ಕುಶಾಲನಗರ ಗಣಪತಿ ದೇವಸ್ಥಾನದ ಅಂಗಡಿ ಮಳಿಗೆ ತೆರವು ಕಾರ್ಯಾಚರಣೆ
ಕೊಡಗು

ಕುಶಾಲನಗರ ಗಣಪತಿ ದೇವಸ್ಥಾನದ ಅಂಗಡಿ ಮಳಿಗೆ ತೆರವು ಕಾರ್ಯಾಚರಣೆ

December 20, 2018

ಕುಶಾಲನಗರ: ಪಟ್ಟಣದ ಹೃದಯ ಭಾಗದಲ್ಲಿರುವ ಗಣಪತಿ ದೇವಾ ಲಯಕ್ಕೆ ಸೇರಿದ 11 ವಾಣಿಜ್ಯ ಮಳಿಗೆಗ ಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಗಣಪತಿ ದೇವಾಲಯ ಸಮಿತಿ ಆಡಳಿತ ಮಂಡಳಿ ಬುಧವಾರ ಕಾರ್ಯಾಚರಣೆ ನಡೆಸಿ ಬಾಡಿಗೆದಾರರಿಂದ ಖಾಲಿ ಮಾಡಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು.

ದೇವಾಲಯ ಆಡಳಿತ ಸಮಿತಿ ಅಧ್ಯಕ್ಷ ವಿ. ಎನ್.ವಸಂತಕುಮಾರ್ ನೇತೃತ್ವದಲ್ಲಿ ನಡೆದ ತೆರವು ಕಾರ್ಯಾಚರಣೆಯಲ್ಲಿ 11 ಮಳಿಗೆಗಳ ಪೈಕಿ ಮೂರು ಮಳಿಗೆ ತೆರವು ಗೊಳಿಸುವ ಮೂಲಕ ಮಳಿಗೆಗಳಿಗೆ ಬೀಗ ಹಾಕಲಾಯಿತು. ಉಳಿದ ಎಂಟು ಮಂದಿ ಬಾಡಿಗೆದಾರರು ಮಳಿಗೆಗಳಿಗೆ ಬೀಗ ಜಡಿದು ಪರಾರಿಯಾಗಿದ್ದಾರೆ.

ಬೀಗ ಜಡಿದ ಮಳಿಗೆಗಳ ತೆರವುಗೊಳಿ ಸುವ ಸಂಬಂಧ ನ್ಯಾಯಾಲಯದಲ್ಲಿ ಅಧಿ ಕಾರಿಗಳಿಂದ ಕಾನೂನು ಮಾಹಿತಿ ಪಡೆದು ಪೆÇಲೀಸರ ಸಮ್ಮುಖದಲ್ಲಿ ತೆರವುಗೊಳಿಸ ಲಾಗುವುದು ಎಂದು ಸಮಿತಿ ಅಧ್ಯಕ್ಷ ವಿ.ಎನ್. ವಸಂತ ಕುಮಾರ್ ತಿಳಿಸಿದರು.

1993ರಲ್ಲಿ ದೇವಾಲಯ ಸಮಿತಿ ವತಿ ಯಿಂದ ದೇವಾಲಯದ ನಿರ್ವಹಣೆಗೆ ಮತ್ತು ಅರ್ಚಕರಿಗೆ ಸಂಬಳ ನೀಡುವ ಸಂಬಂಧ ಆರ್ಥಿಕ ಸುಸ್ಥಿತಿಯನ್ನು ಸುಧಾರಿಸಿಕೊ ಳ್ಳಲು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾ ಗಿದೆ. ಆರಂಭದಲ್ಲಿ ಮಳಿಗೆಗೆ ತಲಾ 350 ರೂ. ಗಳ ಬಾಡಿಗೆಯನ್ನು ನಿಗದಿಪಡಿಸಲಾ ಗಿತ್ತು.

ಕ್ರಮೇಣ ವರ್ಷಗಳು ಉರುಳಿದಂತೆ ಬಾಡಿಗೆದಾರರು ಆಡಳಿತ ಮಂಡಳಿ ಅವ ರೊಂದಿಗೆ ಬಾಡಿಗೆ ದರವನ್ನು ನವೀಕರಿಸಿ ಕೊಳ್ಳುತ್ತಿದ್ದರು. ಬಳಿಕ ಕೆಲವು ಬಾಡಿಗೆದಾ ರರು ತಾವು ದೇವಾಲಯ ಸಮಿತಿ ವತಿ ಯಿಂದ ಕಡಿಮೆ ಹಣಕ್ಕೆ ಪಡೆದ ಮಳಿಗೆ ಗಳನ್ನು ಹತ್ತರಿಂದ ಇಪ್ಪತ್ತು ಪಟ್ಟು ದರವನ್ನು ಹೆಚ್ಚಿಸಿ ಮನಸೋ ಇಚ್ಛೆ ಬೇರೆಯವರಿಗೆ ಬಾಡಿಗೆ ನೀಡಿದ್ದರು. ಗಣಪತಿ ದೇವಾಲ ಯಕ್ಕೆ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚು ತ್ತಿರುವ ಕಾರಣ ಧಾರ್ಮಿಕ ಚಟುವಟಿಕೆ ಗಳಿಗೆ ಪೂರಕವಾಗಿ ಸಭಾಂಗಣವನ್ನು ನಿರ್ಮಿಸಿ ವಿಸ್ತಾರ ಗೊಳಿಸುವಂತೆ ಕಳೆದ ಐದು ವರ್ಷಗಳ ಹಿಂದೆ ದೇವಾಲಯ ಸಮಿತಿ ಆಡಳಿತ ಮಂಡಳಿಯಲ್ಲಿ ತೀರ್ಮಾ ನಿಸಿ ಬಾಡಿಗೆದಾರರಿಗೆ ಮಳಿಗೆಗಳನ್ನು ಖಾಲಿ ಮಾಡಿ ಸಹಕರಿಸುವಂತೆ ಕೋರಿ ದ್ದರು. ಆದರೆ ಮಳಿಗೆಗಳನ್ನು ದುಪ್ಪಟ್ಟು ಬಾಡಿಗೆಗೆ ಪರಭಾರೆ ಮಾಡಿ ಬಾಡಿಗೆಯ ರುಚಿಯನ್ನು ಅರಿತ ಅಧಿಕೃತ ಬಾಡಿಗೆದಾ ರರು ದೇವಸ್ಥಾನದ ಆಡಳಿತ ಮಂಡ ಳಿಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿ ದ್ದರು. ದೇವಾಲಯ ಆಡಳಿತ ಸಮಿತಿ ಕೂಡ ಬಾಡಿಗೆದಾರರನ್ನು ತೆರವುಗೊಳಿ ಸಬೇಕೆಂದು ಕಾನೂನು ಹೋರಾಟ ನಡೆ ಸಿತ್ತು. ಕಾನೂನು ಹೋರಾಟದಲ್ಲಿ ದೇವಾ ಲಯ ಆಡಳಿತ ಮಂಡಳಿಗೆ ಜಯ ದೊರ ಕಿದ ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಮಳಿಗೆಗಳನ್ನು ತೆರವುಗೊಳಿಸಲು ಬುಧ ವಾರ ಕಾರ್ಯಾಚರಣೆ ನಡೆಸಿದ್ದು 11 ಮಳಿಗೆಗಳ ನಾಮಫಲಕಗಳನ್ನು ತೆಗೆದು, ಮಳಿಗೆಗಳಿಗೆ ನೀಡಿದ್ದ ವಿದ್ಯುತ್ ಸಂಪರ್ಕ ವನ್ನು ಕಡಿತಗೊಳಿಸಲಾಯಿತು.
ಕಾರ್ಯಾಚರಣೆಯಲ್ಲಿ ದೇವಾಲಯ ಸಮಿತಿಯ ಪದಾಧಿಕಾರಿಗಳಾದ ವಿ.ಪಿ. ಶಶಿಧರ್, ಪುಂಡರೀಕಾಕ್ಷ, ರಾಜೀವ್, ಎಸ್.ಕೆ. ಶ್ರೀನಿವಾಸ ರಾವ್, ಅಪ್ಪಣ್ಣ, ಎಂ.ವಿ. ನಾರಾ ಯಣ ಮೊದಲಾದವರಿದ್ದರು.

Translate »