀರು ಇಲ್ಲದ ಪ್ರದೇಶಗಳಲ್ಲಿ ಡ್ರೋಣ್ ಕ್ಯಾಮರಾದ ಮೂಲಕ ಸರ್ವೇ ಕಾರ್ಯ ನಡೆಸುತ್ತಿದ್ದಾರೆ. ಅಧ್ಯಯನ ತಂಡದೊಂದಿಗೆ ಹಾರಂಗಿ ನೀರಾವರಿ ಇಲಾಖೆ ಕಾರ್ಯ ಪಾಲಕ ಎಂಜಿನಿಯರ್ ರಾಜೇಗೌಡ, ನಾಗರಾಜು ಮಾರ್ಗದರ್ಶನ ಮಾಡುವ ಮೂಲಕ ಸರ್ವೇ ಕಾರ್ಯಕ್ಕೆ ಸಹಕಾರ ನೀಡುತ್ತಿದ್ದಾರೆ.

ಹಾರಂಗಿ ಅಣೆಕಟ್ಟೆಯಲ್ಲಿ ತುಂಬಿರುವ ಹೂಳಿನ ಪ್ರಮಾ ಣವನ್ನು ಪತ್ತೆ ಹಚ್ಚುವ ಉದ್ದೇಶದಿಂದ ಖಾಸಗಿ ಸಂಸ್ಥೆಗೆ ಸರ್ವೇ ಕಾರ್ಯ ನಡೆಸಲು ಅವಕಾಶ ನೀಡಲಾಗಿದ್ದು, ಈಗಾಗಲೇ ಸರ್ವೇ ಕಾರ್ಯ ಬಿರುಸಿನಿಂದ ನಡೆಯು ತ್ತಿದೆ. ಈ ಸರ್ವೇ ಕಾರ್ಯವು ಫೆ.25ಕ್ಕೆ ಮುಕ್ತಾ ಯಗೊಳ್ಳಲಿದ್ದು, ಇವರು ನೀಡುವ ವರದಿ ಆಧಾರದ ಮೇಲೆ ಹಿಂದೆ ಇದ್ದ ಜಲಾಶಯದ ಚಿತ್ರಣ ಹಾಗೂ ಈಗಿನ ಚಿತ್ರಣವನ್ನು ಸಮೀಕರಣಗೊಳಿಸಿ ಎಷ್ಟು ಪ್ರಮಾಣದಲ್ಲಿ ಹೂಳು ತುಂಬಿದೆ ಎಂಬ ಬಗ್ಗೆ ಸರ್ಕಾ ರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕೆಇಆರ್‍ಎಸ್ ಕೇಂದ್ರದ ಸಹಾಯಕ ಎಂಜಿನಿಯರ್ ರವಿಶಂಕರ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಹರಿವು ಕ್ಷೀಣ: ಜಲಾಶಯದಲ್ಲಿ ಬೇಸಿಗೆ ಅವಧಿಗೂ ಮುನ್ನವೇ ನೀರಿನ ಪ್ರಮಾಣದಲ್ಲಿ ಗಣನೀಯವಾಗಿ ಕುಸಿತ ಕಂಡುಬಂದಿದೆ. ಜಲಾಶಯದ ಜಲಮೂಲವಾದ ನದಿಗಳಲ್ಲಿ ನೀರಿನ ಹರಿಯುವಿಕೆ ಪ್ರಮಾಣ ಕ್ಷೀಣಿಸಿದ್ದು, ಇದರಿಂದ ಒಳಹರಿವು ಇಳಿಮುಖಗೊಂಡಿದೆ. ಇದ ರಿಂದ ಬೇಸಿಗೆ ಅವಧಿಯಲ್ಲಿ ಪರಿಸ್ಥಿತಿ ಹದಗೆಡುವ ಆತಂಕ ಎದುರಾಗಿದೆ.

2859 ಗರಿಷ್ಠ ಅಡಿ ಸಾಮಥ್ರ್ಯದ ಜಲಾಶಯದಲ್ಲಿ ಗುರುವಾರ 2810.83 ಅಡಿಯಷ್ಟು ನೀರು ಇದೆ. ಜಲಾಶಯಕ್ಕೆ ಬೆಳಿಗ್ಗೆ 6 ಗಂಟೆಗೆ ಕೇವಲ 76 ಕ್ಯೂಸೆಕ್ಸ್ ನೀರು ಒಳಹರಿವು ಇದ್ದು, ಕುಡಿಯುವ ನೀರಿಗಾಗಿ ನದಿಗೆ 10 ಕ್ಯೂಸೆಕ್ಸ್, ಕಾಲುವೆಗೆ 15 ಕ್ಯುಸೆಕ್ಸ್ ನೀರು ಹರಿಸಲಾಗುತ್ತಿದೆ.

ಜಲಾಶಯದ ಡೆಡ್ ಸ್ಟೋರೇಜ್ 0.75 ಟಿಎಂಸಿ ನೀರು ಹೊರತು ಪಡಿಸಿ ಉಳಿದ ನೀರನ್ನು ಮುಂದಿನ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಣೆಕಟ್ಟೆಯಲ್ಲಿ ನೀರು ಕಾಯ್ದಿ ರಿಸಲು ನೀರಾವರಿ ಇಲಾಖೆ ಕ್ರಮ ಕೈಗೊಂಡಿದೆ ಎಂದು ಸಹಾಯಕ ಎಂಜಿನಿಯರ್ ಎಸ್.ಎನ್. ನಾಗರಾಜು ತಿಳಿಸಿದ್ದಾರೆ.

Translate »