ವಕೀಲರ ಪ್ರತಿಭಟನಾ ಸ್ಥಳಕ್ಕೆ ಸಂಸದ ಆರ್.ಧ್ರುವನಾರಾಯಣ್ ಭೇಟಿ
ಚಾಮರಾಜನಗರ

ವಕೀಲರ ಪ್ರತಿಭಟನಾ ಸ್ಥಳಕ್ಕೆ ಸಂಸದ ಆರ್.ಧ್ರುವನಾರಾಯಣ್ ಭೇಟಿ

February 15, 2019

ಚಾಮರಾಜನಗರ: ವಕೀಲರಾದ ಡಿ.ರವಿರವರ ಮೇಲೆ ದೈಹಿಕ ಹಲ್ಲೆ ಮಾಡಿ ಸುಳ್ಳು ಪ್ರಕರಣ ದಾಖಲಿಸಿರುವ ಗುಂಡ್ಲು ಪೇಟೆ ಪೊಲೀಸ್ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ಬಾಲಕೃಷ್ಣಗೌಡ ಮತ್ತು ಸಬ್‍ಇನ್ಸ್ ಪೆಕ್ಟರ್ ಲತೇಶ್‍ಕುಮಾರ್ ಅವರನ್ನು ಅಮಾ ನತ್ತು ಪಡಿಸುವಂತೆ ಒತ್ತಾಯಿಸಿ ನಗರದ ಜಿಲ್ಲಾ ವಕೀಲರ ಸಂಘದ ಆವರಣದಲ್ಲಿ ಜಿಲ್ಲಾ ವಕೀಲರ ಸಂಘದವರು ನ್ಯಾಯಾಲಯದ ಕಲಾಪಗಳಿಂದ ಹೊರಗುಳಿದು ಕಳೆದ 10 ದಿನಗಳಿಂದ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಸಂಸದ ಆರ್.ದ್ರುವನಾರಾಯಣ್ ಭೇಟಿ ನೀಡಿ ಮನವಿ ಸ್ವೀಕರಿಸಿದರು.

ನಂತರ ಅವರು ಮಾತನಾಡಿ, ಗೃಹ ಸಚಿವ ಎಂ.ಬಿ.ಪಾಟೀಲ್, ಡಿಜಿ, ಐಜಿ ಅವರ ಜೊತೆ ಯಲ್ಲಿ ಚರ್ಚಿಸಿ ಘಟನೆಯನ್ನು ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮಗೊಳ್ಳುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮ ತ್ತೂರು ಇಂದುಶೇಖರ್ ಮಾತನಾಡಿ, ವಕೀಲ ರಾದ ಡಿ.ರವಿ ಅವರ ಮೇಲೆ ದೈಹಿಕ ಹಲ್ಲೆ ಮಾಡಿ, ಸುಳ್ಳು ಪ್ರಕರಣ ದಾಖಲಿಸಿರುವ ಗುಂಡ್ಲುಪೇಟೆ ಪೊಲೀಸ್ ಠಾಣೆ ಸರ್ಕಲ್ ಇನ್‍ಪೆಕ್ಟರ್ ಬಾಲಕೃಷ್ಣಗೌಡ ಮತ್ತು ಸಬ್ ಇನ್ಸ್‍ಪೆಕ್ಟರ್ ಲತೇಶ್‍ಕುಮಾರ್ ಅವರನ್ನು ಅಮಾನತ್ತು ಪಡಿಸುವಂತೆ ಒತ್ತಾಯಿಸಿ ನಗ ರದ ಜಿಲ್ಲಾ ವಕೀಲರ ಸಂಘದ ಆವರಣ ದಲ್ಲಿ ಕಳೆದ 10 ದಿನಗಳಿಂದ ಜಿಲ್ಲಾ ವಕೀ ಲರ ಸಂಘದ ವತಿಯಿಂದ ನ್ಯಾಯಾಲಯ ಕಲಾಪಗಳಿಂದ ಹೊರಗುಳಿದು ಪ್ರತಿಭಟನೆ ನಡೆಸಲಾಗುತ್ತದೆ. ಆದರೂ ಸಹ ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾ ಬ್ದಾರಿ ಹೊತ್ತಿರುವ ಜಿಲ್ಲಾ ಪೊಲೀಸ್ ವರಿ ಷ್ಠಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡ ಬಹುದಿತ್ತು. ಅವರು ಭೇಟಿ ನೀಡದಿರು ವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ತಪ್ಪಿತಸ್ಥ ಅಧಿಕಾರಗಳನ್ನು ರಕ್ಷಣೆ ಮಾಡುವ ಹುನ್ನಾರ ಮಾಡುತ್ತಿದ್ದಾರೆ ಎಂದು ಉಮ್ಮ ತ್ತೂರು ಇಂದುಶೇಖರ್ ಆರೋಪಿಸಿದರು.
ಸರ್ಕಲ್ ಇನ್‍ಪೆಕ್ಟರ್ ಬಾಲಕೃಷ್ಣಗೌಡ ಮತ್ತು ಸಬ್‍ಇನ್‍ಪೆಕ್ಟರ್ ಲತೇಶ್‍ಕುಮಾರ್ ಅವರನ್ನು ಅಮಾನತ್ತು ಪಡಿಸುವ ತನಕ ಪ್ರತಿಭಟನೆಯನ್ನು ಕೈ ಬಿಡುವುದಿಲ್ಲ ಎಂದು ಉಮ್ಮತ್ತೂರು ಇಂದುಶೇಖರ್ ತಿಳಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಅರುಣ್‍ಕುಮಾರ್, ಜಂಟಿ ಕಾರ್ಯದರ್ಶಿ ದಲಿತ್‍ರಾಜ್, ಖಜಾಂಚಿ ಮಹಾಲಿಂಗಸ್ವಾಮಿ, ಹಿರಿಯ ವಕೀಲರಾದ ಕೆ.ಬಾಲಸುಬ್ರಹ್ಮಣ್ಯ, ಕೆ.ಬಿ.ಶಿವರುದ್ರಪ್ಪ, ಪುಟ್ಟ ನಂಜಯ್ಯ, ಪುಟ್ಟರಾಜು, ಎಂ.ಚಿನ್ನಸ್ವಾಮಿ, ಸಿ.ಎಂ.ಶ್ರೀನಿವಾಸಮೂರ್ತಿ, ಎಂ.ಮಾದೇಶ್, ರಾಮಸಮುದ್ರಪುಟ್ಟಸ್ವಾಮಿ, ಪಾಪಣ್ಣಶೆಟ್ಟಿ, ಎ.ಎಸ್.ವಿಜಯಕುಮಾರ್ ಹಾಗೂ ಚಾಮ ರಾಜನಗರ, ಗುಂಡ್ಲುಪೇಟೆ, ಯಳಂ ದೂರು ಸದಸ್ಯರು ಭಾಗವಹಿಸಿದ್ದರು.

Translate »