ಲಾರಿ ಡಿಕ್ಕಿ; ಕಾರು ಚಾಲಕ ಸಾವು
ಕೊಡಗು

ಲಾರಿ ಡಿಕ್ಕಿ; ಕಾರು ಚಾಲಕ ಸಾವು

February 15, 2019

ಮಡಿಕೇರಿ: ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿ ಣಾಮ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಕಾರಗುಂದ ಗ್ರಾಮದಲ್ಲಿ ನಡೆದಿದೆ.

ಮೂಲತಃ ಪೊನ್ನಂಪೇಟೆ ಸಮೀ ಪದ ಹಳ್ಳಿಗಟ್ಟು ನಿವಾಸಿ ಅಚ್ಚೇ ಯಂಡ ಅರುಣ(44) ಮೃತ ಚಾಲಕ. ಕಾರಿನಲ್ಲಿದ್ದ ಇತರ 4 ಮಂದಿಯ ಪೈಕಿ 3 ಮಂದಿಗೆ ಗಾಯಗಳಾ ಗಿವೆ. ಗಾಯಾಳುಗಳನ್ನು ಮಡಿ ಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸ ಲಾಗಿದೆ. ಘಟನೆ ಕುರಿತು ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕ ರಣ ದಾಖಲಾಗಿದೆ.

ಘಟನೆ ವಿವರ: ಕಾರು ಚಲಾಯಿ ಸುತ್ತಿದ್ದ ಅರುಣ ಚೇರಂಬಾಣೆಯ ತಮ್ಮ ಮಾವನ ತೋಟದಿಂದ ಕಾರ್ಮಿಕರನ್ನು ಕಾರಿನಲ್ಲಿ ಕರೆದುಕೊಂಡು ತಮ್ಮ ಊರಿನ ಕಡೆ ಹೊರಟಿದ್ದರು. ಈ ವೇಳೆ ಮಡಿಕೇರಿ ಕಡೆಯಿಂದ ಭಾಗಮಂಡಲದ ಜೇನು ಸೊಸೈಟಿಗೆ ಜೇನು ತರುತ್ತಿದ್ದ ಲಾರಿ ಕಾರುಗುಂದ ಸಮೀಪದ ಅಯ್ಯಪ್ಪ ದೇವಸ್ಥಾನದ ತಿರುವಿನಲ್ಲಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು ಕಾರು ಚಲಾಯಿಸುತ್ತಿದ್ದ ಅರುಣ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಕಾರ್ಮಿಕರಾದ ಮಂಜು, ಕವಿತ ಮತ್ತು ಮಮತ ಎಂಬುವರಿಗೆ ಗಾಯಗಳಾಗಿದ್ದು, ಸಾರ್ವಜನಿಕರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರಿನಲ್ಲಿದ್ದ ರಮೇಶ ಎಂಬುವರು ಯಾವುದೇ ಗಾಯಾಗಳಾಗದೇ ಅಪಾಯದಿಂದ ಪಾರಾಗಿದ್ದಾರೆ.

ಮಾಹಿತಿ ಅರಿತ ನಾಪೋಕ್ಲು ಪೊಲೀಸರು ಸ್ಥಳಕ್ಕೆ ತೆರಳಿ ಮಹಜರು ನಡೆಸಿ ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »