ವಿವಿಧ ಸಂಘಟನೆಗಳಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ
ಚಾಮರಾಜನಗರ

ವಿವಿಧ ಸಂಘಟನೆಗಳಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

February 15, 2019

ಕೊಳ್ಳೇಗಾಲ: ಗುರು ವಾರ ಕಾಶ್ಮೀರದಲ್ಲಿ ಭಯೋತ್ಪಾದಕರ ವಿಧ್ವಂ ಸಕ ಕೃತ್ಯಕ್ಕೆ ಹುತಾತ್ಮರಾದ ವೀರ ಯೋಧ ರಿಗೆ ಪಟ್ಟಣದಲ್ಲಿ ಜೆಎಸ್‍ಬಿ ಪ್ರತಿಷ್ಠಾನ, ರೋಟರಿ ಸಂಸ್ಥೆ, ಹೆಚ್.ಕೆ.ಟ್ರಸ್ಟ್, ಅಂಬೇ ಡ್ಕರ್ ಸಂಘ ಸೇರಿದಂತೆ ಇತರೆ ಸಂಘಟ ನೆಗಳ ಸಹಯೋಗದಲ್ಲಿ ವಿದ್ಯಾರ್ಥಿಗಳ ಸಹಕಾರದೊಂದಿಗೆ ಭಾವಪೂರ್ಣ ಶ್ರದ್ದಾಂಜಲಿ ಸಮರ್ಪಿಸಲಾಯಿತು.

ಮಾನವ ಸರಪಳಿ ನಿರ್ಮಿಸಿದ ಬಳಿಕ ಮೌನಾಚರಿಸಿ ಮೇಣದ ಬತ್ತಿ ಹಿಡಿದು ಹುತಾತ್ಮ ಯೋಧರಿಗೆ ಶ್ರದ್ದಾಂಜಲಿ ಸಲ್ಲಿ ಸುವ ಮೂಲಕ ದೇಶದಾದ್ಯಂತ ಹಮ್ಮಿ ಕೊಂಡಿದ್ದ ಮೌನ ಪ್ರತಿಭಟನೆ ಅಂಗವಾಗಿ ಶುಕ್ರವಾರ 3.30ಕ್ಕೆ ಸರಿಯಾಗಿ ಘಟನೆ ಯನ್ನು ಖಂಡಿಸಿ, ಹುತಾತ್ಮ ಯೋಧರಿಗೆ ನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಪ್ರೇಮಲತಾ ಕೃಷ್ಣಸ್ವಾಮಿ ಉಗ್ರರ ಹೇಯ ಕೃತ್ಯವನ್ನು ಖಂಡಿಸಿದರು. ಜೆಎಸ್‍ಬಿ ಪ್ರತಿಷ್ಠಾನದ ಅಧ್ಯಕ್ಷ ಶಶಿ ಕುಮಾರ್ ಮಾತನಾಡಿ, ಸುಮಾರು ಎರಡು ದಶಕಗಳ ನಂತರ ನಮ್ಮ ದೇಶ ಕಂಡಂತ ಭೀಕರ ಭಯೋತ್ಪದಕರ ಕೃತ್ಯ ಇದಾಗಿದೆ. ಇದರಲ್ಲಿ ಮಡಿದ ನಮ್ಮ ವೀರ ಸೈನಿಕರು ದೇಶದ ನಾನಾ ಭಾಗಗಳಿಂದ ದೇಶ ಸೇವೆ ಮಾಡಲು ಬಂದು ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಈ ಘಟನೆಯಿಂದ ಇಡಿ ದೇಶವೆ ಬೆಚ್ಚಿ ಬೀಳುವಂತಾಗಿದೆ ಎಂದರು. ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ನಟರಾಜು. ವಿವೇಕಾನಂದ ಐಟಿಐ ಸಂಸ್ಥೆಯ ಪ್ರಾಂಶುಪಾಲ ರಾಜೇಶ್. ಮಾನಸ ಶಿಕ್ಷಣ ಸಂಸ್ಥೆಯ ಶಂಕರ್, ಮಾನಸಬಾಬು, ನಿಶಾಂತ್, ತೇರಂಬಳ್ಳಿ ರಾಜು ಇದ್ದರು.

ಚಾಮರಾಜನಗರ ವರದಿ: ಭಾರತ ಸೇವಾ ದಳ ತಾಲೂಕು ಸಮಿತಿ ವತಿಯಿಂದ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿ ಯಲ್ಲಿ ಹುತಾತ್ಮರಾದ ಸಿಆರ್‍ಪಿಎಫ್ ಯೋಧ ರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.

ನಗರದ ಸರ್ಕಾರಿ ಪೇಟೆ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಭಾರತ ಸೇವಾದಳ ತಾಲೂಕು ಸಮಿತಿ, ರಂಗ ವಾಹಿನಿ, ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ ಹಾಗೂ ಶಾಲಾ ಮಕ್ಕಳು ಮೊಂಬತ್ತಿ ಹಚ್ಚಿ ಶ್ರದ್ದಾಂಜಲಿ ಕಾರ್ಯಕ್ರಮ ಹಮ್ಮಿ ಕೊಂಡು ಹುತಾತ್ಮರಾದ 44 ವೀರ ಯೋಧ ರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಭಾರತಸೇವಾದಳ ತಾಲೂಕು ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ, ಜಮ್ಮುಕಾಶ್ಮೀರದ ಪುಲ್ವಾಮಾ ದಲ್ಲಿ ಉಗ್ರರು ಸಿಆರ್‍ಪಿಎಫ್ ವಾಹನಗಳ ಮೇಲೆ ಗುಂಡಿನ ದಾಳಿ ನಡೆಸಿರುವುದು ಖಂಡನೀಯ. ಉಗ್ರರ ಅಟ್ಟಹಾಸವನ್ನು ಮಟ್ಟ ಹಾಕುವ ಕೆಲಸವನ್ನು ದೇಶದ ಪ್ರಧಾನಿ ಮಾಡಬೇಕು. ಹುತಾತ್ಮ ಯೋಧರ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡ ಬೇಕು. ಗಡಿಕಾಯುವ ಯೋಧರಿಗೆ ಕೇಂದ್ರ ಸರ್ಕಾರ ಗಮನ ಹರಿಸಿ ಜೀವರಕ್ಷ ಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಒತ್ತಾಯಿಸಿದರು. ಶ್ರದ್ದಾಂಜಲಿ ಸಭೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಯದುಗಿರಿ ಯಮ್ಮ, ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯ ಗೋವಿಂದರಾಜು, ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಗುರುರಾಜು ಯರಗನಹಳ್ಳಿ, ಮೊಬಿಲಿಟಿ ಇಂಡಿಯಾ ರಾಜಣ್ಣ, ಶಿಕ್ಷಕರಾದ ಮಲ್ಲ ಶೆಟ್ಟಿ, ಭಾರತಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Translate »