ಮಡಿಕೇರಿ ನೂತನ ಖಾಸಗಿ ಬಸ್ ನಿಲ್ದಾಣಕ್ಕೆ ತೆರಳಲು ರಾಜಾಸೀಟ್‍ನಿಂದ ರಸ್ತೆ ಅಗಲೀಕರಣಕ್ಕೆ ಶೀಘ್ರ ಚಾಲನೆ
ಕೊಡಗು

ಮಡಿಕೇರಿ ನೂತನ ಖಾಸಗಿ ಬಸ್ ನಿಲ್ದಾಣಕ್ಕೆ ತೆರಳಲು ರಾಜಾಸೀಟ್‍ನಿಂದ ರಸ್ತೆ ಅಗಲೀಕರಣಕ್ಕೆ ಶೀಘ್ರ ಚಾಲನೆ

December 20, 2018

ಮಡಿಕೇರಿ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾಹಿತಿ
ಮಡಿಕೇರಿ:  ನೂತನ ಖಾಸಗಿ ಬಸ್ ನಿಲ್ದಾಣಕ್ಕೆ ಬಸ್ ಸಂಪರ್ಕ ಕಲ್ಪಿ ಸಲು ಸುಗಮ ಸಂಚಾರ ವ್ಯವಸ್ಥೆಗಾಗಿ ರಾಜಾಸೀಟು ಬಳಿಯಿಂದ ಬಸ್ ನಿಲ್ದಾಣ ದವರೆಗಿನ ರಸ್ತೆ ಅಗಲೀಕರಣ ಕಾರ್ಯಕ್ಕೆ ಶೀಘ್ರವೇ ಚಾಲನೆ ನೀಡಲು ಮಡಿಕೇರಿ ನಗರಸಭೆ ನಿರ್ಧರಿಸಿದೆ.

ಈಗಾಗಲೇ ರಸ್ತೆ ಅಗಲೀಕರಣ ಸರ್ವೆ ಕಾರ್ಯ ಮುಗಿಸಿರುವ ಅಧಿಕಾರಿಗಳು ಕಾಮಗಾರಿಯನ್ನು 3-4 ದಿನಗಳಲ್ಲಿ ಆರಂ ಭಿಸಲು ನಿರ್ಧರಿಸಿದ್ದಾರೆ. ರಸ್ತೆಯ ಮಧ್ಯ ಭಾಗದಿಂದ 7.5 ಮೀಟರ್‍ನಂತೆ ಒಟ್ಟು 15 ಮೀ. ಅಗಲದ ರಸ್ತೆ ನಿರ್ಮಾಣವಾಗ ಬೇಕಿದೆ. ಕುಂದುರುಮೊಟ್ಟೆ ದೇವಾಲಯದ ಬಳಿಯಿಂದ ಎಲ್‍ಐಸಿ ಸೇತುವೆ ವರೆಗಿನ ಕಟ್ಟಡಗಳ ಮಾಲೀಕರು ರಸ್ತೆ ವಿಸ್ತರಣೆಗೆ ಸಹಕರಿಸಬೇಕೆಂದು ಮನವಿ ಮಾಡಿರುವ ನಗರಸಭೆ, ಈಗಾಗಲೇ ನೋಟಿಸ್‍ನ್ನು ಕೂಡ ನೀಡಿದೆ. ರಸ್ತೆ ಅಗಲೀಕರಣ ಮತ್ತು ಡಾಂಬ ರೀಕರಣಕ್ಕೆ 85.62ಲಕ್ಷ ರೂ. ಖರ್ಚು ಮಾಡ ಲಾಗುತ್ತಿದೆ ಎಂದು ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ತಿಳಿಸಿದ್ದಾರೆ.

4.80 ಕೋಟಿ ರೂ. ವೆಚ್ಚದಲ್ಲಿ ನಿರ್ಮಾ ಣಗೊಂಡಿರುವ ಖಾಸಗಿ ಬಸ್ ನಿಲ್ದಾ ಣವನ್ನು ಸದುಪಯೋಗಪಡಿಸಿಕೊಳ್ಳುವ ಅಗತ್ಯವಿದ್ದು, ಬಸ್ ಮಾಲೀಕರು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಅಧ್ಯಕ್ಷರು ಅಭಿಪ್ರಾಯಟ್ಟಿದ್ದಾರೆ.

ಮತ್ತೆ 2 ಕೋಟಿ ರೂ.ವೆಚ್ಚ: ನೂತನ ಖಾಸಗಿ ಬಸ್ ನಿಲ್ದಾಣದಲ್ಲಿ ಸಮರ್ಪ ಕವಾಗಿ ಮೇಲ್ಚಾವಣಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಪ್ರಯಾಣಿಕರು ಬಿಸಿಲು ಮಳೆಯಲ್ಲಿ ಬಸ್‍ಗಾಗಿ ಕಾಯಬೇಕಾದ ದುಸ್ಥಿತಿ ಇಲ್ಲಿದೆ. ಈ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವÀ ಸಾ.ರಾ.ಮಹೇಶ್ ಅವರ ಗಮನ ಸೆಳೆಯಲಾಗಿದೆ. ಪ್ರಯಾ ಣಿಕರ ಅನುಕೂಲಕ್ಕಾಗಿ ಸುಸಜ್ಜಿತ ಮೇಲ್ಚಾ ವಣಿ ಅಳವಡಿಸಲು 2 ಕೋಟಿ ರೂ. ಬಿಡು ಗಡೆ ಮಾಡಿಸುವುದಾಗಿ ಉಸ್ತುವಾರಿ ಸಚಿ ವರು ಭರವಸೆ ನೀಡಿದ್ದಾರೆ ಎಂದು ಕಾವೇರಮ್ಮ ಸೋಮಣ್ಣ ಇದೇ ಸಂದರ್ಭ ತಿಳಿಸಿದರು. ಮಹಿಳೆಯರು ಮತ್ತು ಪುರು ಷರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ, ಮೂಲ ಭೂತ ಸೌಲಭ್ಯಗಳಾದ ಕುಡಿಯುವ ನೀರು ಮತ್ತು ವಿದ್ಯುತ್ ಸೌಲಭ್ಯ ನೀಡಲು ಕ್ರಮ ಕೈಗೊಳ್ಳಲಾಗಿದೆ. ಬಸ್ ನಿಲ್ದಾಣದ ವಾಣಿಜ್ಯ ಮಳಿಗೆಗಳ ಟೆಂಡರ್ ಪ್ರಕ್ರಿ ಯೆಗೂ ಚಾಲನೆ ನೀಡ ಲಾಗಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.

ಏಕಕಾಲಕ್ಕೆ ರಸ್ತೆ ವಿಸ್ತರಣೆಯಾಗಲಿ: ರಾಜಾ ಸೀಟ್ ಬಳಿಯಿಂದ ನೂತನ ಬಸ್ ನಿಲ್ದಾ ಣದ ವರೆಗಿನ ರಸ್ತೆಯ ಇಕ್ಕೆಲಗಳಲ್ಲೂ ಏಕಕಾಲಕ್ಕೆ ರಸ್ತೆ ಅಗಲೀಕರಣ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು ಮತ್ತು ತಡೆಗೋಡೆ ನಿರ್ಮಿಸಬೇಕು. ಒಂದೇ ಭಾಗದಲ್ಲಿ ಅಗಲೀ ಕರಣ ಕಾರ್ಯ ಕೈಗೊಂಡರೆ ಸಾರ್ವಜನಿಕ ವಲಯದಲ್ಲಿ ಮತ್ತು ಕಟ್ಟಡ ಮಾಲೀಕರಲ್ಲಿ ಗೊಂದಲ ಸೃಷ್ಟಿಯಾಗುತ್ತದೆ. ಅಲ್ಲದೆ ತಡೆ ಗೋಡೆ ನಿರ್ಮಾಣವಾಗದಿದ್ದಲ್ಲಿ ಅಪಾಯ ಎದುರಾಗಬಹುದು. ಬಸ್ ನಿಲ್ದಾಣಕ್ಕೆ ಮೇಲ್ಚಾವಣಿ ಅಳವಡಿಸಬೇಕು. ಈ ಕಾರ್ಯ ಗಳು ಪೂರ್ಣಗೊಂಡ ನಂತರವಷ್ಟೆ ಬಸ್ ನಿಲುಗಡೆಗೆ ಅವಕಾಶ ಕಲ್ಪಿಸಬೇಕೆಂದು ನಗರಸಭೆಯ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಸಲಹೆ ನೀಡಿದ್ದಾರೆ.

ರಾಜಾಸೀಟು ಮಾರ್ಗ ಸೂಕ್ತವಲ್ಲ: ರಾಜಾ ಸೀಟು ಮಾರ್ಗದ ಮೂಲಕ ನೂತನ ಖಾಸಗಿ ಬಸ್ ನಿಲ್ದಾಣ ಸೇರುವ ಬಸ್‍ಗಳು ಕೈಗಾ ರಿಕಾ ಬಡಾವಣೆ ಮೂಲಕ ಮರಳುವಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮಾರ್ಗವನ್ನು ತಯಾರಿಸಿದೆ. ಆದರೆ ಈ ಮಾರ್ಗ ಅವೈಜ್ಞಾನಿಕವಾಗಿದೆ ಎಂದು ಅಭಿ ಪ್ರಾಯಪಟ್ಟಿರುವ ಕೊಡಗು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ಕೈಗಾರಿಕಾ ಬಡಾ ವಣೆ ಮೂಲಕವೇ ಬಸ್‍ಗಳ ಆಗಮನ ಮತ್ತು ನಿರ್ಗಮನದ ಮಾರ್ಗವನ್ನು ತಯಾರಿ ಸುವುದು ಸೂಕ್ತವೆಂದು ಸಲಹೆ ನೀಡಿದ್ದಾರೆ.

ಬಸ್‍ಗಳ ಸಂಚಾರ ಮಾರ್ಗವನ್ನು ಆಧ ರಿಸಿ ಪ್ರತಿದಿನ 170 ಕೆಎಸ್‍ಆರ್‍ಟಿಸಿ ಹಾಗೂ 160 ಖಾಸಗಿ ಬಸ್‍ಗಳು ಸೇರಿ ದಂತೆ ಸುಮಾರು 350 ಬಸ್‍ಗಳು ಪ್ರತಿ ಮೂರು ನಿಮಿಷಕ್ಕೆ ಒಂದರಂತೆ ಸಂಚರಿಸು ವುದರಿಂದ ಈ ಸಾಮಥ್ರ್ಯವನ್ನು ತಡೆದು ಕೊಳ್ಳುವ ಶಕ್ತಿ ರಾಜಾಸೀಟು ರಸ್ತೆಗೆ ಇಲ್ಲ ವೆಂದು ಅಭಿಪ್ರಾಯಪಟ್ಟಿದ್ದಾರೆ. ರಸ್ತೆ ಕಡಿ ದಾಗಿರುವುದಲ್ಲದೆ, ಭಾರೀ ವಾಹನಗಳ ಸಂಚಾ ರದಿಂದ ಕೆಲವೇ ದಿನಗಳಲ್ಲಿ ಗುಂಡಿ ಗಳಾಗಿ ಬಸ್ ಸಂಚಾರ ಅಸಾಧ್ಯವಾಗ ಲಿದೆ ಎಂದು ರಮೇಶ್ ಜೋಯಪ್ಪ ಅಭಿ ಪ್ರಾಯಪಟ್ಟಿದ್ದಾರೆ. ರಾಜಾಸೀಟ್‍ನಲ್ಲಿ ಪ್ರವಾಸಿ ಗರ ಸಂಖ್ಯೆ ಹೆಚ್ಚು ಇದ್ದಾಗ ಮತ್ತು ಕಾವೇರಿ ಹಾಲ್‍ನಲ್ಲಿ ಮದುವೆ ಸಮಾರಂಭಗಳು ನಡೆಯುವ ಸಂದರ್ಭ ವಾಹನದಟ್ಟಣೆ ಹೆಚ್ಚಾಗಿ ಅಪಾಯ ಸಂಭವಿಸುವ ಸಾಧ್ಯ ತೆಗಳಿದೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿರುವ ಅವರು, ನೂತನ ಖಾಸಗಿ ಬಸ್ ನಿಲ್ದಾಣ ಪ್ರಸ್ತುತ ಸೂಕ್ತವಲ್ಲದಿದ್ದರೂ ಅನಿವಾರ್ಯವಾಗಿ ಅದೇ ಬಸ್ ನಿಲ್ದಾಣ ವನ್ನು ನಾವು ಆಶ್ರಯಿಸಬೇಕಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ರಾಜಾಸೀಟು ರಸ್ತೆ ಹೊರತು ಪಡಿಸಿ ದಂತೆ ಪರ್ಯಾಯ ಮಾರ್ಗವನ್ನು ಗುರು ತಿಸಲು ಈಗಾಗಲೇ ಸಂಘದ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಸೂಕ್ತ ಮಾರ್ಗ ಸೂಚಿಸಿದ ನಂತರವಷ್ಟೇ ಬಸ್ ಗಳನ್ನು ನೂತನ ನಿಲ್ದಾಣದಲ್ಲಿ ನಿಲುಗಡೆ ಗೊಳಿಸಲು ನಮ್ಮಿಂದ ಸಾಧ್ಯವಾಗುತ್ತದೆ ಎಂದು ರಮೇಶ್ ಜೋಯಪ್ಪ ಸ್ಪಷ್ಟಪಡಿಸಿ ದರು. ರಸ್ತೆಗಳ ಪುನರ್ ಸರ್ವೆಗೆ ಜಿಲ್ಲಾಧಿಕಾ ರಿಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದು ಅವರು ಇದೇ ಸಂದರ್ಭ ತಿಳಿಸಿದರು.

ಒಟ್ಟಿನಲ್ಲಿ ಸಾರ್ವಜನಿಕರ ಹಲವು ವರ್ಷ ಗಳ ಬೇಡಿಕೆಯಾಗಿದ್ದ ನೂತನ ಖಾಸಗಿ ಬಸ್ ನಿಲ್ದಾಣ ಉದ್ಘಾಟನೆಗೊಂಡು ವರ್ಷ ಸಮೀಪಿಸುತ್ತಿದ್ದರು ಸೂಕ್ತ ಮಾರ್ಗವನ್ನು ಸೂಚಿಸಲಾಗದ ಅಸಹಾಯಕ ಸ್ಥಿತಿಯಲ್ಲಿ ಮಡಿಕೇರಿ ನಗರಸಭೆ ಇದೆ. ಸುಮಾರು 4.80 ಕೋಟಿ ರೂ. ವೆಚ್ಚ ಮಾಡಿ ನಿರ್ಮಿಸಿರುವ ಬಸ್ ನಿಲ್ದಾಣಕ್ಕೆ ಮೇಲ್ಚಾವಣಿಯನ್ನು ಅಳ ವಡಿಸಲು ಮತ್ತೆ 2 ಕೋಟಿ ರೂ.ಗಳನ್ನು ಸುರಿಯಲು ಚಿಂತನೆ ನಡೆದಿದೆ. ಒಟ್ಟಿನಲ್ಲಿ ಮುಂದಾಲೋಚನೆ ಇಲ್ಲದೆ ಯೋಜನೆ ಯನ್ನು ರೂಪಿಸುತ್ತಿರುವ ನಗರಸಭೆ ಸಾರ್ವಜನಿಕರ ಹಣವನ್ನು ಪೋಲು ಮಾಡ ಲಷ್ಟೇ ಸಫಲವಾಗುತ್ತಿದೆ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. ಇದೀಗ ಪ್ರತಿ ಮೂರು ನಿಮಿಷಕ್ಕೊಂದು ಬಸ್ ಸಂಚರಿಸಬಹುದಾದ ಮಾರ್ಗ ವನ್ನು ಸೂಚಿಸುವ ಕಾರ್ಯ ನಗರಸಭೆಗೆ ಕಗ್ಗಂಟಾಗಿ ಪರಿಣಮಿಸಿದೆ.

Translate »