Tag: Kushalanagar

ಕಾರಿಗೆ ಬೈಕ್ ಡಿಕ್ಕಿ: ಯುವಕನಿಗೆ ಗಂಭೀರ ಗಾಯ
ಕೊಡಗು

ಕಾರಿಗೆ ಬೈಕ್ ಡಿಕ್ಕಿ: ಯುವಕನಿಗೆ ಗಂಭೀರ ಗಾಯ

March 14, 2019

ಕುಶಾಲನಗರ: ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡುತ್ತ ಸಂಚಾರಿ ಪೆÇಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಯುವಕನೋರ್ವ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಪಟ್ಟಣದಲ್ಲಿ ನಡೆದಿದೆ. ಪಿರಿಯಾಪಟ್ಟಣ ತಾಲೂಕಿನ ಆವರ್ತಿ ಗ್ರಾಮದ ನಿವಾಸಿ ಸೂರ್ಯ ಗಾಯ ಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೊಪ್ಪ ಕಡೆಯಿಂದ ತನ್ನ ಬೈಕ್‍ನಲ್ಲಿ ಕುಶಾಲನಗರಕ್ಕೆ ಬರುತ್ತಿದ್ದ ಸೂರ್ಯ ಟೋಲ್ ಗೇಟ್ ಬಳಿ ಇಂಟರ್ ಸೆಫ್ಟರ್ ಸಂಚಾರಿ ವಾಹನ ಹಾಗೂ ಪೆÇಲೀಸರನ್ನು ನೋಡಿ ಅವರಿಂದ ತಪ್ಪಿಸಿಕೊಳ್ಳಲು ವೇಗವಾಗಿ ಬೈಕ್ ಚಾಲನೆ…

‘ಕಾವೇರಿ’ ತಾಲೂಕು ಕೇಂದ್ರಕ್ಕೆ ರಾಜ್ಯ ಸರ್ಕಾರ ಅಸ್ತು
ಕೊಡಗು

‘ಕಾವೇರಿ’ ತಾಲೂಕು ಕೇಂದ್ರಕ್ಕೆ ರಾಜ್ಯ ಸರ್ಕಾರ ಅಸ್ತು

February 27, 2019

ಕುಶಾಲನಗರ: ಎರಡು ದಶಕದ ಕನಸಾದ ‘ಕಾವೇರಿ’ ತಾಲೂಕು ಹೋರಾಟಕ್ಕೆ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಸಿರು ನಿಶಾನೆ ತೋರಿಸಿದ್ದು, ಫೆ.28 ರಂದು ಕುಶಾಲನಗರಕ್ಕೆ ಬಂದು ಅಧಿಕೃತವಾಗಿ ಘೋಷಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ಹೋರಾಟ ಕೇಂದ್ರೀಯ ಸಮಿತಿ ಪದಾಧಿಕಾರಿ ಗಳು ಹಾಗೂ ಸಾರ್ವಜನಿಕರು ಸಂಭ್ರಮಾಚರಿಸಿದರು. ಕುಶಾಲನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಮಂಗಳವಾರ ಸಂಜೆ ಸಮಾವೇಶಗೊಂಡ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ತಿನಿಸಿ ವಿಜಯೋತ್ಸವ ಆಚರಿಸಿದರು. ತಾಲೂಕು ಹೋರಾಟದ ಕನಸನ್ನು ನನಸಾಗಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ…

ಹಾರಂಗಿ ಜಲಾನಯನದಲ್ಲಿ ತುಂಬಿರುವ ಹೂಳು: ಪ್ರಮಾಣ ಪತ್ತೆಗೆ ಭರದಿಂದ ಸಾಗಿದೆ ಸರ್ವೇ ಕಾರ್ಯ
ಕೊಡಗು

ಹಾರಂಗಿ ಜಲಾನಯನದಲ್ಲಿ ತುಂಬಿರುವ ಹೂಳು: ಪ್ರಮಾಣ ಪತ್ತೆಗೆ ಭರದಿಂದ ಸಾಗಿದೆ ಸರ್ವೇ ಕಾರ್ಯ

February 15, 2019

ಕುಶಾಲನಗರ: ಕೊಡಗು ಜಿಲ್ಲೆಯಲ್ಲಿ ಕಳೆದ ಆಗಸ್ಟ್ ನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಹಾರಂಗಿ ಜಲಾನಯನ ಪ್ರದೇಶದಲ್ಲಿ ಅಪಾರ ಪ್ರಮಾಣ ದಲ್ಲಿ ಭೂಕುಸಿತ ಸಂಭವಿಸಿದ್ದು, ಬೆಟ್ಟಗುಡ್ಡಗಳ ಮಣ್ಣು ನದಿ ನೀರಿನೊಂದಿಗೆ ಮಿಶ್ರಣಗೊಂಡು ಹಾರಂಗಿ ಜಲಾ ಶಯದ ಒಡಲು ಸೇರುವ ಹಿನ್ನೆಲೆಯಲ್ಲಿ ಎಷ್ಟು ಪ್ರಮಾ ಣದಲ್ಲಿ ಹೂಳು ತುಂಬಿದೆ ಎಂಬುದನ್ನು ಪತ್ತೆ ಹಚ್ಚಲು ಇದೀಗ ಹಾರಂಗಿ ಜಲಾನಯನ ಪ್ರದೇಶದಲ್ಲಿ ಸರ್ವೇ ಕಾರ್ಯ ಭರದಿಂದ ನಡೆಯುತ್ತಿದೆ. ರಾಜ್ಯ ಸಮ್ಮಿಶ್ರ ಸರ್ಕಾರ ಹಾರಂಗಿ ಜಲಾನಯನ ಪ್ರದೇಶ ಹಾಗೂ ನದಿ ಪಾತ್ರಗಳ ಪುನಶ್ಚೇತನ ಕಾಮ…

ಕೂಡಿಗೆ ಬಳಿ ಚಿರತೆ ದಾಳಿಗೆ ಆಕಳು ಬಲಿ
ಕೊಡಗು

ಕೂಡಿಗೆ ಬಳಿ ಚಿರತೆ ದಾಳಿಗೆ ಆಕಳು ಬಲಿ

January 12, 2019

ಕುಶಾಲನಗರ: ಸಮೀಪದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಕಾಡಂಚಿನ ಗ್ರಾಮದಲ್ಲಿ ಬುಧವಾರ ಸಂಜೆ ಚಿರತೆ ದಾಳಿಗೆ ಆಕಳೊಂದು ಮೃತಪಟ್ಟಿ ರುವ ಘಟನೆ ನಡೆದಿದೆ. ಹುದುಗೂರು ಗ್ರಾಮದ ನಿವಾಸಿ ರೈತ ಮಹಿಳೆ ಆಶೀಯಾ ಎಂಬುವರಿಗೆ ಸೇರಿದ 3 ವರ್ಷದ ಆಕಳು ಬಲಿಯಾಗಿದೆ. ಸೋಮ ವಾರಪೇಟೆ ವಿಭಾಗದ ಹುದುಗೂರು ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಕಾಡಂಚಿನಲ್ಲಿರುವ ಜಮೀನಿನಲ್ಲಿ ಓಡಾ ಡುವ ಈ ಚಿರತೆ ಹೊಲಗದ್ದೆಗಳಲ್ಲಿ ಹುಲ್ಲು ಮೇಯುತ್ತಿರುವ ಹಸು, ಆಡು-ಕುರಿಗಳ ಮೇಲೆ…

ಕುಶಾಲನಗರ ಗಣಪತಿ ದೇವಸ್ಥಾನದ ಅಂಗಡಿ ಮಳಿಗೆ ತೆರವು ಕಾರ್ಯಾಚರಣೆ
ಕೊಡಗು

ಕುಶಾಲನಗರ ಗಣಪತಿ ದೇವಸ್ಥಾನದ ಅಂಗಡಿ ಮಳಿಗೆ ತೆರವು ಕಾರ್ಯಾಚರಣೆ

December 20, 2018

ಕುಶಾಲನಗರ: ಪಟ್ಟಣದ ಹೃದಯ ಭಾಗದಲ್ಲಿರುವ ಗಣಪತಿ ದೇವಾ ಲಯಕ್ಕೆ ಸೇರಿದ 11 ವಾಣಿಜ್ಯ ಮಳಿಗೆಗ ಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಗಣಪತಿ ದೇವಾಲಯ ಸಮಿತಿ ಆಡಳಿತ ಮಂಡಳಿ ಬುಧವಾರ ಕಾರ್ಯಾಚರಣೆ ನಡೆಸಿ ಬಾಡಿಗೆದಾರರಿಂದ ಖಾಲಿ ಮಾಡಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು. ದೇವಾಲಯ ಆಡಳಿತ ಸಮಿತಿ ಅಧ್ಯಕ್ಷ ವಿ. ಎನ್.ವಸಂತಕುಮಾರ್ ನೇತೃತ್ವದಲ್ಲಿ ನಡೆದ ತೆರವು ಕಾರ್ಯಾಚರಣೆಯಲ್ಲಿ 11 ಮಳಿಗೆಗಳ ಪೈಕಿ ಮೂರು ಮಳಿಗೆ ತೆರವು ಗೊಳಿಸುವ ಮೂಲಕ ಮಳಿಗೆಗಳಿಗೆ ಬೀಗ ಹಾಕಲಾಯಿತು. ಉಳಿದ ಎಂಟು ಮಂದಿ ಬಾಡಿಗೆದಾರರು ಮಳಿಗೆಗಳಿಗೆ…

ಆಟೋರಿಕ್ಷಾ-ಬೈಕ್ ಮುಖಾಮುಖಿ ಡಿಕ್ಕಿ: ಓರ್ವ ಸಾವು
ಮೈಸೂರು

ಆಟೋರಿಕ್ಷಾ-ಬೈಕ್ ಮುಖಾಮುಖಿ ಡಿಕ್ಕಿ: ಓರ್ವ ಸಾವು

December 1, 2018

ಕುಶಾಲನಗರ: ಸಂಬಂಧಿಕರ ಅಂತ್ಯಸಂಸ್ಕಾರಕ್ಕೆಂದು ಬೈಕ್‍ನಲ್ಲಿ ಹೋಗುತ್ತಿದ್ದ ವೇಳೆ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಗುರುವಾರ ರಾತ್ರಿ ಆನೆಕಾಡು ಬಳಿ ನಡೆದಿದೆ. ಮಡಿಕೇರಿ ನಗರಸಭೆಯ ಟ್ರ್ಯಾಕ್ಟರ್ ಚಾಲಕ ಮೂಲತಃ ಕೇರಳಾಪುರ ಸಮೀಪದ ಹೊನ್ನೇನಳ್ಳಿಯ ನಿವಾಸಿಯಾಗಿದ್ದ ಚಂದ್ರು (50) ಸಾವ ನ್ನಪ್ಪಿರುವ ವ್ಯಕ್ತಿ. ಬೈಕ್ ಮತ್ತು ಆಟೋರಿಕ್ಷಾ ನಡುವೆ ನಡೆದ ಅಪ ಘಾತದಲ್ಲಿ ಕುಶಾಲನಗರ ಬಳಿಯ ಓಲ್ಡ್ ಹೌಸಿಂಗ್ ಬೋರ್ಡ್ ಸಮೀಪದ ನಿವಾಸಿ ಅಸ್ಕರ್ (27), ಆತನ ಪತ್ನಿ ಮುನ್ಸೀರಾ…

ಕಾಡಾನೆ ಹಾವಳಿ: ಕೃಷಿ ಫಸಲು ನಾಶ
ಕೊಡಗು

ಕಾಡಾನೆ ಹಾವಳಿ: ಕೃಷಿ ಫಸಲು ನಾಶ

November 30, 2018

ಕುಶಾಲನಗರ: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಪಟ್ಟಣ ಗ್ರಾಮ ದಲ್ಲಿ  ಭತ್ತದ ಬೆಳೆಯನ್ನು ಕಾಡಾನೆಗಳು ತುಳಿದು ನಾಶಪಡಿಸಿವೆ. ಗ್ರಾಮದ ನಿಂಗರಾಜು, ಎಂ.ಬಿ.ಬಸವರಾಜು ಸೇರಿ ದಂತೆ ಇನ್ನಿತರ ರೈತರಿಗೆ ಸೇರಿದ ಭತ್ತದ ಗದ್ದೆಗಳು ಕಾಡಾನೆಗಳ ಪಾಲಾ ಗಿವೆ. ಇದರಿಂದಾಗಿ ರೈತ ರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಕಾಡಾನೆಗಳಿಂದಾಗಿರುವ ನಷ್ಟವನ್ನು ಭರಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. ರಾತ್ರಿ ಕಾವಲು ಕಾಯುವ ನಮ್ಮನ್ನೂ ಕಾಡಾನೆಗಳು ಓಡಿಸಿಕೊಂಡು ಬರುತ್ತಿವೆ. ಜೀವ ಹಾನಿಯಾಗುವ ಮುನ್ನ ಅರಣ್ಯ ಇಲಾಖೆ…

ಕುಶಾಲನಗರದಲ್ಲಿ ಐತಿಹಾಸಿಕ ಶ್ರೀಗಣಪತಿ ರಥೋತ್ಸವ
ಕೊಡಗು

ಕುಶಾಲನಗರದಲ್ಲಿ ಐತಿಹಾಸಿಕ ಶ್ರೀಗಣಪತಿ ರಥೋತ್ಸವ

November 27, 2018

ಕುಶಾಲನಗರ:  ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿರುವ ಐತಿಹಾಸಿಕ ಶ್ರೀ ಗಣಪತಿ ದೇವಾಲಯದ ವಾರ್ಷಿಕ ರಥೋತ್ಸವವು ಸೋಮವಾರ ಅತ್ಯಂತ ವಿಜೃಂಭಣೆಯಿಂದ ಜರುಗಿತು. ವಾರ್ಷಿಕ ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಅಭಿಷೇಕ, ಅರ್ಚನೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಶಾಸ್ತ್ರೋಕ್ತ ವಾಗಿ ಬಸವಾಪಟ್ಟಣದ ಸುಬ್ಬುಕೃಷ್ಣ ದೀಕ್ಷಿತ್ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ನಾಗೇಂದ್ರಬಾಬು ಹಾಗೂ ವಿವಿಧ ದೇವಸ್ಥಾನ ಗಳ ಅರ್ಚಕರ ನೇತೃತ್ವದಲ್ಲಿ ನೆರವೇರಿದವು. ಈ ಐತಿಹಾಸಿಕ ಗಣಪತಿ ರಥೋತ್ಸವಕ್ಕೆ ಮೈಸೂರು ಮತ್ತು ಹಾಸನ ಜಿಲ್ಲೆಗಳ ಗಡಿ ಭಾಗದ ಜನರು…

ಸಂತ್ರಸ್ತರ ನಿಧಿಗೆ ಆರ್ಥಿಕ ನೆರವು
ಕೊಡಗು

ಸಂತ್ರಸ್ತರ ನಿಧಿಗೆ ಆರ್ಥಿಕ ನೆರವು

November 14, 2018

ಕುಶಾಲನಗರ:  ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಕುಶಾಲನಗರ ಹೋಬಳಿ ಘಟಕದ ವತಿಯಿಂದ 40 ಸಾವಿರ ರೂಪಾಯಿಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದೆ. ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಆಗಿರುವ ನಷ್ಟದ ಹಿನ್ನೆಲೆಯಲ್ಲಿ ಸಂಘದ ಪದಾಧಿಕಾರಿಗಳು ಮಂಗಳವಾರ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಈ ಮೊತ್ತದ ಚೆಕ್ ಅನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದರು. ಈ ವೇಳೆ ಸಂಘದ ಅಧ್ಯಕ್ಷ ಡಿ.ಕೆ. ಬೊಮ್ಮಯ್ಯ, ಉಪಾಧ್ಯಕ್ಷ ಕೆ.ಇ. ಉತ್ತಪ್ಪ, ಖಜಾಂಚಿ ಸಿ.ಸಿ. ರಾಘವಯ್ಯ ಹಾಗೂ ನಿರ್ದೇಶಕ ಕೆ.ಎಂ. ಗಿರೀಶ್…

ಕುಶಾಲನಗರದಲ್ಲಿ ಶ್ರದ್ಧಾಭಕ್ತಿಯಿಂದ ನಡೆದ ಪುತ್ತರಿ ವೆಳ್ಳಾಟಂ
ಕೊಡಗು

ಕುಶಾಲನಗರದಲ್ಲಿ ಶ್ರದ್ಧಾಭಕ್ತಿಯಿಂದ ನಡೆದ ಪುತ್ತರಿ ವೆಳ್ಳಾಟಂ

November 13, 2018

ಕುಶಾಲನಗರ: ಪಟ್ಟಣದ ಬೈಚನಹಳ್ಳಿ ಯೋಗಾನಂದ ಬಡಾವಣೆಯ ಶ್ರೀಮುತ್ತಪ್ಪನ್ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಪುತ್ತರಿ ವೆಳ್ಳಾಟಂ ವಿಜೃಂಭಣೆಯೊಂದಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು. ಕೇರಳದ ಸನಲ್ ಮಡಯನ್ ಅವರಿಂದ ಮಲೈಇರಕ್ಕಲ್ ನಿಂದ ಆರಂಭಗೊಂಡ ಪೂಜಾ ಕಾರ್ಯಕ್ರಮ ಶ್ರೀಮುತ್ತಪ್ಪನ್ ದೇವರ ಆಗಮನದವರೆಗೂ ನಡೆಯಿತು. ಪಟ್ಟಣ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ನೂರಾರು ಭಕ್ತರು ಮುತ್ತಪ್ಪನ ದರ್ಶನ, ಆಶೀರ್ವಾದ ಹಾಗೂ ಪ್ರಸಾದ ಪಡೆದು ಪುನೀತರಾದರು. ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ವರದ ಹಾಗೂ ಕಾರ್ಯದರ್ಶಿ ಕೆ.ಕೆ.ದಿನೇಶ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಇದೇ ಸಂದರ್ಭ ನೂತನವಾಗಿ ಪಪಂಗೆ…

1 2 3 7
Translate »